»   » ಸ್ಯಾಂಡಲ್ ವುಡ್ ನಲ್ಲಿ 'ಡಿ.ಕೆ.ರವಿ' ಟೈಟಲ್ ಗೆ ನೂಕುನುಗ್ಗಲು

ಸ್ಯಾಂಡಲ್ ವುಡ್ ನಲ್ಲಿ 'ಡಿ.ಕೆ.ರವಿ' ಟೈಟಲ್ ಗೆ ನೂಕುನುಗ್ಗಲು

By: ಹರಾ
Subscribe to Filmibeat Kannada

ಪ್ರಾಮಾಣಿಕ, ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಇಡೀ ಕರ್ನಾಟಕವನ್ನೇ ಅಲುಗಾಡಿಸುತ್ತಿದೆ. ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದ ಡಿ.ಕೆ.ರವಿ ಅವರ ಸಾವಿನ ತನಿಖೆ ಸಿ.ಬಿ.ಐಗೆ ವಹಿಸಬೇಕು ಅನ್ನುವ ಕೂಗು ಹೆಚ್ಚಾಗುತ್ತಿದೆ.

ಆದ್ರೆ, ಇತ್ತ ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಸನ್ನಿವೇಶವೇ ಬೇರೆ. ಡಿ.ಕೆ.ರವಿ ಅವರ ಸಾವಿನ ಪ್ರಕರಣವನ್ನ ಲಾಭ ಮಾಡಿಕೊಳ್ಳುವುದಕ್ಕೆ ಕೆಲ ನಿರ್ಮಾಪಕರು ಮುಂದಾಗಿದ್ದಾರೆ. ಮುಂದೆ ಓದಿ......

ಡಿ.ಕೆ.ರವಿ ಜೀವನಾಧಾರಿತ ಸಿನಿಮಾ..!

ಫೈಯರ್ ಬ್ರ್ಯಾಂಡ್ ಐಎಎಸ್ ಆಫೀಸರ್ ಡಿ.ಕೆ.ರವಿ ಅವರ ಕಾರ್ಯಕ್ಷಮತೆ ಬಗ್ಗೆ ಎಲ್ಲರಿಗೂ ಗೊತ್ತು. ಬಡ ಕುಟುಂಬದಲ್ಲಿ ಹುಟ್ಟಿ, ಐಎಎಸ್ ಪಾಸ್ ಮಾಡಿದ ಡಿ.ಕೆ.ರವಿ ಯುವ ಪೀಳಿಗೆಗೆ ಮಾದರಿ. ಮರಳು ಮಾಫಿಯಾ ವಿರುದ್ಧ ಸಮರ ಸಾರಿದ್ದ ಡಿ.ಕೆ.ರವಿ ಯಶೋಗಾಥೆಯನ್ನ ಎಲ್ಲಾ ಮಾಧ್ಯಮಗಳಲ್ಲಿ ನೋಡಿರುವ ಕೆಲ ನಿರ್ಮಾಪಕರು, ಡಿ.ಕೆ.ರವಿ ಜೀವನಾಧಾರಿತ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. [ಖಡಕ್ ಆಫೀಸರ್ ರವಿ ಸೂಪರ್ ಟ್ರ್ಯಾಕ್ ರೆಕಾರ್ಡ್]

ಕೆ.ಎಫ್.ಸಿ.ಸಿಯಲ್ಲಿ ಟೈಟಲ್ ರಿಜಿಸ್ಟ್ರೇಷನ್ ಗೆ ದುಂಬಾಲು

ಡಿ.ಕೆ.ರವಿ ಅವರ ಜೀವನ ಚರಿತ್ರೆಯನ್ನ ಸಿನಿಮಾ ಮಾಡಬೇಕು ಅಂತ ಮನಸ್ಸು ಮಾಡಿರುವ ಕೆಲ ನಿರ್ಮಾಪಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಡಿ.ಕೆ.ರವಿ' ಅಂತ ಟೈಟಲ್ ರಿಜಿಸ್ಟರ್ ಮಾಡಿಸುವುದಕ್ಕೆ ದುಂಬಾಲು ಬಿದ್ದಿದ್ದಾರೆ. ಒಟ್ಟೊಟ್ಟಿಗೆ ನಾಲ್ಕೈದು ನಿರ್ಮಾಪಕರು ಡಿ.ಕೆ.ರವಿ ಅವರ ನಿಜ ಬದುಕಿನ ಸಿನಿಮಾ ನಿರ್ಮಾಣ ಮಾಡೋಕೆ ಮುಗಿ ಬಿದ್ದಿದ್ದಾರೆ. [ಮರಣೋತ್ತರ ಪರೀಕ್ಷೆ ವರದಿ :ಡಿಕೆ ರವಿ ಉಸಿರುಗಟ್ಟಿ ಸಾವು]

ಟೈಟಲ್ ಗೆ ಅಡ್ಡಗಾಲು ಹಾಕಿರುವ ಕೆ.ಎಫ್.ಸಿ.ಸಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೂಲಗಳ ಪ್ರಕಾರ ಈವರೆಗೂ ಕೆ.ಎಫ್.ಸಿ.ಸಿ 'ಡಿ.ಕೆ.ರವಿ' ಅನ್ನುವ ಟೈಟಲ್ ನ ಯಾರಿಗೂ ನೀಡಿಲ್ಲ. ಈ ಬಗ್ಗೆ ಪದಾಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆದಿದ್ದು, ಡಿ.ಕೆ.ರವಿ ಕುಟುಂಬದವರಿಂದ NOC (NO OBJECTION CERTIFICATE) ತರುವವರೆಗೂ ಯಾರಿಗೂ ಟೈಟಲ್ ನೀಡುವುದಿಲ್ಲ ಅಂತ ವಾಣಿಜ್ಯ ಮಂಡಳಿ ಕಡ್ಡಿ ತುಂಡು ಮಾಡಿದ ಹಾಗೆ ತಿಳಿಸಿದೆ. [ಅತಿಯಾದ ವೇಗವೇ ರವಿ ಸಾವಿಗೆ ಕಾರಣವಾಯಿತೆ?]

ರಿಯಲಿಸ್ಟಿಕ್ ಸಿನಿಮಾಗಳಿಗೆ ಹೆಚ್ಚಿದ ಬೇಡಿಕೆ

'ಅಭಿನೇತ್ರಿ', 'ದಂಡು ಪಾಳ್ಯ', 'ಅಟ್ಟಹಾಸ' ಸೇರಿದಂತೆ ಅನೇಕ ನೈಜ ಘಟನಾಧಾರಿತ ಚಿತ್ರಗಳು ಗಾಂಧಿನಗರದಲ್ಲಿ ಭಾರಿ ಸದ್ದು ಮಾಡಿತ್ತು. ಇನ್ನೂ 'ಜೋಗಿ' ಪ್ರೇಮ್ ನಟಿಸಿದ್ದ 'ಡಿ.ಕೆ' ಸಿನಿಮಾ ಕೂಡ ಟೈಟಲ್ ಮಾತ್ರದಿಂದಲೇ ಸುದ್ದಿ ಮಾಡಿತ್ತು. ವಾದ-ವಿವಾದಗಳಿಂದಾಗಿ ಬಿಟ್ಟಿ ಪ್ರಚಾರ ಸಿಕ್ಕರೆ ಸಾಕು ಅನ್ನುವ ಕೆಲ ನಿರ್ಮಾಪಕರು ಇದೀಗ ಡಿ.ಕೆ.ರವಿ ಸಾವಿನ ಪ್ರಕರಣದಿಂದ ಲಾಭ ಮಾಡಿಕೊಳ್ಳುವ ಪ್ಲಾನ್ ನಲ್ಲಿದ್ದಾರೆ. [ಡಿಕೆ ರವಿ ಕೊನೆಯ ಕರೆ ಸ್ವೀಕರಿಸಿದ್ದು 11.22ಕ್ಕೆ]

ಡಿ.ಕೆ.ರವಿ ಸಾವಿಗೆ ನಟಿ ಐಂದ್ರಿತಾ ರೇ ಸಂತಾಪ

ಈ ನಡುವೆ ನಟಿ ಐಂದ್ರಿತಾ ರೇ, ಡಿ.ಕೆ.ರವಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಭ್ರಷ್ಟರ ವಿರುದ್ಧ ದನಿಯೆತ್ತಬೇಕು ಅನ್ನುವ ಸಂದೇಶದೊಂದಿಗೆ ಟ್ವೀಟ್ ಕೂಡ ಮಾಡಿದ್ದಾರೆ.

ದಿಗ್ಭ್ರಮೆ ವ್ಯಕ್ತಪಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಡಿ.ಕೆ.ರವಿ ನಿಗೂಢ ಸಾವಿನ ಸುದ್ದಿ ಕೇಳಿ ನಟ ದರ್ಶನ್ ಕೂಡ ದಿಗ್ಭ್ರಮೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

English summary
Few Kannada Producers are planning to make a movie based on the life of IAS Officer D.K.Ravi. According to the sources, Producers are flooding into KFCC to register the title 'D.K.Ravi'. But as of now, KFCC has denied for such registration.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada