»   » ಇದೇ ಕನ್ನಡದ ಸ್ಟಾರ್ ಗಳು ಬೆವರಿಳಿಸೋ ಹೈಟೆಕ್ ಜಿಮ್

ಇದೇ ಕನ್ನಡದ ಸ್ಟಾರ್ ಗಳು ಬೆವರಿಳಿಸೋ ಹೈಟೆಕ್ ಜಿಮ್

Posted By:
Subscribe to Filmibeat Kannada
ಸೆಲೆಬ್ರಿಟಿಗಳ ನೆಚ್ಚಿನ ಜಿಮ್ |sandalwood stars favorite gym| Filmibeat Kannada

ಸಿನಿಮಾ ಸ್ಟಾರ್ ಗಳು ಸದಾ ಫಿಟ್ ಆಗಿರಬೇಕು. ತೆರೆ ಮೇಲೆ ಮಾತ್ರವಲ್ಲದೆ ಅಭಿಮಾನಿಗಳ ಮುಂದೆಯೇ ಸುಂದರವಾಗಿ ಕಾಣಿಸಿಕೊಳ್ಳಬೇಕು. ಅವರನ್ನ ಸದಾ ಫಿಟ್ ಆಗಿ ಹಾಗೂ ಸುಂದರವಾಗಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವುದು ಅವರದ್ದೇ ಜವಾಬ್ದಾರಿ.

ಸದ್ಯ ಸ್ಯಾಂಡಲ್ ವುಡ್ ನಲ್ಲಿರುವ ಸ್ಟಾರ್ ಗಳೆಲ್ಲರೂ ಫಿಟ್ನೆಸ್ ಮಂತ್ರ ಜಪಿಸುತ್ತಿದ್ದಾರೆ. ಎಲ್ಲಾ ಸ್ಟಾರ್ ಗಳು ಒಂದೇ ಸೂರಿನಡಿಯಲ್ಲಿ ತಮ್ಮ ದೇಹವನ್ನ ದಂಡಿಸುತ್ತಿದ್ದಾರೆ. ಆನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ಸ್ಟಾರ್ ಗಳೆಲ್ಲರೂ ಫಿಟ್ ಆಗಿರಬೇಕು ಎಂದುಕೊಂಡ ತಕ್ಷಣ ನೆನಪಿಸಿಕೊಳ್ಳುವುದು ಈ ಹೈಟೆಕ್ ಜಿಮ್ ಅನ್ನು.

ಅಷ್ಟಕ್ಕೂ ಈ ಸ್ಟಾರ್ ಗಳು ಇದೇ ಜಿಮ್ ನಲ್ಲಿ ವರ್ಕ್ ಔಟ್ ಮಾಡಲು ಕಾರಣವೇನು? ಸಾಕಷ್ಟು ಕಡೆಗಳಲ್ಲಿ ಒಳ್ಳೆ ಅವಕಾಶಗಳು ಸಿಕ್ಕರೂ ಕೂಡ ಸ್ಯಾಂಡಲ್ ವುಡ್ ಕಲಾವಿದರು ಇದೇ ಜಿಮ್ ಗೆ ಬರಲು ಇಂಟ್ರೆಸ್ಟಿಂಗ್ ವಿಚಾರವೊಂದಿದೆ? ಏನದು ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

'ಮಸಲ್ 360' ನಲ್ಲಿ ಸ್ಟಾರ್ ಗಳು

ಚಂದನವನದ ತಾರೆಯರೆಲ್ಲರೂ ತಮ್ಮ ದೇಹವನ್ನ ದಂಡಿಸಲು ಬರುವುದು ಮಸಲ್ 360 ಜಿಮ್ ಗೆ. ಇತ್ತೀಚಿಗಷ್ಟೆ ಕನ್ನಡದ ಸ್ಟಾರ್ ಗಳೇ ಸೇರಿ ಉದ್ಗಾಟನೆ ಮಾಡಿದ ಮಸಲ್ 360 ಜಿಮ್ ಗೆ ಭೇಟಿ ನೀಡಲು ಎರಡು ಕಾರಣವಿದೆ. ಒಂದು ಅಲ್ಲಿಯ ಟ್ರೈನರ್ ಮತ್ತೊಂದು ಕಾರಣ ನಟ ದಿವಂಗತ ಅನಿಲ್ ಕುಮಾರ್.

ಸ್ಟಾರ್ ಟ್ರೈನರ್ ಶ್ರೀನಿವಾಸ್ ಗೌಡ

ನಟ ಧನಂಜಯ, ರಕ್ಷಿತ್ ಶೆಟ್ಟಿ, ಅನಿಶ್, ರಾಜವರ್ಧನ್, ಪೂರ್ಣಚಂದ್ರ, ರಾಕೇಶ್, ಚಂದನ್ ಶೆಟ್ಟಿ, ನಿರಂಜನ್ ಗೌಡ ಇವರಷ್ಟೇ ಅಲ್ಲದೆ ಇನ್ನೂ ಅನೇಕ ಸಿನಿಮಾ ಮತ್ತು ಕಿರುತೆರೆಯ ಸ್ಟಾರ್ ಗಳಿಗೆ ಶ್ರೀನಿವಾಸ್ ಗೌಡ ಅವರೇ ಟ್ರೈನಿಂಗ್ ಮಾಡುತ್ತಾರೆ.

ಅನಿಲ್ ಅವರ ಸ್ನೇಹಿತ ಶ್ರೀನಿವಾಸ್ ಗೌಡ

'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣದ ವೇಳೆ ಸಾವಿಗೀಡಾದ ನಟ ಅನಿಲ್ ಕುಮಾರ್ ಅವರ ಜಿಮ್ ನಲ್ಲಿ ಮೊದಲಿಗೆ ಎಲ್ಲಾ ಸ್ಟಾರ್ ಗಳಿಗೆ ಟ್ರೈನಿಂಗ್ ನೀಡಲಾಗುತ್ತಿತ್ತು. ಈಗ ಶ್ರೀನಿವಾಸ್ ಗೌಡ ಅವರೇ ಹೊಸ ಜಿಮ್ ಓಪನ್ ಮಾಡಿದ್ದು ಚಂದನವನದ ಸ್ಟಾರ್ ನಟ-ನಟಿಯರು ಬಂದು ಜಿಮ್ ಉದ್ಗಾಟನೆ ಮಾಡಿಕೊಟ್ಟಿದ್ದಾರೆ.

ನಟಿಯರಿಗೆ ಫಿಟ್ನೆಸ್ ಮಾಸ್ಟರ್

ಕನ್ನಡದ ಸ್ಟಾರ್ ನಟರು ಮಾತ್ರವಲ್ಲದೆ ನಟಿಯರಾದ ಸೋನುಗೌಡ, ಮಾನ್ವಿತಾ ಹರೀಶ್, ರಚಿತಾ ರಾಮ್, ಸನಾತಿನಿ, ಅನುಪಮ ಗೌಡ ಹೀಗೆ ಇನ್ನು ಅನೇಕ ನಟಿಯರು ಇಲ್ಲೇ ವರ್ಕ್ ಔಟ್ ಮಾಡಿ ತಮ್ಮನ್ನ ತಾವು ಫಿಟ್ ಆಗಿ ಇಟ್ಟುಕೊಂಡಿದ್ದಾರೆ.

'ಡಾಲಿ'ಗೆ ಹೊಸ ಲುಕ್ ಕೊಟ್ಟ ಟ್ರೈನರ್

ನಿರ್ದೇಶಕ ದುನಿಯಾ ಸೂರಿ ಅವರಿಗೆ ಸಿಕ್ಸ್ ಪ್ಯಾಕ್ ಮಾಡಲು ಟ್ರೈನಿಂಗ್ ನೀಡಿದ್ದು ಇದೇ ಶ್ರೀನಿವಾಸ್ ಗೌಡ, ಅದಷ್ಟೇ ಅಲ್ಲದೆ ಟಗರು ಡಾಲಿ ಧನಂಜಯ್ ಅವರಿಗೆ ಟಗರು ಸೇರಿದಂತೆ ಈ ಹಿಂದಿನ ಸಿನಿಮಾಗಳ ಲುಕ್ ಗಳಿಗೂ ಇವರೇ ಮಾಸ್ಟರ್ ಆಗಿದ್ದರು.

'ಟಗರು' ಸಿನಿಮಾ ನೋಡಿದ ಇಂಗ್ಲೆಂಡ್ ಕ್ರಿಕೆಟರ್ ಮಾಡಿದ್ದೇನು?

English summary
kannada actors Dhananjaya, Rakshith Shetty, Manvitha Harish, Rachita Ram Many star actors inaugurate 'Muscle 360' gym at Banashankari Bangalore .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X