Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"FAT+Her=Father" ಎಂದ ಚಂದನ್, ನಿವೇದಿತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ?
ಕನ್ನಡ ರಾಪರ್ ಚಂದನ್ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದ್ಕಡೆ ಸಂಗೀತ. ಇನ್ನೊಂದು ಕಡೆ ನಟನೆ ಅಂತ ಪುರುಸೋತ್ತಿಲ್ಲದಷ್ಟು ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಸಂಗೀತ ಕಾರ್ಯಕ್ರಮಗಳಿಗಂತ ವಿದೇಶ ಸುತ್ತಿ ಬರುತ್ತಿದ್ದಾರೆ.
ಇತ್ತೀಚೆಗಂತೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೊಸ ವರ್ಷಕ್ಕೂ ಮುನ್ನ ಮೊದಲ ಸಿನಿಮಾದ ಮೊದಲ ಹಾಡನ್ನೂ ರಿಲೀಸ್ ಮಾಡಿದ್ದಾರೆ. ಆ ಹಾಡಿಗೆ ಸಿನಿಪ್ರಿಯರು ತಲೆದೂಗಿದ್ದಾರೆ. ಈಗಸೀ ಜೋಡಿ ನೆಟ್ಟಿಗರ ತಲೆಗೆ ಹುಳ ಬಿಟ್ಟಿದೆ. ಒಂದು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಅದುವೇ ಅಷ್ಟಕ್ಕೂ ಆ ರೀಲ್ಸ್‌ನಲ್ಲಿ ಏನಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಚಂದನ್
ಶೆಟ್ಟಿ
ದುಡ್ಡಲ್ಲಿ
ಮಜಾ
ಮಾಡ್ತಿದ್ದೀಯಾ
ಅಂದವ್ರಿಗೆ
ತಿರುಗೇಟು
ಕೊಟ್ಟ
ನಿವೇದಿತಾ
ಗೌಡ!

ಚಂದನ್, ನಿವೇದಿತಾ ಗುಡ್ ನ್ಯೂಸ್?
ಕನ್ನಡ ರಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರಿಗೆ ಸೋಶಿಯಲ್ ಮೀಡಿಯಾ ಹೊಸತೇನೂ ಅಲ್ಲ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಪ್ರತ್ಯಕ್ಷ ಆಗುತ್ತಲೇ ಇರುತ್ತಾರೆ. ಸದ್ಯ ಇಬ್ಬರೂ ಜೊತೆಯಲ್ಲಿ ಒಂದು ರೀಲ್ಸ್ ಮಾಡಿದ್ದು, ಆ ವಿಡಿಯೋನೇ ನೆಟ್ಟಿಗರ ತಲೆ ಹುಳಬಿಟ್ಟಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಸುಳಿವು ನೀಡಿದ್ದಾರೆ ಅನ್ನೋ ಅನುಮಾನ ಮೂಡಿದೆ. ಅದಕ್ಕೆ ಸಾಕ್ಷಿ ಆ ವಿಡಿಯೋದಲ್ಲೇ ಇದೆ.

"FAT+Her=Father"
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಮಾಡಿದ ರೀಲ್ಸ್‌ನಲ್ಲಿ ಲೆಕ್ಕವನ್ನು ಬಿಡಿಸಿದ್ದಾರೆ. ಅದುವೇ "FAT+Her=Father".ಮೊದಲಿಗೆ ಚಂದನ್ FAT+Her ಅಂದ್ರೆ ಏನು? ಎಂದು ಪ್ರಶ್ನೆ ಮಾಡುತ್ತಾರೆ. ನಿವೇದಿತಾ ಅದಕ್ಕೆ 'ಫ್ಯಾಟ್ ಹರ್' ಎನ್ನುತ್ತಾರೆ, ಮತ್ತೆ ಚಂದನ್ ಇದೇ ಪ್ರಶ್ನೆಯನ್ನೇ ಮುಂದಿಡುತ್ತಾರೆ. ಆಗ "FAT+Her=Father" ಎಂಬ ಉತ್ತರ ಬರುತ್ತೆ. ಇಷ್ಟು ಹೇಳಿ ನೆಟ್ಟಿಗರ ತಲೆ ಹುಳ್ಳ ಬಿಟ್ಟು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ನೆಟ್ಟಿಗರು ಮಾತ್ರ ಇಬ್ಬರಿಗೂ ಕಂಗ್ರ್ಯಾಟ್ಸ್ ಹೇಳುತ್ತಿದ್ದಾರೆ.

ಏನಂತಿದ್ದಾರೆ ನೆಟ್ಟಿಗರು?
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರ ರೀಲ್ಸ್ ನೋಡಿದ್ಮೇಲೆ ನೆಟ್ಟಿಗರು ಸುಮ್ಮನೆ ಕೂತಿಲ್ಲ. ಕೆಲವರು ಇಬ್ಬರಿಗೂ ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಕೆಲವರು "ಫಾದರ್ ಆಗ್ತಾ ಇದ್ದೀರಾ ಬ್ರೋ" ಅಂತ ಹೇಳಿದ್ರೆ, ಇನ್ನೊಬ್ಬರು "ಅಣ್ಣ ದೊಡ್ಡದಾಗಿ ಒಂದು ಸಿಗ್ನಲ್ ಕೊಟ್ಟಿದ್ದಾರೆ ಕಣ್ರೋ" ಎಂದು ಹೇಳಿದ್ದಾರೆ. ಮತ್ತೊಂದು " ಈ ಪ್ರಶ್ನೆಯನ್ನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೇಳಿದ್ರು" ಎಂದು ಹೇಳಿದ್ದಾರೆ. ಹೀಗಾಗಿ ನಾನಾ ರೀತಿಯಲ್ಲಿ ಕಮೆಂಟ್‌ಗಳು ಬರುತ್ತಿವೆ.

ಇನ್‌ಸ್ಟಾಗ್ರಾಂನಲ್ಲಿ ಸಖತ್ ಫಾಲೋವರ್ಸ್
ಚಂದನ್ ಶೆಟ್ಟಿಗಿಂತ ನಿವೇದಿತಾ ಗೌಡಗೆ ಸೋಶಿಯಲ್ ಮೀಡಿಯಾದ ಮೇಲೆ ಹೆಚ್ಚು ಆಸಕ್ತಿ. ಆಗಾಗ ಏನಾದರೂ ಒಂದು ವಿಡಿಯೋ, ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಚಂದನ್ ಶೆಟ್ಟಿ ಕೂಡ ನಿವೇದಿತಾಗೆ ಸಾಥ್ ಕೊಡುತ್ತಾರೆ. ಸದ್ಯ ನಿವೇದಿತಾ ಒಂದೂವರೆ ಮಿಲಿಯನ್‌ಗೂ ಅಧಿಕ ಮಂದಿ ಫಾಲೋವರ್ಸ್ ಇದ್ದಾರೆ.