twitter
    For Quick Alerts
    ALLOW NOTIFICATIONS  
    For Daily Alerts

    ಸಂಯುಕ್ತಾ ಹೆಗಡೆ ಮೇಲೆ ಹಲ್ಲೆ: ನಟಿಯ ಬೆಂಬಲಕ್ಕೆ ನಿಂತ ಕನ್ನಡದ ಸ್ಟಾರ್ಸ್

    |

    ಕಿರಿಕ್ ಹುಡುಗಿ ಸಂಯುಕ್ತಾ ಹೆಗಡೆ ಮತ್ತು ಸ್ನೇಹಿತರ ಮೇಲೆ ಗುಂಪೊಂದು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದೆ. ಬೆಂಗಳೂರಿನ ಪಾರ್ಕ್ ವೊಂದರಲ್ಲಿ ಈ ಘಟನೆ ನಡೆದಿದೆ. ವಿಡಿಯೋ ಚಿತ್ರೀಕರಿಸಿಕೊಂಡಿರುವ ಸಂಯುಕ್ತಾ ಹೆಗಡೆ, 'ಪಾರ್ಕ್‌ನಲ್ಲಿ ಗೆಳತಿಯರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಕವಿತಾ ರೆಡ್ಡಿ ಎನ್ನುವ ಮಹಿಳೆ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

    Recommended Video

    Ganja ಬಗ್ಗೆ ತಪ್ಪು ಕಲ್ಪನೆ ಬೇಡ , ಮುಕ್ತವಾಗಿ ಚರ್ಚಿಸೋಣ ಬನ್ನಿ | Rakesh Adiga | Filmibeat Kannada

    ಘಟನೆ ನಡೆಯುತ್ತಿದ್ದಂತೆಯೇ ನಟಿ ಸಂಯುಕ್ತಾ ಹೆಗಡೆ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, "ನಮ್ಮ ದೇಶದ ಭವಿಷ್ಯ ನಾವು ಇಂದು ಏನು ಮಾಡುತ್ತೇವೆ ಎಂಬುದರ ಮೇಲೆ ಪ್ರತಿಫಲಿಸುತ್ತದೆ. ಆಗರ ಲೇಕ್ ನಲ್ಲಿ ಕವಿತಾ ರೆಡ್ಡಿ ನಮ್ಮನ್ನು ನಿಂದಿಸಿ, ಅಪಹಾಸ್ಯ ಮಾಡಿದ್ದಾರೆ. ನನ್ನ ಬಳಿ ಹೆಚ್ಚು ಸಾಕ್ಷಿ ಇದೆ ಮತ್ತು ಹೆಚ್ಚಿನ ವಿಡಿಯೋಗಳಿವೆ. ಇದನ್ನು ಪರಿಶೀಲಿಸುವಂತೆ ನಾನು ಮನವಿ ಮಾಡುತ್ತೇನೆ" ಎಂದು ಬರೆದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

    ಆರ್‌ಸಿಬಿ ತಂಡದಲ್ಲಿ ಯಾರೆಲ್ಲಾ ಇರಬೇಕು? ಇದು ಸಿಂಪಲ್ ಸುನಿ ಇಲೆವೆನ್ಆರ್‌ಸಿಬಿ ತಂಡದಲ್ಲಿ ಯಾರೆಲ್ಲಾ ಇರಬೇಕು? ಇದು ಸಿಂಪಲ್ ಸುನಿ ಇಲೆವೆನ್

    ಸಂಯುಕ್ತಾ ಮೇಲಾದ ಹಲ್ಲೆಯನ್ನು ಖಂಡಿಸಿ, ಸಾಕಷ್ಟು ಮಂದಿ ಸಂಯುಕ್ತ ಬೆಂಬಲಕ್ಕೆ ನಿಂತಿದ್ದಾರೆ. ಮುಂದೆ ಓದಿ..

     ನಿರ್ದೇಶಕ ಸಿಂಪಲ್ ಸುನಿ

    ನಿರ್ದೇಶಕ ಸಿಂಪಲ್ ಸುನಿ

    "ಸಂಯುಕ್ತ ಹೆಗಡೆಯವರ ತರಲೆ, ಕೀಟಲೆ ಕೆಲವೊಮ್ಮೆ ಅತಿ ಎನಿಸಬಹುದು. ಆದರೆ ಈ ವಿಷಯದಲ್ಲಿ ನ್ಯಾಯ ಸಿಗಬೇಕಾಗಿರುವುದು ಸಂಯುಕ್ತಾ ಅವರಿಗೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ" ಎಂದು ಬರೆದುಕೊಂಡು ಸಂಯುಕ್ತಾಗೆ ನ್ಯಾಯ ಸಿಗಬೇಕು ಎಂದು ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.

     ನಟಿ ಪಾರುಲ್ ಯಾದವ್

    ನಟಿ ಪಾರುಲ್ ಯಾದವ್

    "ನನಗೆ ಇದನ್ನು ಹೇಳಲು ಇಷ್ಟವಿಲ್ಲ, ಆದರೆ ಕೆಲವು ಮಹಿಳೆಯರು ನಿಜವಾದ ಅತ್ಯಾಚಾರಿಗಳಿಗಿಂತ ಹೆಚ್ಚು ಅಪರಾಧಿಗಳು. ಮಹಿಳೆಯರ ಮೇಲೆ ಹೀಗೆ ಹಲ್ಲೆ ಮಾಡಿದ ಕವಿತಾ ರೆಡ್ಡಿಯನ್ನು ಜೈಲಿಗೆ ಹಾಕಬೇಕು." ಎಂದು ನಟಿ ಪಾರುಲ್ ಯಾದವ್ ಟ್ವೀಟ್ ಮಾಡಿ ಸಂಯುಕ್ತಾ ಬೆಂಬಲಕ್ಕೆ ನಿಂತಿದ್ದಾರೆ.

    ನೈತಿಕ ಪೊಲೀಸ್‌ಗಿರಿ: ಕಿರಿಕ್ ಹುಡುಗಿ ಮೇಲೆ ಗುಂಪು ದಾಳಿ, ಹಲ್ಲೆ ಆರೋಪನೈತಿಕ ಪೊಲೀಸ್‌ಗಿರಿ: ಕಿರಿಕ್ ಹುಡುಗಿ ಮೇಲೆ ಗುಂಪು ದಾಳಿ, ಹಲ್ಲೆ ಆರೋಪ

     ಮೇಘನಾ ಗಾಂವ್ಕರ್

    ಮೇಘನಾ ಗಾಂವ್ಕರ್

    "ಇದು ಸರಿಯಲ್ಲ, ನಟಿಯರು ಎಂಬ ಕಾರಣಕ್ಕಾಗಿ ಮತ್ತು ಅವರು ಏನು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಬೆದರಿಕೆ ಹಾಕುವುದು, ಅವಮಾನಿಸುವುದು ಮತ್ತು ಕಿರುಕುಳ ಕೊಡುವುದು. (ಈ ಪ್ರಕರಣದಲ್ಲಿ ಮಹಿಳೆಯರ ಕಂಫರ್ಟ್ ಗಾಗಿ ಇರುವ ಸ್ಪೋರ್ಟ್ಸ್ ಬಟ್ಟೆ) ಇದು ಸಮಾಜದ ಬೂಟಾಟಿಕೆ. ತುಂಬಾ ಬೇಸರವಾಗುತ್ತೆ" ಎಂದು ಟ್ವೀಟ್ ಮಾಡಿದ್ದಾರೆ.

     ಸಂತೋಷ್ ಆನಂದ್ ರಾಮ್

    ಸಂತೋಷ್ ಆನಂದ್ ರಾಮ್

    "ಇಂದು ಸಂಯುಕ್ತ ಹೆಗಡೆ, ನಾಳೆ ನಮ್ಮ ಅಕ್ಕ ಪಕ್ಕದವರಿಗೆ, ನಮ್ಮ ಮನೆಯವರಿಗೆ ಇಂತದ್ದು ನಡೆಯಬಹುದು. ಈ ಮಹಿಳೆಗೆ ಶಿಕ್ಷೆ ಆಗಬೇಕು. ಇದು ಸರಿಯಲ್ಲ" ಎಂದು ಟ್ವೀಟ್ ಮಾಡಿದ್ದಾರೆ. ಸಾಕಷ್ಟು ಮಂದಿ ಈ ಘಟನೆಯನ್ನು ಖಂಡಿಸಿ, ಹಲ್ಲೆ ಮಾಡಿದ ಮಹಿಳೆಯನ್ನು ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.

    English summary
    Simple Suni, Santhosh Ananddram and Meghana others condemning the attack on Actress Samyuktha Hegde.
    Saturday, September 5, 2020, 19:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X