Just In
Don't Miss!
- News
ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ: ದೀದಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರಗಳು: ಚಿರು ಸರ್ಜಾ-ಮೇಘನಾ ಮದುವೆ ಕಣ್ತುಂಬಿಕೊಳ್ಳಿ

ಸ್ಯಾಂಡಲ್ ವುಡ್ ಅಂಗಳದಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ತಾರಾ ಜೋಡಿ ಇಂದು ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಂದು ವಾರದ ಹಿಂದಿನಿಂದಲೂ ಎರಡು ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿತ್ತು. ಮೇಘನಾ ರಾಜ್ ಅವರ ತಾಯಿ ಪ್ರಮಿಳಾ ಜೋಷಾಯಿ ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದರಿಂದ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡು ರೀತಿಯಲ್ಲಿ ಮದುವೆ ನಡೆಸಲಾಗಿತ್ತು.
ಎರಡು ದಿನಗಳ ಹಿಂದೆಯಷ್ಟೇ ಉಂಗುರ ಬದಲಾಯಿಸಿಕೊಂಡು ಕ್ರಿಶ್ಚಿಯನ್ ಪದ್ಧತಿಯಂತೆ ಚಿರು ಹಾಗೂ ಮೇಘನಾ ದಂಪತಿಗಳಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಮೇಘನಾ ರಾಜ್ ಅವರ ತಂದೆ ಹಾಗೂ ಚಿರಂಜೀವಿ ಸರ್ಜಾ ಅವರ ಕುಟುಂಬದ ಇಷ್ಟದಂತೆ ಇಂದು ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯಕ್ರಮಗಳು ಜರುಗಿವೆ.
ಚಿರಂಜೀವಿ ಕೈ ಹಿಡಿದ ಸೌಭಾಗ್ಯವತಿ ಮೇಘನಾ
ಎರಡು ಕುಟುಂಬಸ್ಥರು ಸಿನಿಮಾರಂಗದಲ್ಲಿ ದೊಡ್ಡ ಹೆಸರು ಮಾಡಿರುವುದರಿಂದ ಅನೇಕ ಸಿನಿಮಾ ತಾರೆಗಳು ಮದುವೆ ಬಂದ ನವ ಜೋಡಿಗೆ ಶುಭಕೋರಿದರು. ಹಾಗಾದರೆ ಮದುವೆ ಯಾರೆಲ್ಲಾ ಬಂದಿದ್ದರು? ಮದುವೆ ಸಂಭ್ರಮ ಹೇಗಿತ್ತು ಎನ್ನುವುದನಮ್ನ ಪೋಟೋಗಳನ್ನ ನೋಡಿ.
ಚಿತ್ರ ಕೃಪೆ- ಪವನ್ ಶರ್ಮ

ಹಿಂದೂ ಸಂಪ್ರದಾಯದಂತೆ ಮದುವೆ
ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮದುವೆ ಇಂದು ಪ್ಯಾಲೆಸ್ ಗ್ರೌಂಡ್ ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯಿತು. ಚಿರು ರೇಷ್ಮೇ ಕಚ್ಚೆ ಪಂಚೆ, ಪೇಟ, ಶಲ್ಯ ಹಾಕಿ ಮಿಂಚಿದ್ರೆ. ಮೇಘನಾ ರಾಜ್ ಕಡು ಬಿಳಿ ನೀಲಿ ಬಣ್ಣದ ಸೀರಿ ಧರಿಸಿದ್ದರು.

ಮೇಘನಾ ಮದುವೆಯಲ್ಲಿ ನಜ್ರಿಯಾ ನಜೀಮ್
ನಟಿ ಮೇಘನಾ ರಾಜ್ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಮಾಲಿವುಡ್ ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅಲ್ಲಿಯ ಸ್ಟಾರ್ ನಟಿ ನಜ್ರಿಯಾ ನಜೀಮ್ ಕೇರಳದಿಂದ ಮೇಘನಾ ಮದುವೆಗಾಗಿ ಆಗಮಿಸಿದ್ದರು.

ಮದುವೆಯಲ್ಲಿ ಹಿರಿಯ ಕಲಾವಿದರು
ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆಗೆ ಸಾಕಷ್ಟು ಹಿರಿಯ ಕಲಾವಿದರು ಬಂದು ಹಾರೈಸಿದ್ದಾರೆ. ನಟಿ ಗಿರಿಜಾ ಲೋಕೇಶ್, ರಾಮಕೃಷ್ಣ, ಟಿ ಎಸ್ ನಾಗಭರಣ, ರಮೇಶ್ ಭಟ್ ಶಿವರಾಂ ಇನ್ನು ಅನೇಕರು ಭಾಗಿ ಆಗಿದ್ದರು.

ಸಿನಿ ಸ್ಟಾರ್ ಗಳ ಸಂಭ್ರಮ
ಕೇವಲ ಹಿರಿಯ ಕಲಾವಿದರು ಮಾತ್ರವಲ್ಲದೆ ಈಗಿನ ಸ್ಯಾಂಡಲ್ ವುಡ್ ಸ್ಟಾರ್ ಗಳೆಲ್ಲರೂ ಮದುವೆಯಲ್ಲಿ ಸಂಭ್ರಮಿಸಿದ್ದಾರೆ. ವಿನಯ್ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪನ್ನಗ ಭರಣ, ಪ್ರಜ್ವಲ್ ದೇವರಾಜ್ ಇನ್ನು ಅನೇಕರು ವಿವಾಹದಲ್ಲಿ ಭಾಗಿ ಆಗಿದ್ದಾರೆ.

ಅಪ್ಪ-ಮಗಳ ಜೋಡಿ ಆಕರ್ಷಣೆ
ಇಡೀ ಮದುವೆಯಲ್ಲಿ ಬಂದವರನ್ನೆಲ್ಲಾ ಆಕರ್ಷಣೆ ಮಾಡಿದ್ದು ನಟ ಅರ್ಜುನ್ ಸರ್ಜಾ ಹಾಗೂ ಐಶ್ವರ್ಯ ಸರ್ಜಾ. ಅದಷ್ಟೆ ಅಲ್ಲದೆ ಧ್ರುವ ಸರ್ಜಾ ಕೂಡ ಟ್ರೆಡಿಶನಲ್ ಡ್ರಸ್ ನಲ್ಲಿ ಮಿಂಚುತ್ತಿದ್ದರು.