»   » ಬಾಬಾ ರಾಮ ದೇವ್ ಜೊತೆ ಉಪೇಂದ್ರ ಪ್ರಾಣಯಾಮ ಬ್ಯಾಟಿಂಗ್

ಬಾಬಾ ರಾಮ ದೇವ್ ಜೊತೆ ಉಪೇಂದ್ರ ಪ್ರಾಣಯಾಮ ಬ್ಯಾಟಿಂಗ್

Posted By:
Subscribe to Filmibeat Kannada

ಆಗಾಗ ತಮ್ಮ ಸಿನಿಮಾ ಗಳಲ್ಲಿ ದೇವರ ಬಗ್ಗೆ ಮತ್ತು ಪ್ರೀತಿ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಏನೇನಾದರೂ ಹೇಳಿ ಜನರ ತಲೆಗೆ ಹುಳ ಬಿಡುತ್ತಿರುತ್ತಾರೆ. ಅವರು ಹೇಳಿದ್ದು ಸರಿ ಇತ್ತಾ.. ಅಥವಾ ತಪ್ಪಿತ್ತಾ.., ಎರಡು ರೀತಿ ಹೇಳಿ ಪ್ರಶ್ನೆಗೆ ಉತ್ತರ ನೀವೇ ಹುಡುಕಿಕೊಳ್ಳಿ ಎಂದು ಹಲವು ಸಂಶಯಗಳನ್ನು ಹುಟ್ಟು ಹಾಕಿರುತ್ತಾರೆ. ಸದ್ಯಕ್ಕೆ ಇವೆಲ್ಲಾ ಬಿಟ್ಟು ಈಗ ಪ್ರಾಣಾಯಾಮದ ಕಡೆ ಗಮನ ಹರಿಸಿದ್ದಾರೆ.[ಯಶ್, ಉಪೇಂದ್ರ ಮನೆಯಲ್ಲಿ ಸಂಕ್ರಾಂತಿ ಸಡಗರ ಹೇಗಿತ್ತು ಗೊತ್ತಾ?]

ಅಂದಹಾಗೆ ಭಾರತದ ಸಂಸ್ಕೃತಿ, ಯೋಗ, ಧ್ಯಾನ, ಪ್ರಾಣಯಾಮ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಕಾಮದೇನು ಟೆಲಿಫಿಲ್ಸ್ ನ ಆಯುಷ್ ಚಾನೆಲ್ ಅನ್ನು ಬಾಬಾ ರಾಮದೇವ್ ಬೆಂಗಳೂರಿನಲ್ಲಿ ಲಾಂಚ್ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸಹ ಭಾಗವಹಿಸಿ ಪ್ರಾಣಯಾಮ ಮಾಡಿದ್ದಾರೆ.

ಉದ್ಘಾಟನೆ ವೇಳೆ ಉಪೇಂದ್ರ

ಹಿಂದಿಯಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ಯೋಗ ಕಾರ್ಯಕ್ರಮವನ್ನು ಫೆ.1 ರಿಂದ ಪ್ರತಿದಿನ ಆಯುಷ್ ವಾಹಿನಿಯಲ್ಲಿ ಕನ್ನಡ ಮತ್ತು ತಮಿಳಿನಲ್ಲಿಯೂ ಪ್ರಸಾರ ಮಾಡಲು ಇಂದು ಆಯುಷ್‌ ಚಾನೆಲ್‌ ಅನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡಲಾಯಿತು. ಉದ್ಘಾಟನೆ ಕಾರ್ಯಕ್ರಮದಲ್ಲಿ ನಟ ಉಪೇಂದ್ರ ಸಹ ಭಾಗವಹಿಸಿದ್ದರು.[ಪಂಚೆ ಧರಿಸಿ ಬಂದ ಉಪೇಂದ್ರ ಮತ್ತು ಪ್ರೇಮ ಜೋಡಿ!]

ಉಪೇಂದ್ರ ತುಂಬಾ ಡೈನಾಮಿಕ್: ಸ್ವಾಮಿ ರಾಮ್‌ ದೇವ್

ಕಾರ್ಯಕ್ರಮದ ಉದ್ಘಾಟನೆ ನಂತರ ವೇದಿಕೆಯಲ್ಲಿ ಕುಳಿತಿದ್ದ ಬಾಬಾ ರಾಮ್‌ ದೇವ್ ಮತ್ತು ನಟ ಉಪೇಂದ್ರ ಮಾತನಾಡಿಕೊಳ್ಳುತ್ತಿದ್ದರು. ನಟ ಉಪೇಂದ್ರ ಕುರಿತು ರಾಮ್‌ ದೇವ್ " ಕನ್ನಡ ಸ್ಟಾರ್ ಉಪೇಂದ್ರ ತುಂಬಾ ಡೈನಾಮಿಕ್, ಎನರ್ಜಿಟಿಕ್ ಮತ್ತು ದೇಶಭಕ್ತ ವ್ಯಕ್ತಿ. ಇವರು ನನ್ನ ಜೊತೆ ಪ್ರಾಣಾಯಾಮ ಮಾಡಿದರು' ಎಂದು ಟ್ವೀಟ್ ಮಾಡಿದ್ದಾರೆ.

ಉಪೇಂದ್ರ ಪ್ರಾಣಾಯಾಮ

ಕಾರ್ಯಕ್ರಮದ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಅವರು ಬಾಬಾ ರಾಮ್ ದೇವ್ ಅವರಿಂದ ಪ್ರಾಣಾಯಾಮ ಅಭ್ಯಾಸ ಮಾಡುತ್ತಿರುವ ಫೋಟೋ.

ಉಪೇಂದ್ರ ರವರು ಸೂಪರ್ ಮ್ಯಾನ್

ಉಪೇಂದ್ರ ಅವರು "ಸ್ವಾಮಿಜಿ ಜೊತೆ ಪ್ರಾಣಾಯಾಮ ಮಾಡಿದ ನಂತರ" ಎಂದು ಈ ಮೇಲಿನ ಸೂಪರ್ ಮ್ಯಾನ್ ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.

ಉಪ್ಪಿ ವಿತ್ ರಾಮ್ ದೇವ್

ಕಾರ್ಯಕ್ರಮದ ವೇಳೆ ಉಪೇಂದ್ರ ಮತ್ತು ರಾಮ್ ದೇವ್ ವೇದಿಕೆ ಹಿಂದೆಗೆ ತಿರುಗಿ ತೆಗೆಸಿಕೊಂಡ ಫೋಟೋ.

English summary
AYUSH to learn all the languages of yoga says Baba Ramdev at the launch of AYUSH tv channel in bengaluru Jan.15. 'Kannada star Upendra is a very dynamic, energetic and patriotic person', says Baba Ramdev.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada