For Quick Alerts
  ALLOW NOTIFICATIONS  
  For Daily Alerts

  'ಹುಚ್ಚ' ಸಹ ನಿರ್ಮಾಪಕ ಮಹ್ಮದ್ ಮುಸ್ತಾಫಾ ಬಂಧನ

  By Mahesh
  |

  ಹುಚ್ಚ, ಯಜಮಾನ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ ರೆಹಮಾನ್ ಅವರ ಸಂಬಂಧಿ ಹಾಗೂ ಸಹ ನಿರ್ಮಾಪಕ ಮಹಮ್ಮದ್ ಮುಸ್ತಫಾ ಅವರನ್ನು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

  ಚಿತ್ರ ನಿರ್ಮಾಪಕ ಮಹಮ್ಮದ್ ಮುಸ್ತಫಾ ವಿರುದ್ಧ ಅವರ ಎರಡನೇ ಪತ್ನಿ ಸಿದ್ದಿಕಿ ಭಾನು ಅವರು ದೂರು ನೀಡಿದ್ದರು. ಚಿತ್ರದುರ್ಗ ಮೂಲದ ಮುಸ್ತಫಾ ಅವರನ್ನು ಮೈಸೂರಿನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ಅಶೋಕ ನಗರ ಮಹಿಳಾ ಪೊಲೀಸ್ ಠಾಣೆ ವಿಚಾರಣೆ ನಡೆಸುತ್ತಿದ್ದಾರೆ.

  ಮೊದಲ ಪತ್ನಿ ಮೃತಪಟ್ಟ ಮೇಲೆ ಸುಮಾರು 11 ವರ್ಷದ ಹಿಂದೆ ಸಿದ್ದಿಕಿ ಭಾನು ಅವರನ್ನು ಮುಸ್ತಫಾ ಅವರು ಮದುವೆಯಾಗಿದ್ದರು. ದಂಪತಿ ಒಂದು ಮಗು ಸಹ ಇದೆ. ಹಿಟ್ ಚಿತ್ರಗಳನ್ನು ನೀಡಿದರೂ ಮುಸ್ತಫಾ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಸಿದ್ದಿಕಿ ಕುಟುಂಬದವರು ದೂರಿದ್ದಾರೆ.

  ಹುಚ್ಚ, ಯಜಮಾನದಂಥ ಸೂಪರ್ ಹಿಟ್ ಚಿತ್ರ ನೀಡಿದ ಮೇಲೆ ಮುಸ್ತಫಾ ಅವರ ಕೈಲಿ ಸಾಕಷ್ಟು ಹಣ ಓಡಾಡಿತ್ತು. ಆದರೂ ಪತ್ನಿಯನ್ನು ಹಣಕ್ಕಾಗಿ ಪೀಡಿಸಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನನ್ನ ಜೊತೆ ಕೆಲಸ ಮಾಡುವಾಗ ಚೆನ್ನಾಗಿ ನಡೆದುಕೊಂಡಿದ್ದರು. ಅವರ ಕುಟುಂಬದ ಬಗ್ಗೆ ಕೂಡಾ ಬಲ್ಲೆ ಎಂದು ಖ್ಯಾತ ನಿರ್ದೇಶಕ ಓಂ ಪ್ರಕಾಶ್ ರಾವ್ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿ

  English summary
  Kannada Producer Mohammad Mustafa arrested in Mysore by Police following a complaint by his second wife Siddiqi Bhanu. Mohammad Mustafa allegedly tortured his wife. Mustafa was co producer to Kannada movies Huchcha, Yajamana

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X