twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮಹಾನ್ ಕಲಾವಿದರು

    By Suneetha
    |

    2015 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಶುಕ್ರವಾರ (ಅಕ್ಟೋಬರ್ 30) ರಾತ್ರಿ ಘೋಷಿಸಿದ್ದು, ಈ ಬಾರಿಯ 60ನೇ ರಾಜ್ಯೋತ್ಸವದ ಅಂಗವಾಗಿ ಕನ್ನಡ ಚಿತ್ರರಂಗದ ನಾಲ್ವರು ಸಾಧಕರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

    ಸ್ಯಾಂಡಲ್ ವುಡ್ ನ ಕಾಮಿಡಿ ನಟ ಸಾಧುಕೋಕಿಲ, ನಟ ಶನಿ ಮಹಾದೇವಪ್ಪ, ಹಿರಿಯ ನಟಿ ಸಾಹುಕಾರ್ ಜಾನಕಿ ಹಾಗೂ ನಟ ಸದಾಶಿವ ಬ್ರಹ್ಮಾವರ ಇವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರದಾನ ಮಾಡಲಿದ್ದು, ಈ ಬಾರಿಯ ಪ್ರಶಸ್ತಿಯು 1 ಲಕ್ಷ ನಗದು, ಸ್ಮರಣಿಕೆ ಹಾಗೂ 20 ಗ್ರಾಂ ಚಿನ್ನದ ಪದಕಗಳನ್ನು ಒಳಗೊಂಡಿದೆ.[2015ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ]

    ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನವೆಂಬರ್ 1 ಭಾನುವಾರದಂದು, ಅದ್ಧೂರಿಯಾಗಿ ನೆರವೇರಲಿದೆ.

    ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೈದಿರುವ ಈ ನಾಲ್ವರ ಕಿರು ಪರಿಚಯ ಮಾಡುತ್ತೇವೆ. ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ..

    ಕಾಮಿಡಿ ನಟ-ಸಂಗೀತ ನಿರ್ದೇಶಕ ಸಾಧುಕೋಕಿಲ

    ಕಾಮಿಡಿ ನಟ-ಸಂಗೀತ ನಿರ್ದೇಶಕ ಸಾಧುಕೋಕಿಲ

    ಸ್ಯಾಂಡಲ್ ವುಡ್ ನ ಟಾಪ್ ಕಾಮಿಡಿ ನಟ-ನಿರ್ದೇಶಕ ಕಮ್ ಸಂಗೀತ ನಿರ್ದೇಶಕ ಬೆಂಗಳೂರು ಮೂಲದ ಸಾಧುಕೋಕಿಲ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಮಿಡಿ ನಟನಾಗಿ ನಟಿಸಿದ್ದಾರೆ. ನಟನೆ ಮಾತ್ರವಲ್ಲದೇ, ಹಲವಾರು ಸಿನಿಮಾಗಳಿಗೆ ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನ ಮಾಡಿರುವ ಈ ಟ್ಯಾಲೆಂಟೆಡ್ ನಟನಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ವಿಶಿಷ್ಟ ಧ್ವನಿ ಹಾಗೂ ಡಿಫರೆಂಟ್ ಮ್ಯಾನರಿಸಂ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ ನಟನೆಂದರೆ ಅದು ಸಾಧು ಅವರು.[ಚಿತ್ರ ವಿಮರ್ಶೆ: 'ಚಡ್ಡಿದೋಸ್ತ್' ಸಿನಿಮಾ ಹೇಗಿದೆ? ]

    ಹಿರಿಯ ನಟ ಶನಿ ಮಹಾದೇವಪ್ಪ

    ಹಿರಿಯ ನಟ ಶನಿ ಮಹಾದೇವಪ್ಪ

    ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ 'ಆಂಧ್ರ ಹೆಂಡ್ತಿ' ಯಿಂದ ಹಿಡಿದು ಡಾ.ರಾಜ್ ಅವರೊಂದಿಗೆ 'ಬಂಗಾರದ ಮನುಷ್ಯ' ಚಿತ್ರದವರೆಗೂ ತಮ್ಮ ಕಂಪು ಬೀರಿರುವ ಮಂಡ್ಯ ಮೂಲದ ಹಿರಿಯ ನಟ ಶನಿ ಮಹಾದೇವಪ್ಪನವರು 60ನೇ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. 'ಬಬ್ರುವಾಹನ', 'ಬಂಗಾರದ ಪಂಜರ' ಹಾಗೂ ಬಂಗಾರದ ಮನುಷ್ಯ ಮುಂತಾದ ಸಿನಿಮಾಗಳಲ್ಲಿ ಇವರು ಮಾಡಿದ ಅಭಿನಯದಿಂದ ಕನ್ನಡ ಚಿತ್ರರಂಗದಲ್ಲಿ ಫೇಮಸ್ ಆದರು. ಈ ಮೊದಲು ಇವರಿಗೆ ವರದರಾಜ್ ಪ್ರಶಸ್ತಿ ಕೂಡ ಲಭಿಸಿದೆ.[ಶನಿಮಹದೇವಪ್ಪ ಅವರಿಗೆ ವರದರಾಜ್ ಪ್ರಶಸ್ತಿ]

    ಹಿರಿಯ ನಟಿ ಸಾಹುಕಾರ್ ಜಾನಕಿ

    ಹಿರಿಯ ನಟಿ ಸಾಹುಕಾರ್ ಜಾನಕಿ

    ಚಿತ್ರರಂಗಕ್ಕೂ ಬರುವ ಮೊದಲು ಆಕಾಶವಾಣಿಯಲ್ಲಿ ಕಲಾವಿದೆಯಾಗಿದ್ದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ತಮ್ಮ ಛಾಪು ಮೂಡಿಸಿದವರು. 'ದೇವಕನ್ನಿಕಾ' ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಮೊದಲು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡರು. 'ಸಾಹುಕಾರ' ಚಿತ್ರದಲ್ಲಿನ ಅವರ ಅವಿಸ್ಮರಣೀಯ ಅಭಿನಯ ಜಾನಕಿ ಅವರ ಹೆಸರಿನೊಂದಿಗೆ ಶಾಶ್ವತವಾಗಿ ಸೇರಿಹೋಗಿದೆ. ಕನ್ಯಾರತ್ನ, ರತ್ನಗಿರಿ ರಹಸ್ಯ, ಸ್ಕೂಲ್ ಮಾಸ್ಟರ್ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ಸಾಹುಕಾರ್ ಜಾನಕಿ ಅವರದು ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ.[ಸಾಹುಕಾರ್ ಜಾನಕಿ ಸೆಪ್ಟೆಂಬರ್ 10ರಂದು ನಿಮ್ಮ ಕಣ್ಮುಂದೆ]

    ಹಿರಿಯ ನಟ ಸದಾಶಿವ ಬ್ರಹ್ಮಾವರ

    ಹಿರಿಯ ನಟ ಸದಾಶಿವ ಬ್ರಹ್ಮಾವರ

    'ಚಾಮುಂಡಿ' , 'ಮಾಂಗಲ್ಯಂ ತಂತು ನಾನೇನ', 'ಶ್ರೀ ಸಿದ್ಧಾರೂಡ ಮಹಾತ್ಮೆ', ಮುಂತಾದ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯ ನೀಡಿರುವ ಧಾರವಾಡ ಮೂಲದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕ್ಯಾನ್ಸರ್ ರೋಗ ಇವರ ಹೆಂಡತಿಯನ್ನು ಬಲಿ ತೆಗೆದುಕೊಂಡ ನಂತರ ಸ್ವಂತ ಮಗನಿಂದ ದೂರಾಗಿ, ಇದೀಗ ದೇವದತ್ತ ಎಂಬ ಯುವಕನೊಂದಿಗೆ ವಾಸ್ತವ್ಯ ಹೂಡಿದ್ದಾರೆ.[ಸದಾಶಿವ ಬ್ರಹ್ಮಾವರರಿಗೆ ವರದರಾಜು ಪ್ರಶಸ್ತಿ]

    English summary
    The Karnataka government has chosen 60 people for Rajyotsava award. Government has restricted the number of award winners to 60 to mark the 60th Karnataka Rajyotsava day. Award will be presented on Sunday, November 1, 2015 at Ravindra Kalakshetra, Bengaluru. Kannada Rajyotsava award to Sadhu, Shani Mahadevappa, Janaki, Sadashiva..
    Saturday, October 31, 2015, 17:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X