»   » ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಗಾಯಕ ಎಲ್.ಎನ್.ಶಾಸ್ತ್ರಿ

ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಗಾಯಕ ಎಲ್.ಎನ್.ಶಾಸ್ತ್ರಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಎಲ್.ಎನ್.ಶಾಸ್ತ್ರಿ ಅವರು ಇಂದು ಅನಾರೋಗ್ಯದ ಕಾರಣ ಕೋಣೆಯಲ್ಲಿ ಮಲಗುವಂತಾಗಿದೆ. ಕನ್ನಡದ ಸ್ಟಾರ್ ನಟರ ಚಿತ್ರಗಳ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಶಾಸ್ತ್ರಿ ಅವರ ಪರಿಸ್ಥಿತಿ ಇಂದು ತೀರಾ ಶೋಚನೀಯವಾಗಿದೆ.

ಇದಕ್ಕೆ ಕಾರಣ ಎಲ್.ಎನ್.ಶಾಸ್ತ್ರಿ ಅವರು ಕ್ಯಾನ್ಸರ್ ರೋಗದಿಂದ ತುತ್ತಾಗಿರುವುದು. ಹೌದು, ಜನಪ್ರಿಯ ಗಾಯಕ ಕರುಳು ಕ್ಯಾನ್ಸರ್ ರೋಗದಿಂದ ನರುಳುತ್ತಿದ್ದಾರೆ.

Kannada Singer L.N.Shastri is suffering from cancer.

ಎಲ್.ಎನ್.ಶಾಸ್ತ್ರಿ ಅವರ ಸ್ಥಿತಿ ನೋಡಿ ಪತ್ನಿ ಗಾಯಕಿ ಸುಮಾ ಶಾಸ್ತ್ರಿ ಪೂರ್ತಿ ಕಂಗಲಾಗಿದ್ದಾರೆ. ಇನ್ನು ಎಲ್.ಎನ್.ಶಾಸ್ತ್ರಿ ಅವರು ಆಸ್ಪತ್ರೆಯಲ್ಲಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದನ್ನ ನೋಡಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

'ಎ', 'ಜನುಮದ ಜೋಡಿ', 'ಸಿಪಾಯಿ', 'ಜೋಡಿ ಹಕ್ಕಿ' ಚಿತ್ರದ ಹಾಡುಗಳು ಸೇರಿದಂತೆ 3000ಕ್ಕೂ ಅಧಿಕ ಹಾಡನ್ನು ಎಲ್.ಎನ್.ಶಾಸ್ತ್ರಿ ಹಾಡಿದ್ದಾರೆ. ಸಂಗೀತ ನಿರ್ದೇಶಕರು ಆಗಿದ್ದ ಅವರು 15 ಅಧಿಕ ಚಿತ್ರಗಳಿಗೆ ಮ್ಯೂಸಿಕ್ ನೀಡಿದ್ದಾರೆ. ಜೊತೆಗೆ 'ಜನುಮದ ಜೋಡಿ' ಚಿತ್ರದ 'ಕೋಲು ಮಂಡೆ...' ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

Kannada Singer L.N.Shastri is suffering from cancer.

ಕರುಳು ಕ್ಯಾನ್ಸರ್ ನಿಂದ ಬಳಲುತ್ತಿರುವ ಎಲ್.ಎನ್.ಶಾಸ್ತ್ರಿ ಅವರಿಗೆ ಈಗ ಆರ್ಥಿಕವಾಗಿ ಸಹಾಯಬೇಕಾಗಿದೆ. ಶಾಸ್ತ್ರಿ ಅವರಿಗೆ ಸಹಾಯ ಮಾಡುವ ಇಚ್ಛೆ ಇದ್ದವರು ಈ ಕೆಳಗಿನ ಅವರ ಅಕೌಂಟ್ ನಂಬರ್ ಮೂಲಕ ಸಹಾಯ ಮಾಡಬಹುದು.

ಅಕೌಂಟ್ ನಂಬರ್: LAKSHMI NARAYANA SHASTRY, A/C NO: 54055948416. SBI BANK, VINAYAKA LAY OUT, VINAYAKA NAGARA, BENGALURU, KARNATAKA, INDIA. IFSC: SBINOO40790.

English summary
Kannada Singer L.N.Shastri is suffering from cancer

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada