»   » ಶ್ರದ್ಧಾ ಶ್ರೀನಾಥ್ ಮುಂದಿನ ಚಿತ್ರದ ಹೆಸರು 'ಶಾದಿ ಭಾಗ್ಯ'!

ಶ್ರದ್ಧಾ ಶ್ರೀನಾಥ್ ಮುಂದಿನ ಚಿತ್ರದ ಹೆಸರು 'ಶಾದಿ ಭಾಗ್ಯ'!

Posted By:
Subscribe to Filmibeat Kannada

2016ರ ಸೂಪರ್ ಹಿಟ್ ತೆಲುಗು ಚಿತ್ರ 'ಪೆಳ್ಳಿ ಚೂಪುಲು' ಕನ್ನಡಕ್ಕೆ ರೀಮೇಕ್ ಆಗುತ್ತಿದೆ ಎಂಬ ಸುದ್ದಿಯನ್ನ ಓದೇ ಇರ್ತಿರಾ. ಇದೀಗ, ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ.

ಹೌದು, 'ಪೆಳ್ಳಿ ಚೂಪುಲು' ಚಿತ್ರದ ಕನ್ನಡ ಅವತರಣಿಕೆಗೆ 'ಶಾದಿ ಭಾಗ್ಯ' ಎಂಬ ಶೀರ್ಷಕೆಯನ್ನ ಇಡಲಾಗಿದ್ದು, ಟೈಟಲ್ ಅಂತಿಮಗೊಳಿಸಲಾಗಿದೆಯಂತೆ. ಈ ಚಿತ್ರವನ್ನ ನೃತ್ಯ ಸಂಯೋಜಕ ಮುರುಳಿ ಮಾಸ್ಟರ್ ನಿರ್ದೇಶನ ಮಾಡಲಿದ್ದಾರೆ.['ಪೆಳ್ಳಿಚೂಪುಲು' ರಿಮೇಕ್: ಶ್ರದ್ದಾ-ವಧು, ಗುರುನಂದನ್-ವರ ! ]

Kannada Remake of Pelli Choopulu Titled as a Shaadi Bhagya

ತೆಲುಗಿನಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದ ಪಾತ್ರವನ್ನ, ಕನ್ನಡದಲ್ಲಿ 'ಫಸ್ಟ್ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ ನಿರ್ವಹಿಸಲಿದ್ದಾರೆ. ರಿತು ವರ್ಮಾ ಮಾಡಿದ್ದ ಪಾತ್ರದಲ್ಲಿ, 'ಯು ಟರ್ನ್' ಖ್ಯಾತಿಯ ನಟಿ ಶ್ರದ್ದಾ ಶ್ರೀನಾಥ್ ಅಭಿನಯಿಸುತ್ತಿದ್ದಾರೆ.

'ಪೆಳ್ಳಿಚೂಪುಲು' ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಆಗಿದ್ದು, 'ಸ್ವಯಂವರ'ದ ಕಾನ್ಸಪ್ಟ್ ಹೊಂದಿತ್ತು. ಈಗ ತೆಲುಗಿನ ಸ್ವಯಂವರ, ಕನ್ನಡದಲ್ಲೂ ಮನರಂಜನಾತ್ಮಕವಾಗಿ ಮೂಡಲಿದೆ.

English summary
Telugu blockbuster Pelli Choopulu, is being remade in Kannada And the title of the Kannada film has finally been selected. It will be called 'Shaadi Bhagya'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada