»   » ಚಿತ್ರರಂಗದಿಂದ 'ಕರ್ನಾಟಕ ಬಂದ್'ಗೆ ಆಕ್ಷೇಪ ವ್ಯಕ್ತಪಡಿಸಿದ ಕೆ.ಮಂಜು

ಚಿತ್ರರಂಗದಿಂದ 'ಕರ್ನಾಟಕ ಬಂದ್'ಗೆ ಆಕ್ಷೇಪ ವ್ಯಕ್ತಪಡಿಸಿದ ಕೆ.ಮಂಜು

Posted By:
Subscribe to Filmibeat Kannada

ಉತ್ತರ ಕರ್ನಾಟಕದ 'ಮಹದಾಯಿ' ಹೋರಾಟಕ್ಕೆ ಬೆಂಬಲ ಸೂಚಿಸಿ ಶನಿವಾರ (ಜುಲೈ 30) ದಂದು ಚಿತ್ರೋದ್ಯಮ ಹಾಗೂ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಕರೆ ನೀಡಿತ್ತು.

ಈ ಬಗ್ಗೆ ಅಕಾಡೆಮಿ ಅಧ್ಯಕ್ಷ ಸಾರಾ ಗೋವಿಂದು ಅವರು ಕೂಡ ಕಚೇರಿಯಲ್ಲಿ ಸಭೆ ನಡೆಸಿ ಹೋರಾಟಕ್ಕೆ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ಕೋರಿಕೊಂಡಿದ್ದರು.

'ಮಹದಾಯಿ' ಮಧ್ಯಂತರ ತೀರ್ಪಿನಿಂದಾಗಿ ಇಡೀ ಕರ್ನಾಟಕವೇ ಹೊತ್ತಿ ಉರಿಯುತ್ತಿದ್ದು, ಹಲವಾರು ಸಂಘಟನೆಗಳು ರಸ್ತೆಗಿಳಿದು ಹೋರಾಟ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಇವರೆಲ್ಲರ ಹೋರಾಟಕ್ಕೆ ಬೆಂಬಲ ಸೂಚಿಸುವ ಹಿನ್ನಲೆಯಲ್ಲಿ ಕನ್ನಡ ಚಿತ್ರರಂಗ ಕೂಡ ಹೋರಾಟ ಮಾಡಲು ನಿರ್ಧಾರ ತಳೆದಿದೆ.[ಜುಲೈ 30 ಕರ್ನಾಟಕ ಬಂದ್: ರಸ್ತೆಗಿಳಿಯಲಿರುವ ಕನ್ನಡ ಚಿತ್ರರಂಗ]

ಆದರೆ ಇದೀಗ ನಿರ್ಮಾಪಕ ಕೆ.ಮಂಜು ಅವರು ಕರ್ನಾಟಕ ಬಂದ್ ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ನಿರ್ಮಾಪಕ ಮಂಜು ಅವರು ಯಾಕೆ ಇದಕ್ಕೆ ಬೆಂಬಲ ಸೂಚಿಸುತ್ತಿಲ್ಲ ಅನ್ನೋ ಬಗ್ಗೆ ಮಾಹಿತಿಗಾಗಿ ಸ್ಲೈಡ್ಸ್ ಕ್ಲಿಕ್ಕಿಸಿ.....

ಬಂದ್ ಬೇಡ ಎಂದ ನಿರ್ಮಾಪಕ ಕೆ ಮಂಜು

ಸಾರಾ ಗೋವಿಂದು ಅವರು ಚಿತ್ರರಂಗದಿಂದ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ, ಜುಲೈ 30ರಂದು ಇಡೀ ಸ್ಯಾಂಡಲ್ ವುಡ್ ಮಂದಿ ರೈತರ ಪರ ಬೀದಿಗಿಳಿದು ಹೋರಾಟ ನಡೆಸಲು ನಿರ್ಧರಿಸಿದೆ. ಆದರೆ ಇದಕ್ಕೆ ನಿರ್ಮಾಪಕ ಮಂಜು ಆಕ್ಷೇಪ ಮಾಡಿದ್ದಾರೆ. ಯಾಕೆ ಅನ್ನೋದನ್ನು ನೋಡಿ ಮುಂದಿನ ಸ್ಲೈಡ್ಸ್ ನಲ್ಲಿ...

'ಬಂದ್' ಮಾಡಿದ್ರೆ ಸಮಸ್ಯೆ ತೀರೋಲ್ಲ

'ಅಷ್ಟಕ್ಕೂ ಬಂದ್ ಮಾಡಿ ನಾವು ರೈತರಿಗೆ ಬೆಂಬಲ ಸೂಚಿಸಿದರೆ ಸಮಸ್ಯೆ ಬಗೆ ಹರಿಯುವುದಿಲ್ಲ. ಮಾತ್ರವಲ್ಲದೇ ರೈತರಿಗೆ ನೀರು ಕೂಡ ಸಿಗೋದಿಲ್ಲ". ಎನ್ನುತ್ತಾರೆ ನಿರ್ಮಾಪಕ ಮಂಜು ಅವರು.['ನಾನೇನು ಮಾಲಾಶ್ರೀ ಮನೆ ಕೆಲಸದವನಾ' ಎಂದ ಕೊಬ್ರಿ ಮಂಜು.!]

ದೆಹಲಿ ಚಲೋ ಮಾಡೋಣ

'ರಾಜ್ಯದ ರೈತರ ಬೆಂಬಲಕ್ಕೆ ಚಿತ್ರೋದ್ಯಮ ಸದಾ ಇರುತ್ತೆ. ಇಲ್ಲಿ ಕುಳಿತು ಸುಮ್ಮನೆ ಕರ್ನಾಟಕ ಬಂದ್ ಮಾಡ್ತಾ ಕುಳಿತರೆ ಏನೂ ಪ್ರಯೋಜನ ಆಗಲ್ಲ. ಅದರ ಬದಲಾಗಿ ದೆಹಲಿಗೆ ಹೋಗಿ 'ದೆಹಲಿ ಚಲೋ' ಅಂತ ಪ್ರತಿಭಟನೆ ಮಾಡಿದ್ರೆ ಚೆನ್ನಾಗಿರುತ್ತೆ' ಎಂದು ಕೆ ಮಂಜು ಅವರು ಚಿಕ್ಕಬಳ್ಳಾಪುರದಲ್ಲಿ ತಿಳಿಸಿದ್ದಾರೆ.

ಮೋದಿಗೆ ಸಮಸ್ಯೆ ಮುಟ್ಟಿಸುವ ಪ್ರಯತ್ನ

'ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವ ಮೂಲಕ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರಿಗೆ ಸಮಸ್ಯೆಯನ್ನು ಮುಟ್ಟಿಸುವ ಪ್ರಯತ್ನವನ್ನು ಮಾಡಬಹುದು ಜೊತೆಗೆ ಈ ಮೂಲಕನಾದ್ರೂ ಆ ಕೆಲಸ ಮುಖ್ಯವಾಗಿ ಆಗಬೇಕು' ಎಂದು ಮಂಜು ಅವರು ಖಡಕ್ ಆಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.[ಮಾಲಾಶ್ರೀ ಆಪಾದನೆಗಳಿಗೆ ಉತ್ತರಿಸಲು ಕೆ.ಮಂಜು ಸಿದ್ಧ.!]

ಅಭಿಮಾನಿಗಳ ಬಳಗ ಬಂದ್ ಗೆ ಕರೆ

ರೈತರ ಪರವಾಗಿ ಹೋರಾಟ ನಡೆಸಲು ಸ್ಟಾರ್ ನಟರ ಅಭಿಮಾನಿ ಬಳಗದವರು ಎಲ್ಲರಿಗೂ ಭಾಗವಹಿಸಲು ಕರೆ ನೀಡಿದ್ದು, ಈ ಹೋರಾಟದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು ಭಾಗವಹಿಸುವ ಸಂಭವವಿದೆ. ಕಳೆದ ವರ್ಷ ಕೂಡ ರೈತರ ಪರ ನೀರಿಗಾಗಿ ಇಡೀ ಚಿತ್ರರಂಗವೇ ಬೀದಿಗಿಳಿದು ಹೋರಾಟ ನಡೆಸಿತ್ತು.

English summary
Kannada Producer K Manju speaks about Mahadayi Verdict and Sandalwood bandh on July 30th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada