For Quick Alerts
  ALLOW NOTIFICATIONS  
  For Daily Alerts

  ವಿಷ್ಣುವರ್ಧನ್ ಅವರ ಚಿತ್ರದ ಟೈಟಲ್ ನಲ್ಲಿ ಮತ್ತೆ ಸಿನಿಮಾ.!

  By Bharath Kumar
  |
  ದಾದಾ ಅಭಿನಯಿಸಿದ್ದ ಹಿಟ್ ಸಿನಿಮಾ ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ಬರ್ತಿದೆ..! | Oneindia Kannada

  ಕನ್ನಡದ ಲೆಜೆಂಡ್ ನಟರು ಅಭಿನಯಿಸಿದ್ದ ಸಿನಿಮಾಗಳು ಮತ್ತು ಸೂಪರ್ ಹಿಟ್ ಆದ ಚಿತ್ರಗಳ ಶೀರ್ಷಿಕೆಯನ್ನ ಬಳಸಿಕೊಂಡು ಮತ್ತೆ ಸಿನಿಮಾ ಮಾಡುವುದು ಕನ್ನಡದಲ್ಲಿ ಹೊಸ ಟ್ರೆಂಡ್. ಇದೀಗ, ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯಿಸಿದ್ದ ಹಳೆಯ ಚಿತ್ರದ ಟೈಟಲ್ ನಲ್ಲಿ ಮತ್ತೊಮ್ಮೆ ಸಿನಿಮಾ ಬರ್ತಿದೆ.

  ಈಗಾಗಲೇ ವಿಷ್ಣುದಾದ ಅಭಿನಯಿಸಿದ್ದ ಹಲವು ಚಿತ್ರಗಳ ಟೈಟಲ್ ಬಳಸಿ ಹೊಸದಾಗಿ ಚಿತ್ರ ಮಾಡಲಾಗಿದೆ. ಈಗ ವಿಷ್ಣುವರ್ಧನ್ ಅವರ ಇನ್ನೊಂದು ಸಿನಿಮಾ ಶೀರ್ಷಿಕೆ ಮರುಬಳಕೆ ಮಾಡಲಾಗುತ್ತಿದೆ. ಆ ಚಿತ್ರದ ಹೆಸರು ನಿಷ್ಕರ್ಷ.

  'ನಿಷ್ಕರ್ಷ' ಶೀರ್ಷಿಕೆಯ ನೂತನ ಚಿತ್ರ ಆಗಸ್ಟ್ 20ರಿಂದ ಆರಂಭವಾಗುತ್ತಿದೆ. ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಲಿದ್ದಾರೆ.

  1993ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾವನ್ನ ಖ್ಯಾತ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡಿದ್ದರು. ಥ್ರಿಲ್ಲಿಂಗ್ ಕಥಾಹಂದರ ಹೊಂದಿದ್ದ 'ನಿಷ್ಕರ್ಷ' ಚಿತ್ರ ಜನಮನಸೂರೆಗೊಂಡಿತ್ತು. ಈಗ ಹಿಮಾದ್ರಿ ಪ್ರೊಡಕ್ಷನ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸುತ್ತಿದೆ.

  ಮನೋರಂಜನೆ, ಥ್ರಿಲ್ಲರ್, ಕುತೂಹಲ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಸಿ.ಎಂ.ವಿಜಯ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ರಾಜಸ್ಥಾನದಲ್ಲಿ ಚಿತ್ರಕ್ಕೆ 40 ದಿನಗಳ ಚಿತ್ರೀಕರಣ ನಡೆಯಲಿದೆ.

  ಮೂರು ಹಾಡುಗಳಿರುವ ಈ ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಭರ್ಜರಿ ಚೇತನ್ ಹಾಗೂ ಎ.ಪಿ.ಅರ್ಜುನ್ ಹಾಡುಗಳನ್ನು ಬರೆದಿದ್ದಾರೆ. ಜಿ.ಎನ್.ಸರವಣನ್ ಛಾಯಾಗ್ರಹಣ, ಎ.ಹರ್ಷ, ಮುರಳಿ ನೃತ್ಯ ನಿರ್ದೆಶನ, ವಿನೋದ್ ಸಾಹಸ ನಿರ್ದೇಶನ, ನರಸಿಂಹ ಜಾಲಹಳ್ಳಿ ನಿರ್ಮಾಣ ನಿರ್ವಹಣೆ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

  Kannada New movie nishkarsha will launch on august 20th

  ಅನಿಕೇತನ್ ಅವರು ನಾಯಕನಟನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ದಿವ್ಯ ಉರುಡಗ. ಇವರ ಜೊತೆ ಅನಂತನಾಗ್, ಸಾಯಿಕುಮಾರ್, ಕಿಶೋರ್, ಚಿಕ್ಕಣ್ಣ, ವಿಜಯ್‍ ಪ್ರೀತು, ನಾಗಭೂಷಣ್, ಅಚ್ಯುತಕುಮಾರ್, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  English summary
  Kannada New movie nishkarsha will launch on august 20th. the movie directed by cm vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X