For Quick Alerts
  ALLOW NOTIFICATIONS  
  For Daily Alerts

  ಊರ್ವಶಿ ಚಿತ್ರಮಂದಿರದಲ್ಲಿ 'ಕೆಜಿಎಫ್' ಸ್ಪೆಷಲ್ ಶೋ: ಟಿಕೆಟ್ ಬೆಲೆಯಲ್ಲಿ ಆಫರ್

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಸಿನಿಮಾ ಕಳೆದ ವರ್ಷ ತೆರೆಕಂಡು ಬಹುದೊಡ್ಡ ಹಿಟ್ ಆಗಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಕೆಜಿಎಫ್ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿತ್ತು.

  ಸ್ಯಾಂಡಲ್ ವುಡ್ ಸಿನಿಮಾವೊಂದು ನೂರು ಕೋಟಿ ಗಳಿಸಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್ ಸಿನಿಮಾ ಪಾತ್ರವಾಗಿತ್ತು. ಈ ಸಿನಿಮಾ ಬಳಿಕ ಪರಭಾಷಿಗರೆಲ್ಲ ಕನ್ನಡ ಚಿತ್ರರಂಗದತ್ತು ತಿರುಗಿ ನೋಡುವಂತಾಗಿತ್ತು.

  ಇಷ್ಟೆಲ್ಲಾ ಹವಾ ಸೃಷ್ಟಿಸಿದ್ದ ಕೆಜಿಎಫ್ ಸಿನಿಮಾ ಈಗ ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ. ನವೆಂಬರ್ 1ರ ಪ್ರಯುಕ್ತ ಕರ್ನಾಟಕದ ಹಲವು ಚಿತ್ರಮಂದಿರಗಳಲ್ಲಿ ರಿ-ರಿಲೀಸ್ ಆಗ್ತಿದೆ.

  ಕನ್ನಡ ರಾಜ್ಯೋತ್ಸವಕ್ಕೆ ಸಿಹಿ ಸುದ್ದಿ ನೀಡಿದ 'ಕೆಜಿಎಫ್' ತಂಡಕನ್ನಡ ರಾಜ್ಯೋತ್ಸವಕ್ಕೆ ಸಿಹಿ ಸುದ್ದಿ ನೀಡಿದ 'ಕೆಜಿಎಫ್' ತಂಡ

  ವಿಶೇಷ ಏನಪ್ಪಾ ಅಂದ್ರೆ ಬೆಂಗಳೂರಿನ ಲಾಲ್ ಬಾಗ್ ಬಳಿಯಿರುವ ಊರ್ವಶಿ ಚಿತ್ರಮಂದಿರಲ್ಲಿ ಕೆಜಿಎಫ್ ಸಿನಿಮಾ ಪ್ರದರ್ಶನವಾಗುತ್ತಿದ್ದು, ಟಿಕೆಟ್ ಬೆಲೆಯಲ್ಲಿ ಭಾರಿ ಆಫರ್ ನೀಡಿದ್ದಾರೆ. ಊರ್ವಶಿ ಚಿತ್ರಮಂದಿರದಲ್ಲಿ ಸಾಮಾನ್ಯವಾಗಿ ಟಿಕೆಟ್ ಬೆಲೆ 150ರೂಪಾಯಿಗಿಂತ ಹೆಚ್ಚಿರುತ್ತೆ. ಆದರೆ, ಕೆಜಿಎಫ್ ಸಿನಿಮಾ ವಿಶೇಷ ಪ್ರದರ್ಶನಕ್ಕಾಗಿ ಕಡಿಮೆ ಬೆಲೆ ನಿಗದಿ ಮಾಡಲಾಗಿದೆ.

  ಈ ಬಗ್ಗೆ ಸ್ವತಃ ಊರ್ವಶಿ ಚಿತ್ರಮಂದಿರದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಟಿಕೆಟ್ ಬೆಲೆ 30, 40, 50 ರೂಪಾಯಿ ಎಂದು ತಿಳಿಸಿದ್ದಾರೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಶೋ ಕೆಜಿಎಫ್ ಸಿನಿಮಾ ಪ್ರದರ್ಶನವಾಗುತ್ತಿದೆ. ಈ ಆಫರ್ ಕೇವಲ ಒಂದು ದಿನ ಮಾತ್ರ ಇದೆ.

  ಕೆಜಿಎಫ್ ತಂಡದ ಮೇಲೆ ಅಭಿಮಾನಿಗಳಿಂದ ಒತ್ತಡ!ಕೆಜಿಎಫ್ ತಂಡದ ಮೇಲೆ ಅಭಿಮಾನಿಗಳಿಂದ ಒತ್ತಡ!

  ಸದ್ಯ ಊರ್ವಶಿ ಚಿತ್ರಮಂದಿರಲ್ಲಿ ತಮಿಳು ಸಿನಿಮಾ ಬಿಗಿಲ್ ಪ್ರದರ್ಶನವಾಗುತ್ತಿದೆ. ನಾಳೆ ಎರಡು ಶೋ ಕೆಜಿಎಫ್ ಸಿನಿಮಾ ಇರಲಿದ್ದು, ಬಳಿಕ ಬಿಗಿಲ್ ಸಿನಿಮಾ ಮುಂದುವರಿಯಲಿದೆ.

  English summary
  On occasion of Kannada Rajyotsava URVASHI 4K CINEMA's will have a special screening of Kannada's pride KGF at special prices of 30/- , 40/- 50/-.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X