»   » ಸೆ.11ರಂದು ಸಲಿಂಗ ಕಾಮ ಕುರಿತ ಕನ್ನಡ ಚಿತ್ರ ತೆರೆಗೆ

ಸೆ.11ರಂದು ಸಲಿಂಗ ಕಾಮ ಕುರಿತ ಕನ್ನಡ ಚಿತ್ರ ತೆರೆಗೆ

Posted By: ಸೋನು ಗೌಡ
Subscribe to Filmibeat Kannada

ಇತ್ತೀಚೆಗೆ ಸಲಿಂಗ ಕಾಮ ಕುರಿತಾದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿದ್ದವು. ಅಂದಹಾಗೆ ಇದೀಗ ಸಲಿಂಗ ಕಾಮದ ಕುರಿತಾಗಿ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಒಂದು ತಯಾರಾಗಿದ್ದು, ಇನ್ನೇನು ಸದ್ಯದಲ್ಲೇ ತೆರೆ ಕಾಣಲಿದೆ.

ವಿದೇಶಿ ನಟಿ ರಷ್ಯಾ ಮೂಲದ ತಾನ್ಯಾ, ಫಾರೂಕ್, ಕಾವ್ಯ ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ '141' ಎಂಬ ಕನ್ನಡ ಚಿತ್ರವೊಂದು ಸೆಪ್ಟೆಂಬರ್ 11ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

'141' ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ತಯಾರಾಗುತ್ತಿರುವ ಸಲಿಂಗ ಕಾಮದ ಕುರಿತಾದ ಚಿತ್ರವಾಗಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ. 'ಗರ್ಭದ ಗುಡಿ' ಚಿತ್ರಕ್ಕೆ ಬಂಡವಾಳ ಹೂಡಿದ್ದ ಬಾವಜಿ ಅವರು '141' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.

ಇನ್ನು ಬೆಂಗಳೂರು, ಮಂಗಳೂರು, ಉಡುಪಿ, ಹೈದರಾಬಾದ್ ಹೀಗೆ ಮುಂತಾದ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಸಂಗೀತ ನಿರ್ದೇಶಕ ಪ್ರವೀಣ್ ಅವರ ಮ್ಯೂಸಿಕ್ ಕಂಪೋಸಿಷಿನ್ ಈ ಚಿತ್ರಕ್ಕಿದೆ. ಮುಂದೆ ಓದಿ..

ತಾನ್ಯಾ-ಕಾವ್ಯ ಜುಗಲ್ ಬಂದಿ

ಚಿತ್ರದಲ್ಲಿ ರಷ್ಯಾ ಮೂಲದ ನಟಿ ತಾನ್ಯಾ ಹಾಗೂ ನಟಿ ಕಾವ್ಯ ಅವರ ಅಪರೂಪದ ಫೋಸ್. ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಪರೂಪದ ಚಿತ್ರ ಬಿಡುಗಡೆಯಾಗುತ್ತಿದೆ

ಫಾರೂಕ್-ರಷ್ಯಾ ಬೆಡಗಿ ತಾನ್ಯಾ

ನಿರ್ದೇಶಕ ಬಾವಾಜಿ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಎಲ್ಲರೂ ಹೊಸಬರೇ ಕಾಣಿಸಿಕೊಂಡಿದ್ದಾರೆ.

ಕಾವ್ಯಾ ಹಾಗೂ ಲೆಸ್ಬಿಯನ್ ಸೆಕ್ಸಿ ಸ್ಟಾರ್ ತಾನ್ಯಾ

ನಿರ್ದೇಶಕ ಸಾಯಿಪ್ರಕಾಶ್ ಅವರು ನಿರ್ದೇಶಿಸಿದ್ದ 'ಗರ್ಭದ ಗುಡಿ' ಚಿತ್ರಕ್ಕೆ ಬಂಡವಾಳ ಹೂಡಿದ್ದ ಬಾವಾಜಿ ಅವರ ಇದೇ ಮೊದಲ ಬಾರಿಗೆ ಚೊಚ್ಚಲವಾಗಿ ಒಂದು ವಿಭಿನ್ನ ಚಿತ್ರವನ್ನು ಮಾಡುವ ಮೂಲಕ ಗಾಂಧಿನಗರದಲ್ಲಿ ಸುದ್ದಿಯಾಗುತ್ತಿದ್ದಾರೆ.

ಕಾವ್ಯಾ-ತಾನ್ಯಾ ಅಪರೂಪದ ಭಂಗಿ

ಸಲಿಂಗ ಕಾಮ ಅನ್ನೋದನ್ನ ನಮ್ಮ ದೇಶದ ನ್ಯಾಯಾಲಯ ಸಂಪೂರ್ಣ ನಿಷೇಧಿಸಿದ್ದು, ಇನ್ನು ಸ್ಯಾಂಡಲ್ ವುಡ್ ನಲ್ಲಿ ಈ ಕುರಿತಾಗಿಯೇ ಚಿತ್ರ ಬಿಡುಗಡೆಯಾಗುತ್ತಿರುವುದು ಇನ್ನು ಯಾವ ಯಾವ ಗಾಸಿಪ್ ಗಳಿಗೆ ಕಾರಣವಾಗುತ್ತದೆ ಎಂದು ಮುಂದೆ ನೋಡಬೇಕಿದೆ

ಲೆಸ್ಬಿಯನ್ ಸೆಕ್ಸ್ ತಾರೆ ತಾನ್ಯಾ

ರಷ್ಯಾ ಮೂಲದ ಲೆಸ್ಬಿಯನ್ ತಾರೆ ತಾನ್ಯಾ ಅವರು ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಕಾಣಸಿಕೊಳ್ಳುತ್ತಿದ್ದಾರೆ.

ಫಾರೂಕ್-ಕಾವ್ಯ-ತಾನ್ಯಾ

ಸೆಪ್ಟೆಂಬರ್ 11 ರಂದು ತೆರೆ ಕಾಣುತ್ತಿರುವ ಈ ಚಿತ್ರದಲ್ಲಿ ಫಾರೂಕ್, ತಾನ್ಯಾ, ಕಾವ್ಯಾ, ಗಾಯತ್ರಿ, ಜಗದೀಶ್ ಬಾಬು ಮುಂತಾದವರು ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

English summary
Kannada's first homosexual film '141' is all set to be released on the 11th of September. The film is said to be the first homosexual film of South India. The film is directed by Bavaji who had earlier produced a film called 'Garbhada Gudi' under Saiprakash's direction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada