For Quick Alerts
  ALLOW NOTIFICATIONS  
  For Daily Alerts

  ಹೊಸ ಇತಿಹಾಸ ಬರೆದ ಕನ್ನಡ ಕಿರುಚಿತ್ರ ಸ್ಮೈಲ್ ಗುರು ಟ್ರೈಲರ್

  By Mahesh
  |

  ಕನ್ನಡ ಕಿರುಚಿತ್ರವೊಂದರ ಟ್ರೈಲರ್ ಐತಿಹಾಸಿಕ ಸಾಧನೆ ಮಾಡಿದೆ. ಬಹುಶಃ ಎಲ್ಲಾ ಭಾಷೆಗಳ ಕಿರುಚಿತ್ರ ಟ್ರೈಲರ್ ಇಷ್ಟು ದೊಡ್ಡ ಮಟ್ಟದ ಸದ್ದು ಮಾಡಿಲ್ಲ. ಇಂಥದ್ದೊಂದು ದಾಖಲೆ ಬರೆದಿರುವುದು ಸ್ಮೈಲ್ ಗುರು ಚಿತ್ರದ ಟ್ರೈಲರ್.

  ನಾವೇನು ಮ್ಯಾಜಿಕ್ ಮಾಡಿಲ್ಲ, ಟ್ರೈಲರ್ ನಲ್ಲಿ ಬರುವ ಡೈಲಾಗ್ ಜನರಿಗೆ ಇಷ್ಟವಾಗಿದೆ. ಹೀಗಾಗಿ ಎಷ್ಟು ವ್ಯೂಸ್ ಬಂದಿದೆ. ನಿರೀಕ್ಷೆ ಹುಸಿಗೊಳಿಸದಂತೆ ಕಿರುಚಿತ್ರ ಮೂಡಿ ಬಂದಿದೆ ಎಂದು ಚಿತ್ರದ ನಾಯಕ ಸ್ಮೈಲ್ ಗುರು ರಕ್ಷಿತ್ ಅವರು ಫಿಲ್ಮಿಬೀಟ್ ಗೆ ತಿಳಿಸಿದ್ದಾರೆ. [ದಾಖಲೆ ಬರೆದ ಸ್ಮೈಲ್ ಗುರು ಕಿರು ಚಿತ್ರದ ಪ್ರೊಮೊ ]

  ಸ್ಮೈಲ್ ಗುರು ಕಿರುಚಿತ್ರದ ಟ್ರೈಲರ್ ಸೆಪ್ಟೆಂಬರ್ 9, 2016ರಂದು ಯೂಟ್ಯೂಬಿನಲ್ಲಿ ಅಪ್ಲೋಡ್ ಆಗಿದ್ದು, ನವೆಂಬರ್ 16ರ ಈ ಸಮಯದ ಎಣಿಕೆಯಂತೆ 2.51.924 ವೀಕ್ಷಣೆ ಪಡೆದುಕೊಂಡಿದೆ. ["ಸ್ಮೈಲ್ ಗುರು" ಅನ್ನುವರ ಮುಖದಲ್ಲಿ ನಿರೀಕ್ಷೆ ಭಾರ]

  ರಕ್ಷಿತ್, ಮೇಘಾ ಶೆಣೈ, ಅಭಿಲಾಶ್ ಮುಖ್ಯ ಪಾತ್ರದಲ್ಲಿರುವ ಸ್ಮೈಲ್ ಗುರು ಕಿರುಚಿತ್ರದಲ್ಲಿ ಡೈಲಾಗ್ ಗಳು, ಹಾಗೂ ರಕ್ಷಿತ್ ಅವರ ಸ್ಮೈಲ್ ಹೈಲೇಟ್ ಎಂದರೆ ತಪ್ಪಾಗಲಾರದು.

   ಅಭಿಲಾಶ್ ಅವರ ನಿರ್ದೇಶನ

  ಅಭಿಲಾಶ್ ಅವರ ನಿರ್ದೇಶನ

  ಅಭಿಲಾಶ್ ಅವರ ನಿರ್ದೇಶನ ಈ ರೋಮ್ಯಾಂಟಿಕ್, ಕಾಮಿಡಿ ಪ್ರೇಮಕಥೆಗೆ ಹಿನ್ನಲೆ ಸಂಗೀತವನ್ನು ವಿನೀತ್ ರಾಜ್ ಮೆನನ್ ಹಾಗೂ ಕ್ಲಾರೆನ್ಸ್ ಅಲೆನ್ ಕ್ರಾಸ್ಟಾ ಅವರು ನೀಡಿದ್ದಾರೆ. ಮಹೇಶ್ ಎಸ್ ಅವರ ಸಂಕಲನದಲ್ಲಿ ಮೂಡಿ ಬಂದಿರುವ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.

  ಹೊಸಬರ ತಂಡಕ್ಕೆ ಶುಭ ಹಾರೈಕೆ

  ಹೊಸಬರ ತಂಡಕ್ಕೆ ಶುಭ ಹಾರೈಕೆ

  ಒಗ್ಗರಣೆ ಡಬ್ಬಿ, ಲೈಫ್ ಸೂಪರ್ ಗುರು ಕಾರ್ಯಕ್ರಮ ಮತ್ತು ಗ್ರಹಲಕ್ಷ್ಮೀ ಧಾರಾವಾಹಿಗಳಿಗೆ ಸಹಾಯಕ ಛಾಯಾಗ್ರಾಹಕರಾಗಿದ್ದ ಸೀನು ಕಿರುಚಿತ್ರದ ದೃಶ್ಯಗಳನ್ನು ಸೆರಿಹಿಡಿದಿದ್ದರೆ, ‘ಮುದ್ದು ಮನಸೇ' ಚಿತ್ರಕ್ಕೆ ಸಂಗೀತ ನೀಡಿದ ವಿನೀತ್ ರಾಜ್ ಸ್ವರ ಸಂಯೋಜನೆ ಮಾಡಿದ್ದಾರೆ. ಹೊಸಬರ ಈ ಹೊಸತದ ಪ್ರಯತ್ನಕ್ಕೆ ಸ್ಯಾಂಡಲ್ ವುಡ್ ನ ಅನೇಕ ಮಂದಿ ಪ್ರಶಂಸೆ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.

  ಪ್ರೋಮೋ ವಿಶೇಷ

  ಪ್ರೋಮೋ ವಿಶೇಷ

  ಸ್ಟಾಪ್ ಮೋಷನ್ ತಂತ್ರಜ್ಞಾನದಲ್ಲಿ ಪ್ರೋಮೊ ತಯಾರಿಸಲಾಗಿದೆ. 1200 ಛಾಯಾಚಿತ್ರಗಳನ್ನು ಬಳಸಿ ಈ ಪ್ರೋಮೊ ತಯಾರಿಸಲಾಗಿದೆ. ವಿಡಿಯೊ ತುಣುಕು ಬಳಸಿಕೊಳ್ಳದೆ ಕೇವಲ ಛಾಯಾಚಿತ್ರಗಳನ್ನೇ ಬಳಸಿಕೊಂಡು ಅನಿಮೇಶನ್ ದೃಶ್ಯಗಳನ್ನು ಸಿದ್ಧಪಡಿಸುವ ತಂತ್ರಜ್ಞಾನದ ಮುಂದಾಳು ‘ಸೆವೆಂಟಿ ಎಂಎಂ' ಸ್ಟುಡಿಯೊದ ಮಹೇಶ್.

  ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್

  ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್

  ಈ ಸ್ಲೈಲ್ ಗುರು ಚಿತ್ರದ ಪ್ರೋಮೋ ನಂತರ ಟ್ರೈಲರ್ ದಾಖಲೆ ಬರೆದಿದೆ. ಈಗ ದೊಡ್ಡ ಬ್ಯಾನರ್ ಚಿತ್ರಗಳನ್ನು ರಿಲೀಸ್ ಮಾಡುವಂತೆ ಸ್ಮೈಲ್ ಗುರು ಚಿತ್ರವನ್ನು ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಚಿತ್ರ ತಂಡ ಮುಂದಾಗಿದೆ. ಈ ಹೊಸ ಪ್ರಯತ್ನಕ್ಕೆ ಕೆಎಫ್ ಸಿಸಿ ಕೂಡಾ ಬೆಂಬಲ ವ್ಯಕ್ತಪಡಿಸುವ ನಿರೀಕ್ಷೆಯಿದೆ.

  ಟ್ರೈಲರ್ ನೀವು ನೋಡಿ ಆನಂದಿಸಿ

  ಈ ಸ್ಲೈಲ್ ಗುರು ಚಿತ್ರದ ಪ್ರೋಮೋ ನಂತರ ಟ್ರೈಲರ್ ದಾಖಲೆ ಬರೆದಿದೆ. ಚಿತ್ರದ ಟ್ರೈಲರ್ ನೀವು ನೋಡಿ ಆನಂದಿಸಿ

  English summary
  Kannada short movie Smileguru Trailer creates new history. For the first in the history of short films across all the languages a short movie trailer has crossed 2 lakh 50 thousand viewers on Uoutube. Smileguru is a romantic short film starring Smileguru Rakshit, Megha Shenoy, Abhilash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X