»   » ಉಪೇಂದ್ರ ಮುಂದಿನ ಪ್ರಾಜೆಕ್ಟ್ ಗುಟ್ಟು ಇನ್ನೂ ರಟ್ಟಾಗಿಲ್ಲ!

ಉಪೇಂದ್ರ ಮುಂದಿನ ಪ್ರಾಜೆಕ್ಟ್ ಗುಟ್ಟು ಇನ್ನೂ ರಟ್ಟಾಗಿಲ್ಲ!

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಪ್ರಾಜೆಕ್ಟ್ ಯಾವುದು? ಎಂಬ ಕುತೂಹಲದ ಪ್ರಶ್ನೆಗೆ ಉಪ್ಪಿ ಇನ್ನೂ ಉತ್ತರಿಸಿಲ್ಲ. ಒಳ್ಳೆ ಸಜ್ಜೆಕ್ಟ್ ಸಿಕ್ಕಾಗ ಅನೌನ್ಸ್ ಮಾಡ್ತೀನಿ ಎಂದಿದ್ದಾರೆ. ಸಾಮಾನ್ಯವಾಗಿ ಉಪೇಂದ್ರ ಅವರ ಹುಟ್ಟುಹಬ್ಬದ ದಿನದಂದು ಅವರ ಹೊಸ ಚಿತ್ರ ಘೋಷಣೆ ಮಾಡಲಾಗುತ್ತದೆ. ಸೆ.18ರಂದು ಉಪೇಂದ್ರ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಯಲ್ಲಿ ಆಚರಿಸಿಕೊಂಡಿದ್ದಾರೆ.

ಇದು ಫ್ಯಾನ್ಸ್ ಗಳ ಹಬ್ಬ, ಇವತ್ತು ಫುಲ್ ಡೇ ಇವರ ಜೊತೆ ಇರುತ್ತೇನೆ. ಸದ್ಯಕ್ಕೆ 'ಕಲ್ಪನಾ' ಚಿತ್ರದ ಮುಂದುವರಿದ ಭಾಗ 'ಕಲ್ಪನಾ-2' ಚಿತ್ರದಲ್ಲಿ ನಟಿಸುತ್ತೇನೆ. ಮಿಕ್ಕಂತೆ ಯಾವ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ ಎಂದು ಉಪೇಂದ್ರ ಅವರು ತಮ್ಮ ಕತ್ರಿಗುಪ್ಪೆ ನಿವಾಸದಲ್ಲಿ ಸಂಭ್ರಮಾಚರಣೆ ನಡುವೆ ಬಿಡುವು ಮಾಡಿಕೊಂಡು ಮಾತನಾಡಿದರು. [ರಿಯಲ್ ಸ್ಟಾರ್ ಉಪೇಂದ್ರ ಟಾಪ್ 6 ಡೈಲಾಗ್ಸ್]

ಗುರುವಾರದಿಂದಲೇ ಉಪ್ಪಿ ಮನೆ ಕಡೆ ಫ್ಯಾನ್ಸ್ ಪ್ರವಾಹ ಹರಿದು ಬರತೊಡಗಿತ್ತು. ಶುಕ್ರವಾರ ಬೆಳಗ್ಗೆ 4 ಗಂಟೆಯಿಂದ ಉಪ್ಪಿ ವೇಷಧಾರಿಗಳು, ಕೇಕ್ ಜೊತೆಗೆ ಬಂದವರು ಎಲ್ಲರೂ ರಿಯಲ್ ಸ್ಟಾರ್ ಜೊತೆ ಫೋಟೊಗೆ ಪೋಸ್ ಕೊಡುವ ದೃಶ್ಯ ಸಾಮಾನ್ಯವಾಗಿತ್ತು.[ಉಪ್ಪಿದಾದಾ ಎಂಬಿಬಿಎಸ್ ಇನ್ಮುಂದೆ 'ರಿಯಲ್' ಡಾಕ್ಟರ್]

ತೆಲುಗು ಮತ್ತು ತಮಿಳಿನಲ್ಲಿ ಸೂಪರ್ ಹಿಟ್ ಆದ 'ಕಾಂಚನಾ' ಚಿತ್ರದ ರೀಮೇಕ್ 'ಕಲ್ಪನಾ' ಸಿನಿಮಾ ಕನ್ನಡದಲ್ಲೂ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಉಪ್ಪಿ2 ಬಾಕ್ಸಾಫೀಸ್ ನಲ್ಲಿ ದುಡ್ಡು ಕೊಳ್ಳೆಹೊಡೆದಿದೆ. ಉಪ್ಪಿ ಬರ್ಥ್ ಡೇ ಸಮಾರಂಭದ ಚಿತ್ರಗಳು ನಿಮಗಾಗಿ ಇಲ್ಲಿದೆ...

