For Quick Alerts
  ALLOW NOTIFICATIONS  
  For Daily Alerts

  ಯಜಮಾನ ಯಶಸ್ಸಿಗೆ ಹಾರೈಸಿದ ಸ್ಯಾಂಡಲ್ ವುಡ್ ಸಿನಿತಾರೆಯರು

  |
  Yajamana Movie: ಯಜಮಾನ ಯಶಸ್ಸಿಗೆ ಹಾರೈಸಿದ ಸ್ಯಾಂಡಲ್ ವುಡ್ ಸಿನಿತಾರೆಯರು | FILMIBEAT KANNADA

  ಬೇರೆ ನಟರ ಚಿತ್ರಗಳಿಗೆ, ಹೊಸ ನಟರ ಸಿನಿಮಾಗಳಿಗೆ ಸದಾ ಬೆಂಬಲ ನೀಡುವ ನಟ ದರ್ಶನ್. ಈಗ ದರ್ಶನ್ ನಟನೆಯ ಯಜಮಾನ ಸಿನಿಮಾ ತೆರೆಕಂಡಿದೆ. ಯಜಮಾನ ಚಿತ್ರ ದೊಡ್ಡ ಯಶಸ್ಸು ಕಾಣಲಿ ಎಂದು ಸ್ಯಾಂಡಲ್ ವುಡ್ ಸಿನಿತಾರೆಯರು ವಿಶ್ ಮಾಡಿದ್ದಾರೆ.

  ಅಭಿಮಾನಿಗಳಂತೆ ಕೆಲವು ಸ್ಟಾರ್ ಗಳು ಕೂಡ ದರ್ಶನ್ ಚಿತ್ರ ನೋಡಲು ಕಾಯ್ತಾರೆ. ಅದರಲ್ಲೂ ಒಂದೂವರೆ ವರ್ಷದ ನಂತರ ದರ್ಶನ್ ಸಿನಿಮಾವೊಂದು ಚಿತ್ರಮಂದಿರಕ್ಕೆ ಬಂದಿರುವುದು ಸಹಜವಾಗಿ ಇಂಡಸ್ಟ್ರಿಯಲ್ಲಿ ಕುತೂಹಲ ಹೆಚ್ಚಿಸಿದೆ.

  Yajamana First Review: ಮೊದಲ ಶೋ ನೋಡಿದವರ ಟ್ವಿಟ್ಟರ್ ಪ್ರತಿಕ್ರಿಯೆ

  ಬಿಡುಗಡೆಗೆ ಮುಂಚೆ ಹಲವು ದಾಖಲೆಗಳನ್ನ ನಿರ್ಮಿಸಿರುವ ಯಜಮಾನ ಗೆಲುವಿನ ನಗೆ ಬೀರಲಿ ಎಂದು ಸಿನಿ ಸ್ಟಾರ್ಸ್ಟ ಟ್ವೀಟ್ ಮಾಡಿದ್ದಾರೆ. ಯಜಮಾನನಿಗೆ ಶುಭಕೋರಿರುವ ತಾರೆಯರು ಯಾರು? ಮುಂದೆ ಓದಿ.....

  ನನಗೆ ನಂಬಿಕೆ ಇದೆ.....

  ''ನನಗೆ ನಂಬಿಕೆ ಇದೆ, ಯಜಮಾನ ಚಿತ್ರವನ್ನ ಎಲ್ಲರೂ ಪ್ರೀತಿಸುತ್ತಾರೆ ಮತ್ತು ಇಷ್ಟಪಡ್ತಾರೆ. ದರ್ಶನ್ ಸದಾ ಉತ್ತಮ, ಹರಿಕೃಷ್ಣ ಅವರು ಅದ್ಭುತ ಕೆಲಸ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ'' ಎಂದು ನಟ ಚಿರಂಜೀವಿ ಸರ್ಜಾ ಟ್ವೀಟ್ ಮಾಡಿದ್ದಾರೆ.

  Yajamana Review : ಮನೆಗೆ ಯಜಮಾನ.. ಮಾರ್ಕೆಟ್ ಗೆ ಸುಲ್ತಾನ..

