For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬ್ ನಲ್ಲಿ ಭಾರಿ ಸೌಂಡ್ ಮಾಡಿದ 'ನನ್ ಲೈಫಲ್ಲಿ'

  By Rajendra
  |

  ಈ ಚಿತ್ರದ ಬಗ್ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾತನಾಡುತ್ತಾ, ನನ್ ಲೈಫಲ್ಲಿ ನಾನು ಯಾವಾಗಲೂ ಸಂತೋಷವಾಗಿರ್ತೀನಿ, ಖುಷಿ ಖುಷಿಯಾಗಿರ್ತೀನಿ. ಇವನ ಲೈಫಲ್ಲಿ ಏನಾಗುತ್ತೆ ನೋಡೋಣ, ಅದೇ 'ನನ್ ಲೈಫಲ್ಲಿ' ಎಂದು ಮೆಚ್ಚುಗೆ ಮಾತುಗಳನ್ನು ಆಡಿ ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ.

  ಈ ಚಿತ್ರದ ಟ್ರೇಲರ್ ಆರಂಭವಾಗುವುದೇ ಪುನೀತ್ ಅವರ ಮೇಲಿನ ಮಾತುಗಳ ಮೂಲಕ. ಹೊಸಬರ ಹೊಸ ಪ್ರಯತ್ನವೇ 'ನನ್ Life ಅಲ್ಲಿ' ಚಿತ್ರ. ಈಗ ಈ ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ 54,000 ಕ್ಲಿಕ್ಸ್ ಸಿಕ್ಕಿವೆ. ಇಷ್ಟಕ್ಕೂ ಅಂತಹದ್ದೇನಿದೆ ಈ ಟ್ರೇಲರ್ ನಲ್ಲಿ ನೀವೇ ನೋಡಿ.

  ಈ ಹಿಂದೆ ಪೊಲೀಸ್ ಕ್ವಾರ್ಟಸ್ ಹಾಗೂ ನಮ್ ಏರಿಯಾಲ್ ಒಂದಿನಾ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಅನೀಶ್ ತೇಜಸ್ವರ್ ಮೂರನೇ ಚಿತ್ರವಿದು. ತಮ್ಮ ಮೂರನೇ ಇನ್ನಿಂಗ್ಸ್ ನಲ್ಲಿ ಖಂಡಿತ ಗೆಲ್ಲುತ್ತೇನೆ ಎಂಬ ಭರವಸೆಯಲ್ಲಿದ್ದಾರೆ ಅನೀಶ್. ಚಿತ್ರದ ನಾಯಕಿ ಕ್ಯೂಟ್ ಬೆಡಗಿ ಸಿಂಧು ಲೋಕನಾಥ್.

  ರಾಮ್ ದೀಪ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಹೊಸತನಕ್ಕೆ, ವಿಭಿನ್ನತೆಗೆ ಹಾತೊರೆಯುತ್ತಿರು ಪ್ರೇಕ್ಷಕರನ್ನು ತಮ್ಮ ಚಿತ್ರ ಖಂಡಿತ ನಿರಾಶೆಪಡಿಸಲ್ಲ ಎಂಬ ಭರವಸೆಯಲ್ಲಿ ಚಿತ್ರತಂಡವಿದೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.

  ಚಿತ್ರವು ತಾಂತ್ರಿಕವಾಗಿಯೂ ಪ್ರೌಢವಾಗಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ, ಮನೋಹರ್ ಜೋಶಿ ಅವರ ಛಾಯಾಗ್ರಹಣ ಹಾಗೂ ಲೋಕೇಶ್ ಅವರ ಸಹಾಯಕ ನಿರ್ದೇಶನ ಕಮ್ ಚಿತ್ರಕಥೆ ಚಿತ್ರಕ್ಕಿದೆ. ನಿವೇದಿತಾ, ವೆಂಕಟೇಶ್ ಬಾಬು, ಅನಿಲ್ ಯುವರಾಜ್ ಮತ್ತು ಜೈಪಾಲ್ ಚಿತ್ರದ ನಿರ್ಮಾಪಕರು. (ಒನ್ಇಂಡಿಯಾ ಕನ್ನಡ)

  English summary
  Kannada film 'Nan Lifealli' trailer rocks on Youtube. The trailer has got about 54,000 views on YouTube on first day. Anish Tejeshwar and Sindhu Loknath are in the lead, written & directed by Ramdeep. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X