»   » ಪಂಚೆ ಧರಿಸಿ ಬಂದ ಉಪೇಂದ್ರ ಮತ್ತು ಪ್ರೇಮ ಜೋಡಿ!

ಪಂಚೆ ಧರಿಸಿ ಬಂದ ಉಪೇಂದ್ರ ಮತ್ತು ಪ್ರೇಮ ಜೋಡಿ!

Posted By:
Subscribe to Filmibeat Kannada

'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಈ ಹೆಸರೇ ಎಷ್ಟೊಂದು ಚೆನ್ನಾಗಿದೆ ಅಲ್ವಾ. ಇದು ಬರೀ ಹೆಸರಲ್ಲಾ. ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ಈಗ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾದ ಹೆಸರು.[ಉಪೇಂದ್ರ ಮತ್ತು ನಟಿ ಪ್ರೇಮ ಕುರಿತ ಎಕ್ಸ್ ಕ್ಲೂಸಿವ್ ಸುದ್ದಿ ಇಲ್ಲಿದೆ.!]

17 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಪ್ರೇಮ ಒಂದಾಗಿ ನಟಿಸಿರುವ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮಾ' ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಈಗ ಪ್ರೇಕ್ಷಕರು ಸಿನಿಮಾ ತೆರೆ ಮೇಲೆ ಯಾವಾಗ ಬರುತ್ತೋ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಈಗ ಇದಕ್ಕೆ ಬ್ರೇಕ್ ಬಿದ್ದಿದೆ. ಮುಂದೆ ಓದಿ..

ಚಿತ್ರೀಕರಣ ಕಂಪ್ಲೀಟ್

17 ವರ್ಷಗಳ ನಂತರ ಉಪೇಂದ್ರ ಮತ್ತು ಪ್ರೇಮ ತೆರೆ ಹಂಚಿ ಕೊಂಡಿರುವ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮಾ' ಸಿನಿಮಾ ಈಗ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಮಾತ್ರ ಬಾಕಿ ಇದೆಯಂತೆ.['ಉಪೇಂದ್ರ' ಮತ್ತೆ ಹುಟ್ಟಿ ಬರ್ಬೇಕಂತೆ.! ಇದು 'ಪ್ರೇಮ' ಬಯಕೆ.!]

ಚಿತ್ರತಂಡದಿಂದ ಪೋಸ್ಟರ್ ಬಿಡುಗಡೆ

'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದ್ದು, ರೀ ಎಂಟ್ರಿ ಕೊಟ್ಟಿರುವ ಉಪೇಂದ್ರ ಮತ್ತು ಪ್ರೇಮ ಇಬ್ಬರೂ ಪಂಚೆ ಧರಿಸಿದ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

H2O ನಿರ್ದೇಶಕರಿಂದ ಆಕ್ಷನ್ ಕಟ್

ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಉಪೇಂದ್ರ ರವರ H2O ಸಿನಿಮಾ ನಿರ್ದೇಶನ ಮಾಡಿದ್ದ ಎನ್‌ ಲೋಕನಾಥ್ 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿರುವುದು. ಈ ಸಿನಿಮಾದ ಮೂಲಕ ಉಪೇಂದ್ರ ಮತ್ತು ನಿರ್ದೇಶಕ ಎನ್‌ ಲೋಕನಾಥ್‌ ರವರು ಮತ್ತೆ ಒಂದಾಗಿದ್ದಾರೆ.

ಉಪೇಂದ್ರ ಮತ್ತು ಪ್ರೇಮ ಮತ್ತೆ ಒಂದೇ ತೆರೆ ಮೇಲೆ

ಅಂದಹಾಗೆ 1999 ರಲ್ಲಿ ಬಿಡುಗಡೆ ಆಗಿದ್ದ 'ಉಪೇಂದ್ರ' ಚಿತ್ರದಲ್ಲಿ ಉಪೇಂದ್ರ ಮತ್ತು ಪ್ರೇಮ ತೆರೆ ಹಂಚಿಕೊಂಡಿದ್ದರು. ಈಗ 17 ವರ್ಷಗಳ ನಂತರ ಪ್ರೇಮ ಮತ್ತು ಉಪೇಂದ್ರ ಒಂದೇ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

ದ್ವಿಪಾತ್ರದಲ್ಲಿ ಉಪೇಂದ್ರ

ಉಪೇಂದ್ರ ಮತ್ತೆ ಹುಟ್ಟಿ ಬಾ ಚಿತ್ರದಲ್ಲಿ ಉಪೇಂದ್ರ ರವರು ಡಬಲ್ ಆಕ್ಟಿಂಗ್ ಮಾಡಿದ್ದಾರೆ. ಚಿತ್ರದಲ್ಲಿ ಪ್ರೇಮ ಮಾತ್ರವಲ್ಲದೇ, ನಟಿ ಶೃತಿ ಹರಿಹರನ್ ಮತ್ತು ನಟಿ ಹರ್ಷಿಕಾ ಪೂಣಚ್ಚ ಸಹ ನಟಿಸಿದ್ದಾರೆ.

ಸ್ವಮೇಕ್ ಅಲ್ಲ..

ಉಪೇಂದ್ರ ಮತ್ತು ಪ್ರೇಮ ಮತ್ತೆ ಒಂದಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರ ಸ್ವಮೇಕ್‌ ಅಲ್ಲ. ಹೌದು, 'ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ' ಚಿತ್ರ ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಮತ್ತು ರಮ್ಯಾಕೃಷ್ಣ ಕಾಂಬಿನೇಷನ್‌ ನಲ್ಲಿ ಮೂಡಿಬಂದಿದ್ದ 'ಸೊಗ್ಗಾಡೆ ಚಿನ್ನಿ ನಾಯನಾ' ಚಿತ್ರದ ರಿಮೇಕ್‌ ಆಗಿದೆ.

English summary
Upendra's 'Upendra Matte Hutti Baa, Inti Prema' film team Released poster of the film. H20 director Lokanath directed the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada