»   » ಹಿರಿಯ ನಿರ್ದೇಶಕ ಕೆಎಸ್ಎಲ್ ಸ್ವಾಮಿ ಆರೋಗ್ಯ ಸ್ಥಿರ

ಹಿರಿಯ ನಿರ್ದೇಶಕ ಕೆಎಸ್ಎಲ್ ಸ್ವಾಮಿ ಆರೋಗ್ಯ ಸ್ಥಿರ

Subscribe to Filmibeat Kannada

ಕನ್ನಡ ಚಿತ್ರರಂಗದ ಹಿರಿಯ ಚೇತನ ಕೆಎಸ್ಎಲ್ ಸ್ವಾಮಿ(ರವಿ) ಅವರ ಆರೋಗ್ಯದಲ್ಲಿ ಏರು ಪೇರು ಕಂಡುಬಂದಿದೆ. ಶ್ವಾಸಕೋಶದ ಸೋಂಕು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಯಶವಂತಪುರ ಸಮೀಪದ ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆ.ಎಸ್.ಎಲ್ ಸ್ವಾಮಿ ಅವರ ಆರೋಗ್ಯ ಕಳೆದ ಒಂದು ವಾರದಿಂದ ಕೈಕೊಟ್ಟಿತ್ತು. ರವಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.[ಕೆಎಸ್ ಎಲ್ ಸ್ವಾಮಿ ಧಾರಾವಾಹಿ ಶ್ರೀ ಶಂಕರ ದಿಗ್ವಿಜಯ]

Kannada senior director KSL Swamy Health condition stable

ಗಾಂಧಿನಗರ, ಭಾಗ್ಯಜ್ಯೋತಿ, ಮಲಯ ಮಾರುತ ಸೇರಿದಂತೆ 35 ಕ್ಕೂ ಅಧಿಕ ಚಿತ್ರಗಳನ್ನು ರವಿ ನಿರ್ದೇಶನ ಮಾಡಿದ್ದಾರೆ. ರವಿ ನಿರ್ದೇಶನದ ಜಂಬೂ ಸವಾರಿ ಮಕ್ಕಳ ಸಿನಿಮಾಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಸಿಕ್ಕದೆ. ಪುಟ್ಟಣ್ಣ ಕಣಗಾಲ್ ಜೊತೆಯೂ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸ್ವಾಮಿ ಕಥೆಗಾರ, ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದ ಸ್ವಾಮಿ ಅವರ ನಟನೆಗೆ ಮಾರು ಹೋಗದವರಿಲ್ಲ. ಮೇರು ನಿರ್ದೇಶಕ ಜಿ.ವಿ.ಅಯ್ಯರ್ ಮತ್ತು ಎಂ.ಆರ್.ವಿಠಲ್ ಅವರ ಬಳಿ ಕೆಲಸ ಕಲಿತಿದ್ದ ಸ್ವಾಮಿ 1966ರಲ್ಲಿ 'ತೂಗುದೀಪ' ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

English summary
Sandalwood senior actor and director KSL Swamy fell ill from last one week.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X