Don't Miss!
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಗಾಗಿ ಪ್ರಾರ್ಥನೆ ಮಾಡಿದ ಕನ್ನಡ ಚಿತ್ರರಂಗ
Recommended Video

ನಟ ದರ್ಶನ್ ಆರೋಗ್ಯ ಸುಧಾರಿಸಬೇಕು ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅದರ ಜೊತೆಗೆ ದರ್ಶನ್ ಅವರ ಚಿತ್ರರಂಗದ ಸ್ನೇಹಿತರು ಸಹ 'ಅದಷ್ಟು ಬೇಗ ನಿಮ್ಮ ಆರೋಗ್ಯ ಸುಧಾರಿಸಲಿ' ಎಂದು ಶುಭ ಹಾರೈಸುತ್ತಿದ್ದಾರೆ.
ರಸ್ತೆ ಅಪಘಾತದ ಬಳಿಕ ಮೈಸೂರಿನ ಆಸ್ಪತ್ರೆಯಲ್ಲಿ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಕೂಡ ಅವರು ಆಸ್ಪತ್ರೆಯಲ್ಲಿ ಇರಬೇಕಾಗಿದೆ. ಚಿತ್ರರಂಗದ ಅನೇಕರು ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇನ್ನು ಅನೇಕ ಕಲಾವಿದರು ದರ್ಶನ್ ಆರೋಗ್ಯ ಸುಧಾರಿಸಿಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಇಂದು
ಸಂಜೆ
ಆಸ್ಪತ್ರೆಯಿಂದ
ದೇವರಾಜ್,
ಪ್ರಜ್ವಲ್
ದೇವರಾಜ್
ಡಿಸ್ಚಾರ್ಜ್.?
ನಟ ಸುದೀಪ್, ಜಗ್ಗೇಶ್ ಅವರ ನಂತರ ರಚಿತಾ ರಾಮ್, ಸುಮಲತಾ, ಮೇಘನಾ ರಾಜ್, ತರುಣ್ ಸುದೀಪ್, ಆದಿತ್ಯ ಸೇರಿದಂತೆ ಅನೇಕರು ದರ್ಶನ್ ಗಾಗಿ ಪ್ರಾರ್ಥಿಸಿದ್ದಾರೆ. ಮುಂದೆ ಓದಿ...
|
ರಚಿತಾ ರಾಮ್
''ಅದಷ್ಟು ಬೇಗ ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸುತ್ತಾನೆ. ದರ್ಶನ್, ಪ್ರಜ್ವಲ್ ದೇವರಾಜ್ ದೇವರಾಜ್ ಸರ್ ಎಲ್ಲರೂ ಗುಣಮುಖರಾಗಿ.'' - ರಚಿತಾ ರಾಮ್ , ನಟಿ
|
ಸುಮಲತಾ ಅಂಬರೀಶ್
''ದರ್ಶನ್ ಅವರ ಜೊತೆಗೆ ನಿನ್ನೆ ಮಾತನಾಡಿದೆ. ನಾನು ಹುಷಾರಾಗಿ ಇದ್ದೇನೆ ಎಂದು ದರ್ಶನ್ ಹೇಳಿದ್ದಾರೆ. ಅದಷ್ಟು ಬೇಗ ದರ್ಶನ್ ಆರೋಗ್ಯ ಸುಧಾರಿಸಲಿ.'' - ಸುಮಲತಾ ಅಂಬರೀಶ್, ನಟಿ
ರಾಯ್
ಆಂಟೋನಿ
ಡ್ರೈವರ್
ಅಲ್ಲ:
ಏನೋ
ಆಗಬೇಕಿತ್ತು,
ಏನೋ
ಆಯ್ತು
ಎಂದ
ಸಂದೇಶ್
|
ಮೇಘನಾ ರಾಜ್
''ದರ್ಶನ್ ಸರ್ ಹಿಂದೆ ಹೇಗಿದ್ದರು ಅದೇ ರೀತಿ ಅವರನ್ನು ನೋಡಲು ಕಾಯುತ್ತಿದ್ದೇನೆ. ಚಿರಂಜೀವಿ ಸರ್ಜಾ ಈಗಾಗಲೇ ಆಸ್ಪತ್ರೆಗೆ ಹೋಗಿ ಅವರನ್ನು ನೋಡಿಕೊಂಡು ಬಂದಿದ್ದಾರೆ. ದೇವರಾಜ್, ಪ್ರಜ್ವಲ್ ದೇವರಾಜ್ ಕೂಡ ಆದಷ್ಟು ಬೇಗ ಗುಣಮುಖರಾಗಲಿ.'' - ಮೇಘನಾ ರಾಜ್, ನಟಿ
|
ತರುಣ್ ಸುಧೀರ್
''ದರ್ಶನ್ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಕೆಲ ಸಮಯ ಕಳೆದೆ. ಅವರು ಚಿಕಿತ್ಸೆಗೆ ತುಂಬ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ದೇವರಾಜ್ ಸರ್, ಪ್ರಜ್ಜು ಹಾಗೂ ರಾಯ್ ಸರ್ ಕೂಡ ಗುಣಮುಖರಾಗುತ್ತಿದ್ದಾರೆ. ನಿಮ್ಮ ಪ್ರೀತಿ ಹಾಗೂ ಪ್ರಾರ್ಥನೆಯಿಂದ ದರ್ಶನ್ ವೇಗವಾಗಿ ಚೇತರಿಕೆ ಕಾಣುತ್ತಿದ್ದಾರೆ.'' - ತರುಣ್ ಸುಧೀರ್, ನಿರ್ದೇಶಕ
|
ಸಂತೋಷ್ ಆನಂದ್ ರಾಮ್
ದರ್ಶನ್ ಸರ್ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಚಾಲೆಂಜಿಂಗ್ ಸ್ಟಾರ್ ಆರಾಮಾಗಿ ಇದ್ದಾರೆ ಅಂತ ತಿಳಿದು ಬಂತು ಅಭಿಮಾನಿಗಳ ಪ್ರೀತಿ ಅವರನ್ನ ಸದಾ ಕಾಯುತ್ತದೆ ಎಂಬುದಕ್ಕೆ ಇದೊಂದು ನಿ'ದರ್ಶನ' - ಸಂತೋಷ್ ಆನಂದ್ ರಾಮ್, ನಿರ್ದೇಶಕ
|
ಆದಿತ್ಯ
''ದೇವರದಯೆಯಿಂದ ದರ್ಶನ್ ಚೆನ್ನಾಗಿದ್ದಾನೆ ಹಾಗೂ ಆತನ ಆರೋಗ್ಯದಲ್ಲಿ ಬೇಗ ಸುಧಾರಣೆ ಕಾಣುತ್ತಿದೆ. ಅಭಿಮಾನಿಗಳು ಚಿಂತೆ ಮಾಡಬೇಡಿ. ದರ್ಶನ್ ಹುಲಿ. ಇನ್ನು ಎರಡು ದಿನಗಳಲ್ಲಿ ಹುಲಿ ಮತ್ತೆ ಘರ್ಜಿಸಲಿದೆ.'' - ಆದಿತ್ಯ, ನಟ

ಸಾಕಷ್ಟು ಕಲಾವಿದರ ಶುಭ ಹಾರೈಕೆ
ಇದರ ಜೊತೆಗೆ ನಟ ಸುದೀಪ್, ಜಗ್ಗೇಶ್, ಪರಿಮಳ ಜಗ್ಗೇಶ್, ದಿಗಂತ್, ರಿಷಬ್ ಶೆಟ್ಟಿ, ರಿಷಿಕಾ ಸಿಂಗ್ ಸೇರಿದಂತೆ ಸಾಕಷ್ಟು ಜನ ಟ್ವೀಟ್ ಮಾಡಿದ್ದಾರೆ. ಇನ್ನು ಸಾಕಷ್ಟು ಕಲಾವಿದರು ಆಸ್ಪತ್ರೆಗೆ ಹೋಗಿ ದರ್ಶನ್ ಆರೋಗ್ಯ ವಿಚಾರಿಸಿ ಬಂದಿದ್ದಾರೆ.