For Quick Alerts
  ALLOW NOTIFICATIONS  
  For Daily Alerts

  'ತಾಯಿಗೆ ತಕ್ಕ ಮಗ' ನೋಡಿ ಯಾವ ಸ್ಟಾರ್ ಏನಂದ್ರು?

  |
  Thayige Thakka Maga Movie : ತಾಯಿಗೆ ತಕ್ಕ ಮಗ ಸಿನಿಮಾ ನೋಡಿ ಉಪೇಂದ್ರ ಹೇಳಿದ್ದು ಹೀಗೆ | FILMIBEAT KANNADA

  ನಿನ್ನೆ ಬಿಡುಗಡೆಯಾಗಿರುವ 'ತಾಯಿಗೆ ತಕ್ಕ ಮಗ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಟ ಅಜಯ್ ರಾವ್ ಹಾಗೂ ನಿರ್ದೇಶಕ ಶಶಾಂಕ್ ಮತ್ತೆ ಒಂದಾಗಿದ್ದು, ಪ್ರೇಕ್ಷಕರ ಪ್ರೀತಿ ಪಡೆದಿದ್ದಾರೆ.

  'ಒಳ್ಳೆ ಸಮಾಜ ಬೇಕು ಅಂದ್ರೆ ಯಾರಾದ್ರೂ ಕೋಪ ಮಾಡ್ಕೊಳ್ಳೇ ಬೇಕು'...ಇದೇ 'ತಾಯಿಗೆ ತಕ್ಕ ಮಗ' ಚಿತ್ರದ ಇಡೀ ಕಥೆ. ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಆಕ್ಷನ್ ಪ್ಯಾಕೇಜ್ ಮೂಲಕ ಪ್ರೇಕ್ಷರನ್ನ ರಂಜಿಸುವ ಆಕ್ಷನ್ ಸಿನಿಮಾ 'ತಾಯಿಗೆ ತಕ್ಕ ಮಗ' ಆಗಿದೆ.

  ವಿಮರ್ಶೆ: ರೆಬೆಲ್ ತಾಯಿಗೆ ರೆಬೆಲ್ ಮಗ ವಿಮರ್ಶೆ: ರೆಬೆಲ್ ತಾಯಿಗೆ ರೆಬೆಲ್ ಮಗ

  ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೆ ಚಿತ್ರರಂಗದ ಅನೇಕ ಗಣ್ಯರು ಸಹ ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ. ನಟ ಅಂಬರೀಶ್, ಉಪೇಂದ್ರ, ಯಶ್, ನಟಿ ಅಮೂಲ್ಯ ಸೇರಿದಂತೆ ಸಾಕಷ್ಟು ಜನ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಸಿನಿಮಾದ ನೋಡಿದ ಸ್ಟಾರ್ ಗಳು ಏನು ಹೇಳಿದ್ದಾರೆ ಎಂಬುದು ಮುಂದಿದೆ ಓದಿ...

  'ಅಂತ' ಸಿನಿಮಾ ನೆನಪಾಯ್ತು

  'ಅಂತ' ಸಿನಿಮಾ ನೆನಪಾಯ್ತು

  ''ನಂಗೆ 40 ವರ್ಷದ ಹಿಂದೆ ಮಾಡಿದ 'ಅಂತ' ಸಿನಿಮಾ ನೆನಪಾಯ್ತು. ಸಿನಿಮಾದಲ್ಲಿ ಎಲ್ಲರೂ ಮುದ್ದಾಗಿ ಕಾಣುತ್ತಾರೆ. ಇದು ವೆಲ್ ಮೇಡ್ ಪಿಚ್ಚರ್. ಆಕ್ಷನ್ ಸೂಪರ್ ಆಗಿದೆ. ಕ್ಷೈಮ್ಯಾಕ್ಸ್ ಡಿಫರೆಂಟ್ ಆಗಿದೆ. ಇಡೀ ತಂಡಕ್ಕೆ ಯಶಸ್ಸು ಸಿಗಲಿ.'' - ಅಂಬರೀಶ್, ನಟ

  ಕ್ಲೈಮ್ಯಾಕ್ಸ್ ಎಲ್ಲರೂ ಫಾಲೋ ಮಾಡಬೇಕು

  ಕ್ಲೈಮ್ಯಾಕ್ಸ್ ಎಲ್ಲರೂ ಫಾಲೋ ಮಾಡಬೇಕು

  ''ಸಿನಿಮಾದಲ್ಲಿ ತಾಯಿ ಮಗನ ಕೆಮಿಸ್ಟಿ ಅಧ್ಬುತವಾಗಿದೆ. ಒಬ್ಬ ಹೊಸ ಆಕ್ಷನ್ ಹೀರೋ ಕನ್ನಡಕ್ಕೆ ಸಿಕ್ಕಿದ್ದಾರೆ. ಸ್ಟೋರಿ ಲೈನ್ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ನೋಡಿ ನನಗೆ ತುಂಬ ಖುಷಿ ಆಯ್ತು. ಅದನ್ನು ಎಲ್ಲರೂ ಫಾಲೋ ಮಾಡಬೇಕು. ಸಿನಿಮಾ ಸೂಪರ್ ಆಗಿದೆ.'' - ಉಪೇಂದ್ರ, ನಟ

  ಅಮ್ಮ ಮಗನ ಕಾಂಬಿನೇಶನ್ ಚೆನ್ನಾಗಿದೆ

  ಅಮ್ಮ ಮಗನ ಕಾಂಬಿನೇಶನ್ ಚೆನ್ನಾಗಿದೆ

  ' ಮನರಂಜನೆ ಜೊತೆಗೆ ಒಂದು ಒಳ್ಳೆಯ ಸಂದೇಶ ಇಲ್ಲಿದೆ. ಲವ್ ಸ್ಟೋರಿ ಇಟ್ಟುಕೊಂಡು ಸಮಾಜಕ್ಕೆ ಬೇಕಾದ ವಿಷಯ ಹೇಳಿದ್ದಾರೆ. ಸುಮಲತಾ ಮೇಡಂ, ಅಜಯ್ ರಾವ್, ಆಶಿಕಾ, ಲೋಕಿ ಚೆನ್ನಾಗಿ ನಟನೆ ಮಾಡಿದ್ದಾರೆ. ಅಮ್ಮ ಮಗನ ಕಾಂಬಿನೇಶನ್ ಚೆನ್ನಾಗಿ ಬಂದಿದೆ.'' - ಯಶ್, ನಟ

  ಅಜಯ್ ಪಾತ್ರ ನಮ್ಮ ಅಣ್ಣನ ತರ ಇತ್ತು

  ಅಜಯ್ ಪಾತ್ರ ನಮ್ಮ ಅಣ್ಣನ ತರ ಇತ್ತು

  ''ಅಜಯ್ ಸರ್ ಅವರನ್ನು ಈ ಲುಕ್ ನಲ್ಲಿ ನೋಡಿ ಖುಷಿಯಾಯ್ತು. ತುಂಬ ಪ್ರೆಶ್ ಗೆ ಸಿನಿಮಾ ಇದೆ. ನಮ್ಮ ಅಣ್ಣನನ್ನು ಅಜಯ್ ರಾವ್ ಅವರ ಪಾತ್ರದಲ್ಲಿ ನೋಡಿದೆ. ಆಶಿಕಾ ಅವರ ಸ್ಕ್ರೀನ್ ಪ್ರೆಸೆನ್ಸ್ ಇಷ್ಟ ಆಯ್ತು. ಶಶಾಂಕ್ ಸರ್, ಸುಮಲತಾ ಮೇಡಂ ಎಲ್ಲರೂ ಚೆನ್ನಾಗಿ ಮಾಡಿದ್ದಾರೆ.'' - ಅಮೂಲ್ಯ, ನಟಿ

  English summary
  Kannada stars spoke about Thayige Takka Maga movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X