»   » 25 ವರ್ಷದ ನಂತರ ಮತ್ತೆ 'ಮುತ್ತಿನ ಹಾರ'

25 ವರ್ಷದ ನಂತರ ಮತ್ತೆ 'ಮುತ್ತಿನ ಹಾರ'

Written By:
Subscribe to Filmibeat Kannada

'ಮುತ್ತಿನ ಹಾರ'.....1990 ರಲ್ಲಿ ಡಾ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ. ಇದೀಗ 25 ವರ್ಷದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಈ 'ಮುತ್ತಿನ ಹಾರ' ನೆನಪಾಗುತ್ತಿದೆ.

ಇದಕ್ಕೆ ಕಾರಣ, 'ಮುತ್ತಿನ ಹಾರ' ಎಂಬ ಹೆಸರಿನಲ್ಲೇ ಸೆಟ್ಟೇರಿರುವ ಹೊಸ ಚಿತ್ರ. ಹೌದು, 'ಮುತ್ತಿನ ಹಾರ' ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಮುಹೂರ್ತವನ್ನ ಮಾಡಿಕೊಂಡಿದೆ.[ಬಣ್ಣ ಹಚ್ಚಿದ ಜಿ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ]

ಈ ಹೊಸ ಚಿತ್ರದ ವಿಶೇಷ ಅಂದ್ರೆ, 'ಮುತ್ತಿನ ಹಾರ' ಚಿತ್ರದಲ್ಲಿ ಅಭಿನಯಿಸಿದ್ದ ವಿಷ್ಣುವರ್ಧನ್ ಅವರ ಪಾತ್ರ, ಈ ಚಿತ್ರದಲ್ಲಿ ನೆನಪಾಗಲಿದೆಯಂತೆ. ಇನ್ನೂ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ನಟ ಚಿರಂಜೀವಿ ಸರ್ಜಾ, ಲಹರಿ ವೇಲು, ನಿರ್ಮಾಪಕ ಕೆ.ಮಂಜು ಸೇರಿದಂತೆ ಹಲವರು ಆಗಮಿಸಿದ್ದರು. ಮುಂದೆ ಓದಿ....

ಚಿರಂಜೀವಿ ಸರ್ಜಾ ಕ್ಲಾಪ್

'ಮುತ್ತಿನ ಹಾರ' ಚಿತ್ರದ ಫಸ್ಟ್ ಶಾರ್ಟ್ ಗೆ ನಟ ಚಿರಂಜೀವಿ ಸರ್ಜಾ ಕ್ಲಾಪ್ ಮಾಡಿ ಶುಭಾ ಹಾರೈಸಿದರು.

ಹಳೇ 'ಮುತ್ತಿನ ಹಾರ' ಚಿತ್ರದ ಛಾಯೆ

ಅಂದ್ಹಾಗೆ, ಹಳೆ 'ಮುತ್ತಿನ ಹಾರ' ಚಿತ್ರಕ್ಕೂ ಹಾಗೂ ಹೊಸ 'ಮುತ್ತಿನ ಹಾರ' ಚಿತ್ರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಆದ್ರೆ, ಅಲ್ಲಿನ ಪಾತ್ರಗಳು ನೆನಪಾಗುವಂತಹ ಸನ್ನಿವೇಶಗಳು, ಪಾತ್ರಗಳು ಈ ಚಿತ್ರದಲ್ಲಿ ಇರಲಿದೆಯಂತೆ.

ನಾಯಕ ಯಾರು?

ಚಿತ್ರದ ನಾಯಕನಾಗಿ ಪೃಥ್ವಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪೃಥ್ವಿ ಅಭಿನಯಿಸಿರುವ 'ನಾನು ಮತ್ತು ವರಲಕ್ಷ್ಮಿ' ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಮೊದಲ ಚಿತ್ರದ ಬಿಡುಗಡೆಗೂ ಮುಂಚೆನೇ ಈಗ ಎರಡನೇ ಚಿತ್ರದಲ್ಲಿ ಪೃಥ್ವಿ ನಾಯಕನಾಗಿದ್ದಾರೆ.['ನಾನು ಮತ್ತು ವರಲಕ್ಷ್ಮಿ' ಸ್ಯಾಂಡಲ್ ವುಡ್ ನ ಮೊದಲ ಬೈಕ್ ರೇಸಿಂಗ್ ಸಿನಿಮಾ..!]

ನಾಯಕಿ ಯಾರು?

'ಮುತ್ತಿನ ಹಾರ' ಚಿತ್ರದ ನಾಯಕಿ ಬಾಂಬೆ ಹುಡುಗಿ ಆಕಾಂಕ್ಷ ಪೂಜಾರಿ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಆಕಾಂಕ್ಷಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ.

ಡಾ.ವಿಷ್ಣುವರ್ಧನ್ ಹೆಸರು

ಕತೆಯಲ್ಲಿ ನಾಯಕ ಸೇನಾಧಿಕಾರಿಯ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆ ಪಾತ್ರಕ್ಕೆ ಡಾ. ವಿಷ್ಣುವರ್ಧನ್ ಅವರು ಹೆಸರನ್ನ ಬಳಸಲಾಗುತ್ತಿದೆ. 'ಮುತ್ತಿನ ಹಾರ' ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಆರ್ಮಿ ಆಫೀಸರ್ ಆಗಿ ಅಭಿನಯಿಸಿದ್ದರು. ಈಗ ಈ ಚಿತ್ರದಲ್ಲೂ ಅದೇ ವಿಷ್ಣುವರ್ಧನ್ ಅವರು ಭಾವಚಿತ್ರವನ್ನ ಬಳಸಲಾಗುತ್ತಿದೆ.

ವಿಷ್ಣುವರ್ಧನ್ ಫೋಸ್ಟರ್ ರಿಲೀಸ್

ಹೊಸ 'ಮುತ್ತಿನ ಹಾರ' ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಭಾವಚಿತ್ರದ ಪೋಸ್ಟರ್ ಅನಾವರಣ ಮಾಡಲಾಯಿತು. ಮುತ್ತಿನ ಹಾರ' ಮೂಲ ಚಿತ್ರದ ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಅವರ ಮಗಳು ರಿಷಿಕಾ ಸಿಂಗ್ ಈ ಪೋಸ್ಟರ್ ಅನಾವರಣಗೊಳಿಸಿದರು.

ನಿರ್ದೇಶಕ ಯಾರು?

ಮೈಸೂರು ಮೂಲದ ರಿಷಿ.ಬಿ.ರಾಮಯ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಿರುಚಿತ್ರಗಳು ಹಾಗೂ ಕೆಲ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಿಷಿಗೆ ಇದು ಚೊಚ್ಚಲ ಸಿನಿಮಾ.

ನಿರ್ಮಾಣ ಯಾರು?

ಸಿಂಧೂರ ಕ್ರಿಯೇಷನ್ಸ್ ಪ್ರೈ.ಲಿ ಸಂಸ್ಥೆಯಡಿ ಈ ಚಿತ್ರವನ್ನ ನಿರ್ಮಾಣ ಮಾಡಲಾಗುತ್ತಿದೆ.

ಸಂಗೀತ ಯಾರು?

'ಮುತ್ತಿನ ಹಾರ' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಲಿದ್ದು, ಹಳೆ ಚಿತ್ರದಂತೆ ಈ ಚಿತ್ರದಲ್ಲೂ ಹಾಡುಗಳು ಹಿಟ್ ಆಗಲಿವೆ ಎಂಬುದು ಚಿತ್ರತಂಡದ ನಿರೀಕ್ಷೆ.

ಯಾವಾಗ ಶೂಟಿಂಗ್?

ಉಳಿದಂತೆ ಚಿತ್ರದಲ್ಲಿ ರವಿಶಂಕರ್, ಬುಲೆಟ್ ಪ್ರಕಾಶ್, ಕಡ್ಡಿಪುಡಿ ಚಂದ್ರು ಸೇರಿದಂತೆ ಕೆಲ ಸ್ಟಾರ್ ಕಲಾವಿದರು ಅತಿಥಿ ಪಾತ್ರ ನಿರ್ವಹಿಸಿಲಿದ್ದಾರೆ. ಶೇಕಡಾ 80% ಭಾಗ ಬೆಂಗಳೂರು, ಹಾಗೂ ಗೋವಾ, ಮಂಗಳೂರು ಸುತ್ತಾಮುತ್ತಾ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದೆ.

English summary
Prithvi's debut film 'Naanu Mattu Varalakshmi' is all set to be released next week. Meanwhile, his second film 'Muthina Hara' was launched. The film is being directed by debutante Rishi Ramaiah and produced under the Sindhura Creations banner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada