»   » ಅಮೇರಿಕ ಕನ್ನಡಿಗರ ಹೆಮ್ಮೆಯ ಪ್ರಯತ್ನ ಈ 'ಭಾಸ' ಕಿರುಚಿತ್ರ

ಅಮೇರಿಕ ಕನ್ನಡಿಗರ ಹೆಮ್ಮೆಯ ಪ್ರಯತ್ನ ಈ 'ಭಾಸ' ಕಿರುಚಿತ್ರ

Posted By:
Subscribe to Filmibeat Kannada

"ಭಾಸ"....ಅಮೇರಿಕದಲ್ಲಿರುವ ಕನ್ನಡಿಗರೇ ಸೇರಿ ತಯಾರಿಸಿರುವ ವಿಭಿನ್ನ ಕಿರುಚಿತ್ರ. ಬೋಸ್ಟನ್ ನಗರದಲ್ಲಿರುವ ಕನ್ನಡ ಸಂಘ 'ಮಂದಾರ ಕನ್ನಡ ಕೂಟ'ದ ಸಹಯೋಗದಲ್ಲಿ 'Depth of Thoughts film house' ಮೂಲಕ ಸಂಪೂರ್ಣವಾಗಿ ಅಮೇರಿಕ ಕನ್ನಡಿಗರು ಒಟ್ಟುಗೂಡಿ ಸಿದ್ದಮಾಡಿರುವ ಕುತೂಹಲಭರಿತವಾದ ಕಿರುಚಿತ್ರವಿದು.

ಕನ್ನಡದ ಖ್ಯಾತ ವಿತರಣೆ ಸಂಸ್ಥೆ 'ಕಸ್ತೂರಿ ಮೀಡಿಯಾ' ಅಮೇರಿಕದ ವಿವಿಧ ನಗರಗಳಲ್ಲಿ 'ಭಾಸ' ಕಿರುಚಿತ್ರವನ್ನ ರಿಲೀಸ್ ಮಾಡಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾದ ಬಳಿಕ, Framingham, Massachusetts ನಲ್ಲೂ ಪ್ರದರ್ಶನ ಮಾಡುವಂತೆ ಆಹ್ವಾನ ಬಂದಿದೆ.

Kannada Short Film Bhaasa Made by America Kannadigas

ವಿಶೇಷ ಅಂದ್ರೆ, ಭಾರತದ ಕೆಲವು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ 'ಭಾಸ' ಆಯ್ಕೆ ಆಗಿದೆ. ಇತ್ತೀಚೆಗಷ್ಟೇ RJ ಪ್ರದೀಪ್ ಅವರ ಸಖತ್ ಸ್ಟುಡಿಯೋ ಮೂಲಕ 'ಭಾಸ' ಕಿರುಚಿತ್ರ ಯ್ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಶಂಸೆ ಗಿಟ್ಟಿಸಿಕೊಂಡಿದೆ.

ಅಂದ್ಹಾಗೆ, 'ಭಾಸ' ಕಿರುಚಿತ್ರವನ್ನ ವಿಜೇತ ಅರಳಗುಪ್ಪಿ ಅವರು ನಿರ್ದೇಶನ ಮಾಡಿದ್ದು, ಹರ್ಷ ನಲವಾಡ್ ಸಂಗೀತ ಸಂಯೋಜಿಸಿದ್ದಾರೆ. ಕಿಶಾನ್ ಬದ್ರಿನಾಥ್ ಅವರು ಚಿತ್ರಕಥೆ ಬರೆದಿದ್ದು, ಮಾಧವ್ ರಾವ್ ಆಗುಂಬೆ ಅವರ ಅದ್ಭುತ ಛಾಯಾಗ್ರಹಣ ಈ ಚಿತ್ರಕ್ಕಿದೆ.

Kannada Short Film Bhaasa Made by America Kannadigas

'ಭಾಸ' ಕಿರುಚಿತ್ರದಲ್ಲಿ ಕಿಶಾನ್ ಬದ್ರಿನಾಥ್, ಮೇಘನಾ ಅನೂಪ್ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಉಳಿದಂತೆ ಮಧುಸೂದನ್ ಅಕ್ಕಿಹೆಬ್ಬಾಳ್, ಸುಧಾಕರ್ ರಾವ್, ವರವಾಣಿ ದ್ವಾರ್ಕಿ, ರಾಣಿ ದ್ವಾರ್ಕಿ, ಅಲೆಕ್ಸ್ ರೋಜನ್ ಫೆಲ್ಡ್ ಮತ್ತು ಉಷಾ ರಾವ್ ಅಭಿನಯಿಸಿದ್ದಾರೆ.

English summary
'Bhaasa' is a kannada short film made by a group of kannadigas in the US, Directed by Vijeth Aralaguppi. The short film has been made completely in the US by a bunch of kannadigas with support from 'Mandaara Kannada Koota', a kannada association based in Boston.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada