»   » ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಶಿವರಾಜ್ ಕುಮಾರ್

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಶಿವರಾಜ್ ಕುಮಾರ್

Posted By:
Subscribe to Filmibeat Kannada

ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಟಗರು ಚಿತ್ರವನ್ನ ಬೆಳ್ಳಿಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಈಗಾಗಲೇ ಹಾಡು ಮತ್ತು ಮೇಕಿಂಗ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕೌತುಕವನ್ನ ದುಪ್ಪಟ್ಟು ಮಾಡಿರುವ ಟಗರು ಚಿತ್ರತಂಡ ಶಿವಣ್ಣನ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನ ನೀಡಿದ್ದಾರೆ.

ಜನವರಿ ತಿಂಗಳಲ್ಲೇ ಟಗರು ಸಿನಿಮಾವನ್ನ ನಿರೀಕ್ಷೆ ಮಾಡಿದ್ದ ಅಭಿಮಾನಿಗಳಿಗೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಫೆಬ್ರವರಿ ಎರಡನೇ ವಾರದಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರುವುದು ಬಹುತೇಕ ಖಚಿತವಾಗಿದೆ.

ಕಾಶಿನಾಥ್ ಅಗಲಿಕೆಗೆ ಕಂಬನಿ ಮಿಡಿದ ಶಿವರಾಜ್ ಕುಮಾರ್:

ಚಿತ್ರ ಬಿಡುಗಡೆ ಆದ ನಂತರ ಅದರ ಸೀಕ್ವೆಲ್ ಮಾಡುವುದು ಸಾಮಾನ್ಯವಾದ ವಿಚಾರ. ಆದರೆ ಟಗರು ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಸಿನಿಮಾತಂಡ ಟಗರು ಪಾರ್ಟ್2 ಮಹೂರ್ತ ಮಾಡಿ ಚಿತ್ರೀಕರಣ ಶುರು ಮಾಡಿದೆ. ಹಾಗಾದ್ರೆ ಟಗರು2 ಯಾವಾಗ ರಿಲಿಸ್ ಆಗುತ್ತೆ? ಚಿತ್ರದಲ್ಲಿ ಯಾರೆಲ್ಲರೂ ಇರುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

ಬಿಡುಗಡೆಗೆ ಮುಂಚೆಯೇ ಟಗರು2

ಟಗರು ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ಚಿತ್ರತಂಡ ಟಗರು2 ಚಿತ್ರೀಕರಣ ಶುರು ಮಾಡಿದೆ. ನಿನ್ನೆ(ಜ.20) ಸಿನಿಮಾದ ಮಹೂರ್ತ ಮಾಡಿ ಚಿತ್ರೀಕರಣವನ್ನೂ ಶುರು ಮಾಡಿದ್ದಾರೆ ನಿರ್ದೇಶಕ ಸೂರಿ ಮತ್ತು ಚಿತ್ರತಂಡ.

ಅಭಿಮಾನಿಗಳ ನಿರ್ಧಾರವೇ ಅಂತಿಮ

ಟಗರು ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಟಗರು2 ಚಿತ್ರಕ್ಕೆ ಲಿಂಕ್ ನೀಡಲಾಗುತ್ತೆ. ಅದಕ್ಕಾಗಿ ಕೆಲವು ಸೀನ್ ಗಳನ್ನ ಸಿನಿಮಾತಂಡ ಚಿತ್ರೀಕರಣ ಮಾಡಿಕೊಂಡಿದೆ. ಟಗರು ಸಿನಿಮಾಗೆ ಬರುವ ಪ್ರತಿಕ್ರಿಯೆಯನ್ನು ನೋಡಿಕೊಂಡು ಪಾರ್ಟ್2 ಚಿತ್ರದ ಯಾವಾಗ ಪ್ರಾರಂಭ ಮಾಡಬೇಕು ಎನ್ನುವ ನಿರ್ಧಾರ ಮಾಡಲಾಗುತ್ತದೆ.

ಪಾರ್ಟ್ 2 ನಲ್ಲೂ ಶಿವಣ್ಣನೇ ನಾಯಕ

ಟಗರು ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟುಕೊಂಡಿದೆ. ಪಾರ್ಟ್2 ಕೂಡ ಬರುತ್ತೆ ಎನ್ನುವ ಸುದ್ದಿ ಈ ಹಿಂದೆ ಹರಿದಾಡಿತ್ತು. ಅದಕ್ಕೆ ತಕ್ಕಂತೆ ನಿರ್ಮಾಪಕರು ಟಗರು2 ಚಿತ್ರೀಕರಣ ಶುರು ಮಾಡಿದ್ದಾರೆ. ಟಗರು ಸ್ವೀಕ್ವೆಲ್ ನಲ್ಲಿ ಶಿವರಾಜ್ ಕುಮಾರ್ ಅವರೇ ನಾಯಕನಾಗಿ ಅಭಿನಯಿಸಲಿದ್ದಾರೆ.

ಭಾರಿ ಬೇಡಿಕೆ ಇರುವ ಸಿನಿಮಾ

ಟಗರು ಚಿತ್ರಕ್ಕೆ ಭಾರಿ ಬೇಡಿಕೆ ಇದೆ. ಈಗ ಇರುವ ನಿರೀಕ್ಷೆಯ ಮಟ್ಟ ನೋಡಿದರೆ ಕನ್ನಡದ 100 ಕೋಟಿ ಕ್ಲಬ್ ಸೇರುವ ಮೊದಲ ಚಿತ್ರ ಟಗರು ಎನ್ನುವ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಬಾಲಿವುಡ್ ಮತ್ತು ಟಾಲಿವುಡ್ ನಿಂದ ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಹೆಚ್ಚಾಗಿದೆ.

English summary
Before Tagaru movie release, Tagaru part 2 movie shooting start from yesterday The film is directed by Duniya Suri, Shivarajkumar acting as a hero for tagaru part2.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X