  ನೀನು ಮತ್ತೆ ಬಾಕ್ಸ್ ಆಫೀಸ್ ಗೆ ಸುಲ್ತಾನ

  ''ದರ್ಶನ್ ನಿನಗೆ ಬಹುದೊಡ್ಡ ಯಶಸ್ಸು ಸಿಗಲಿ. ಯಜಮಾನ ಚಿತ್ರದ ಮೂಲಕ ನೀನು ಮತ್ತೆ ಬಾಕ್ಸ್ ಆಫೀಸ್ ಗೆ ಸುಲ್ತಾನ ಆಗಿ ನಿಲ್ಲು'' ಎಂದು ನಟಿ ಸುಮಲತಾ ಶುಭ ಕೋರಿದ್ದಾರೆ.

  'ಯಜಮಾನ'ನ ಜೊತೆ ಮಿಂಚುತ್ತಿದೆ ಯುವರಾಣಿ ರಶ್ಮಿಕಾ ಕಟೌಟ್

  ಬಾಕ್ಸ್ ಆಫೀಸ್ ಯಜಮಾನ

  ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ ಡಿ ಬಾಸ್ ಚಿತ್ರಕ್ಕೆ ವಿಶ್ ಮಾಡಿದ್ದು, ಬಾಕ್ಸ್ ಅಫೀಸ್ ಯಜಮಾನ....ನಾಳೆಯಿಂದ ಅಭಿಮಾನಿಗಳ ಜಮಾನ. ಜಮಾಯ್ಸಿ'' ಎಂದು ಟ್ವೀಟ್ ಮಾಡಿದ್ದಾರೆ.

  ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೋ, ನಾವು ಡಮ್ಮಿ: ದರ್ಶನ್

  ಯಜಮಾನ ಸಕ್ಸಸ್ ಆಗಲಿ

  ಯಜಮಾನ ಚಿತ್ರಕ್ಕೆ ನಟ ದರ್ಶನ್ ಅವರಿಗೆ, ನಿರ್ದೇಶಕ ಹರಿಕೃಷ್ಣ ಅವರಿಗೆ ದೊಡ್ಡ ಯಶಸ್ಸು ಸಿಗಲಿ' ಎಂದು ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ. ಸಂತೋಷ್ ಆನಂದ್ ರಾಮ್ ಯಜಮಾನ ಚಿತ್ರದ ಟೈಟಲ್ ಹಾಡು ಬರೆದಿದ್ದಾರೆ.

  ದರ್ಶನ್ ಶಿಷ್ಯ ಧನ್ವೀರ್

  ಬಜಾರ್ ಚಿತ್ರದ ನಾಯಕ ಹಾಗೂ ದರ್ಶನ್ ಅವರ ಶಿಷ್ಯ ಎಂದೇ ಗುರುತಿಸಿಕೊಂಡಿರುವ ನಟ ಧನ್ವೀರ್, ಯಜಮಾನ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ''ನಮ್ಮಂತ ಯುವನಟರಿಗೆ ಪ್ರೋತ್ಸಾಹಿಸುವ ದರ್ಶನ್ ಅವರ ಸಿನಿಮಾ ಗೆಲ್ಲಬೇಕು'' ಎಂದು ವಿಶ್ ಮಾಡಿದ್ದಾರೆ.

  ಜೈ ಯಜಮಾನ, ಜೈ ದರ್ಶನ್

  ಜೈ ಯಜಮಾನ, ಜೈ ದರ್ಶನ್

  ಇನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮದೇ ಸ್ಟೈಲ್ ನಲ್ಲಿ ಯಜಮಾನ ಚಿತ್ರಕ್ಕೆ ವಿಶ್ ಮಾಡಿದ್ದಾರೆ. ''ಜೈ ಯಜಮಾನ, ಜೈ ದರ್ಶನ್ ಸಾಹೆಬ್ರು...ಜೈ ಹರಿಕೃಷ್ಣ, ಜೈ ಪೊನ್ನು...ಜೈ ಶೈಲಜಾ ದೊಡ್ಡಮ್ಮ, ಜೈ ಬಿ ಸುರೇಶ್ ಸಾರ್..ಜೈ ಯಜಮಾನ ಟೀಂ..ಅತಿ ದೊಡ್ಡ ಯಶಸ್ಸು ಸಿಗಲಿ'' ಎಂದು ಶುಭಕೋರಿದ್ದಾರೆ.

  English summary
  Kannada actor chiranjeevi sarja, dhanveer, director simple suni, santhosh anandram, yogaraj bhat taken their twitter account to wish darshan starrer yajamana movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X