ರಮೇಶ್ ಅರವಿಂದ್ ಜೊತೆ ಚಿತ್ರ ಏನಾಯ್ತು?

ನಿರ್ಮಾಪಕ ಗಂಡುಗಲಿ ಕೆ ಮಂಜು ಚಿತ್ರವೊಂದನ್ನು ಘೋಷಿಸಿದ್ದರು. ಚಿತ್ರದ ಹೆಸರು 'ಸೂಪರ್ ಕಿಕ್' ಎನ್ನಲಾಗಿತ್ತು. ಇದು ಸೂಪರ್ ಚಿತ್ರದ ಮುಂದುವರಿದ ಭಾಗವೇ? ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿರಲಿಲ್ಲ. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಹಾಗೂ ಉಪೇಂದ್ರ ನಟಿಸುತ್ತಾರೆ ಎಂಬ ಮಾತು ಬಂದಿತ್ತು. ರಮೇಶ್ ಅವರು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದರೆ, ಈ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

ಶ್ ರೀ ರಿಲೀಸ್ ಡಬ್ ಕಥೆ ಏನಾಯ್ತು?

ನಿರ್ದೇಶಕ ಉಪೇಂದ್ರ ಹುಟ್ಟುಹಬ್ಬದ ದಿನದಂದು 'ಶ್' ಚಿತ್ರದ ರೀ-ರಿಲೀಸ್ ಮಾಡಲಾಗುತ್ತದೆ.ಹಿಂದಿ, ತಮಿಳು, ತೆಲುಗು ಭಾಷೆಗಳಿಗೂ ಡಬ್ ಮಾಡು ಎಂದು ಕುಮಾರ್ ಗೋವಿಂದ್ ಹೇಳಿಕೊಂಡಿದ್ದರು. 1993, ಡಿಸೆಂಬರ್ 3 ರಂದು ತೆರೆ ಕಂಡ ಕುಮಾರ್ ಗೋವಿಂದ್, ದಯಾನಂದ, ಕಾಶೀನಾಥ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಹಾರರ್ ಕಮ್ ಥ್ರಿಲ್ಲರ್ ಸಿನಿಮಾ 'ಶ್' ಚಿತ್ರ ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ.

ಫ್ಲಾಶ್ ಬ್ಲಾಕ್ : ಉಪೇಂದ್ರ 2 ಪೋಸ್ಟರ್ ರಿಲೀಸ್

2012ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಟರ್ ಟೋಪಿ ಹಾಕಿಕೊಂಡಿದ್ದರು. ಟೋಪಿವಾಲಾನಾಗಿ ಮಿಂಚುವುದರ ಜೊತೆಗೆ ಸೂಪರ್ ರಂಗಾನಾಗಿ ಕೂಡಾ ಪ್ರೇಕ್ಷಕರನ್ನು ರಂಜಿಸಿ, ಕಲ್ಪನಾ ರೂಪದಲ್ಲೂ ಕಾಣಿಸಿಕೊಂಡ ಉಪ್ಪಿ ತಮ್ಮ ಹುಟ್ಟುಹಬ್ಬದ ದಿನಕ್ಕೆ ಉಪೇಂದ್ರ 2 ಪೋಸ್ಟರ್ ಅನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಟ್ಟಿದ್ದರು.

ಇದು ಫ್ಯಾನ್ಸ್ ಗಳ ಹಬ್ಬ, ಇವತ್ತು ಫುಲ್ ಡೇ ಇವರ ಜೊತೆ

ಇದು ಫ್ಯಾನ್ಸ್ ಗಳ ಹಬ್ಬ, ಇವತ್ತು ಫುಲ್ ಡೇ ಇವರ ಜೊತೆ ಇರುತ್ತೇನೆ ಎಂದ ರಿಯಲ್ ಸ್ಟಾರ್ ಉಪೇಂದ್ರ ಅವರು ಕೇಕ್ ಕತ್ತರಿಸುತ್ತಿರುವುದು.

ಈ ವಾರ ಮಜಾ ಟಾಕೀಸ್ ನಲ್ಲಿ ನೋಡಿ ಉಪ್ಪಿ 2

ಈ ವಾರ ಮಜಾ ಟಾಕೀಸ್ ನಲ್ಲಿ ನೋಡಿ ಉಪೇಂದ್ರ ಅವರು ಅಭಿಮಾನಿಗಳಿಗೆ ಸಕತ್ ಮಜಾ ನೀಡಲಿದ್ದಾರೆ.

English summary
Kannada Real Star Upendra celebrated his birthday with fans at his house in Katriguppe, Bengaluru. Upendra has agreed to play lead role in Kalpana-2, but he is yet to announce about his new project from his home banner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada