For Quick Alerts
  ALLOW NOTIFICATIONS  
  For Daily Alerts

  'ಸಾವಿತ್ರಿಬಾಯಿ ಫುಲೆ' ಯಾದ ನಟಿ ತಾರಾ

  By Pavithra
  |

  'ಹೆಬ್ಬೆಟ್ ರಾಮಕ್ಕ' ಸಿನಿಮಾ ಮೂಲಕ ಅದ್ಬುತ ನಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದ ನಟಿ ತಾರಾ ಮತ್ತೊಂದು ವಿಶೇಷ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ತಾರಾ ಅನುರಾಧ ಅಭಿನಯದ ಹೊಸ ಸಿನಿಮಾ 'ಸಾವಿತ್ರಿಬಾಯಿ ಫುಲೆ' ತೆರೆಗೆ ಬರಲು ಸಿದ್ದವಾಗಿದೆ.

  ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಮನಿತರ ಮೊದಲ ಧ್ವನಿ 'ಸಾವಿತ್ರಿಬಾಯಿ ಫುಲೆ' ಅವರ ಜೀವನ ಆಧಾರಿತ ಚಿತ್ರ ಇದಾಗಿದ್ದು, ವಿಶಾಲ್ ರಾಜ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಡಾ, ಸರಾಜೂ ಕಾಟ್ಕರ್ ಅವರ ಕಾದಂಬರಿ ಆಧರಿಸಿ ಚಿತ್ರಕ್ಕೆ ಕಥೆಯನ್ನು ಬರೆಯಲಾಗಿದೆ.

  ಬಸವರಾಜು 'ಸಾವಿತ್ರಿಬಾಯಿ ಫುಲೆ' ಚಿತ್ರಕ್ಕೆ ಬಂಡವಾಳ ಹಾಕಿದ್ದು ಚಿತ್ರ ಮುಂದಿನ ತಿಂಗಳು ಆಗಸ್ಟ್ 10 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಸಮಾಜದ ಮೇಲೆ ಪ್ರಭಾವ ಬೀರುವಂತಹ ಪಾತ್ರಗಳಿಗೆ ಜೀವ ತುಂಬಿರುವ ನಟಿ ತಾರಾ ಅಭಿನಯದ 'ಸಾವಿತ್ರಿಬಾಯಿ ಫುಲೆ' ಕೂಡ ಜನರ ಮನಸ್ಸು ಗೆಲ್ಲುವ ಸೂಚನೆ ಕೊಟ್ಟಿದೆ.

  ನಟಿ ತಾರಾ ಜೊತೆಯಲ್ಲಿ ಸುಚೇಂದ್ರ ಪ್ರಸಾದ್ ಕೂಡ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ವಿಭಿನ್ನವಾಗಿರುವ ಪೋಸ್ಟರ್ ಬಿಡುಗಡೆ ಆಗಿದ್ದು ಇನ್ನು ಕೆಲವೇ ದಿನಗಳಲ್ಲಿ ಟ್ರೇಲರ್ ಕೂಡ ರಿಲೀಸ್ ಆಗಲಿದೆ.

  Read more about: tara kannada movies sandalwood
  English summary
  Kannada Savitribai phule film will be released in August. Actress Tara has acted in the role of Savitribai phule. Suchendra Prasad has appeared in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X