»   » ರಾಕ್ ಲೈನ್ ಸ್ಟುಡಿಯೋದಲ್ಲಿ 'ಬುಲೆಟ್ ರಾಣಿ'

ರಾಕ್ ಲೈನ್ ಸ್ಟುಡಿಯೋದಲ್ಲಿ 'ಬುಲೆಟ್ ರಾಣಿ'

Posted By:
Subscribe to Filmibeat Kannada

ಕನ್ನಡದ ದಂಡುಪಾಳ್ಯ ಚಿತ್ರದಲ್ಲಿ ಸಣ್ಣ ಪಾತ್ರ ಪೋಷಿಸಿದ್ದ ನಿಶಾ ಕೊಠಾರಿ ಅಲಿಯಾಸ್ ಪ್ರಿಯಾಂಕಾ ಕೊಠಾರಿ ಯಾನೆ ಅಮೋಘ ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟಿದ್ದಾರೆ. ರಾಜ್ ದಿ ಶೋ ಮ್ಯಾನ್ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯಿಸಿದ್ದರು ಕೊಠಾರಿ.

ಬಾಲಿವುಡ್ ನಲ್ಲಿ ಸೆಕ್ಸ್ ಸಿಂಪಬ್ ತಾರೆ ಎಂದೇ ಗುರುತಿಸಿಕೊಂಡವರು ಪ್ರಿಯಾಂಕಾ. ಇದೀಗ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಬುಲೆಟ್ ರಾಣಿ ಚಿತ್ರದ ಮೂಲಕ ಮತ್ತೆ ಗಾಂಧಿನಗರದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಚಿತ್ರವನ್ನು ಇಕ್ಬಾಲ್ ಅವರು ನಿರ್ದೇಶಿಸುತ್ತಿದ್ದಾರೆ. ['ದಂಡುಪಾಳ್ಯ' ಆಡಿಯೋದಲ್ಲಿ ನಶೆಯೇರಿಸಿದ ನಿಶಾ]

Kannada, Telugu bilingual Bullet Rani shoot in brisk progress

ಚಿತ್ರದಲ್ಲಿ ಪ್ರಿಯಾಂಕಾ ಅವರು ಪೊಲೀಸ್ ಅಧಿಕಾರಿಣಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಪ್ಯಾಕ್ಡ್ ಸಿನಿಮಾ. ತೆಲುಗಿನಲ್ಲಿ ಪವನ್ ಕಲ್ಯಾಣ್ ಅಭಿನಯಿಸಿದ 'ಗಬ್ಬರ್ ಸಿಂಗ್' ಚಿತ್ರದ ಕಥೆಯೇ ಬುಲೆಟ್ ರಾಣಿಗೆ ಸ್ಫೂರ್ತಿ ಎನ್ನುತ್ತಾರೆ ನಿರ್ದೇಶಕರು.

ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಗುಣವಂತ್ ಸಂಗೀತ ನೀಡುತ್ತಿದ್ದಾರೆ. ಸೆಲ್ವಂ ಛಾಯಾಗ್ರಹಣ, ಸುರೇಶ್ ಸಂಕಲನ, ವೇಣುಪಾಲ್ ನೃತ್ಯ ನಿರ್ದೇಶನ, ಮಾಸ್‍ಮಾದ ಸಾಹಸ ನಿರ್ದೇಶನ ಹಾಗೂ ನಾಗು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನಾಗೇಶ್ವರರಾವ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಫೋಕಸ್ ಅನ್ ಪಿಕ್ಚರ್ಸ್ ಲಾಂಛನದಲ್ಲಿ ಸಲ್ಲಾವುದ್ದೀನ್ ಯೂಸುಫ್ ಅವರು ನಿರ್ಮಿಸುತ್ತಿರುವ 'ಬುಲೆಟ್ ರಾಣಿ' ಚಿತ್ರಕ್ಕೆ ರಾಕ್ ಲೈನ್ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈವರೆಗೂ ಎರಡು ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.

ಪ್ರಿಯಾಂಕ ಕೊಠಾರಿ, ಆಶೀಷ್ ವಿದ್ಯಾರ್ಥಿ, ರವಿಕಾಳೆ, ಶಫಿ, ರಮೇಶ್(ತೆಲುಗು), ಪ್ರತಾಪ್, ರಾಜೇಶ್, ವಿವೇಕ್, ಉದಯ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

Post by Oneindia Kannada.
English summary
Kannada-Telugu bilingual "Bullet Rani" shoot in brisk progress at Rockline studios. The movie features actress Priyanka Kothari in the role of a police officer. The director is confident about the movie, which will give Nisha a much needed break from her image.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada