For Quick Alerts
ALLOW NOTIFICATIONS  
For Daily Alerts

  'ತಿಪ್ಪಜ್ಜಿ ಸರ್ಕಲ್' ಇನ್ನೊಂದಿಷ್ಟು ತುಂಡುಡುಗೆ ಚಿತ್ರಗಳು

  By ರವಿಕಿಶೋರ್
  |

  ಪೂಜಾಗಾಂಧಿ ಅಭಿನಯಿಸುತ್ತಿರುವ 'ತಿಪ್ಪಜ್ಜಿ ಸರ್ಕಲ್' ಚಿತ್ರ ನಾನಾ ಕಾರಣಗಳಿಂದಾಗಿ ಸದ್ದು ಮಾಡುತ್ತಲೇ ಇದೆ. ಮೊದಲನೆಯದಾಗಿ ಈ ಚಿತ್ರ ವೇಶ್ಯೆಯೊಬ್ಬರದ್ದು ಎಂಬುದು. ಚಿತ್ರದ ಸ್ಟಿಲ್ಸ್ ಸಹ ಅದಕ್ಕೆ ಪೂರಕವಾಗಿರುವುದು ಪಡ್ಡೆಗಳು ಇನ್ನಷ್ಟು ಪರದಾಡುವಂತಾಗಿದೆ.

  ಇನ್ನೊಂದು ವಿಚಾರ ಎಂದರೆ ಈ ಹಿಂದೆ 'ದಂಡುಪಾಳ್ಯ' ಚಿತ್ರದಲ್ಲಿ ತಮ್ಮ ದುಂಡಗಿನ ಮೈಕಟ್ಟನ್ನು ಪ್ರದರ್ಶಿಸಿದ್ದ ಪೂಜಾಗಾಂಧಿ ಈ ಬಾರಿ ಇನ್ನೇನು ಕಮಾಲ್ ಮಾಡುತ್ತಾರೋ ಎಂಬ ಕುತೂಹಲ ಚಿತ್ರರಸಿಕರಲ್ಲಿ ಇದ್ದೇ ಇದೆ.

  ಅವರ ಕುತೂಹಲ ಕಾತುರವನ್ನು ಇಮ್ಮಡಿಗೊಳಿಸುವಂತಹ ಚಿತ್ರಗಳನ್ನು ಚಿತ್ರತಂಡ ಬಿಡುಗಡೆ ಮಾಡುತ್ತಲೇ ಇದೆ. ಈ ಬಾರಿ ಇನ್ನಷ್ಟು ತುಂಡುಡುಗೆ ಚಿತ್ರಗಳನ್ನು ರವಾನಿಸಿದೆ. ಈ ಚಿತ್ರದಲ್ಲಿ ಉಕ್ರೇನ್ ಚೆಲುವೆ ಆನಾ ತಮ್ಮ ದೇಹಸಿರಿಯನ್ನು ಪ್ರದರ್ಶಿಸಿದ್ದಾರೆ.

  ಬೊಗಸೆ ಕಂಗಳ ಚೆಲುವೆ ಆನಾ ಐಟಂ ಆಟ

  ಉಕ್ರೇನ್ ಮೂಲದವರಾದರೂ ಈಗ ಬಾಂಬೆಯಲ್ಲಿ ನೆಲೆಸಿರುವ ಆನಾ ಎಂಬ ಬೊಗಸೆ ಕಣ್ಗಳ ಚೆಲುವೆ ಜೊತೆ ಡಾ.ಸುರೇಶ್ ಶರ್ಮ ಹಾಡುತ್ತ ಹೆಜ್ಜೆ ಹಾಕುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು.

  ತುಂಡುಡುಗೆಯಲ್ಲಿ ಮಾದಕ ಹೆಜ್ಜೆ

  ರಾಕ್ ಲೈನ್ ಸ್ಟುಡಿಯೋದಲ್ಲಿ ಒಂದು ಕೃತಕ ಕೊಳ ನಿರ್ಮಿಸಿ ಅದರಲ್ಲಿ ಗುಲಾಬಿ ಎಸಳುಗಳಿಂದ ತುಂಬಿದ ನೀರಿನ ನಡುವೆ ತುಂಡುಡುಗೆಯಲ್ಲಿ ಮಾದಕವಾಗಿ ಹೆಜ್ಜೆ ಹಾಕಿದ್ದಾರೆ ಆನಾ. ಅವರ ದೇಹ ಸಿರಿಯನ್ನು ದಾಸ್ ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದಿದ್ದಾರೆ.

  ಡ್ರೀಮ್ ಸಾಂಗ್ ನಲ್ಲಿ ಆನಾ ಜೊತೆ ಜಲಕ್ರೀಡೆ

  ತಿಪ್ಪಜ್ಜಿ ಹರೆಯದಲ್ಲಿದ್ದಾಗ ನಡೆಯುವ ಕಥೆಯಿದು. ಆಕೆಯ ಸಹವಾಸ ಮಾಡಿದ್ದಕ್ಕೆ ಮನೆಯವರೆಲ್ಲ ಪ್ರತಿಭಟಿಸಿದಾಗ ಮನೆಯಲ್ಲಿ ಚಿಕ್ಕ ಯುದ್ಧವೇ ನಡೆಯುತ್ತದೆ. ಆ ಸಂದರ್ಭದಲ್ಲಿ ಮನೆ ಕೆಲಸದಾಕೆ ಹಿಂದೆ ನಮ್ಮ ಮಾಲೀಕರು ಹೇಗಿದ್ದರು ಅಂತ ಕನಸು ಕಾಣುತ್ತಾಳೆ. ಆಗ ಬರುವ ಡ್ರೀಮ್ ಸಾಂಗ್ ಇದು.

  ಗೋಟೂರಿ ಸಾಹಿತ್ಯ ತ್ರಿಭುವನ್ ನೃತ್ಯ ನಿರ್ದೇಶನ

  ನಮ್ಮ ಸಾಹುಕಾರ ಎಷ್ಟೆಲ್ಲಾ ವೈಭವಗಳನ್ನು ಕಂಡಿದ್ದರು ಅಂತ ಕನಸು ಕಾಣುತವ ಹಾಡು. ಗೋಟೂರಿ ಸಾಹಿತ್ಯ ಬರೆದಿರುವ ಹಾಡಿಗೆ ನೃತ್ಯ ನಿರ್ದೇಶಕ ತ್ರಿಭುವನ್ ಮಾಡಿದ್ದಾರೆ. ವಾತ್ಸಾಯನನ ಹಾಡನ್ನು ಮಾಡಬೇಕು ಎಂದಾಗ ಈ ಕಾನ್ಸೆಪ್ಟ್ ಯೋಚಿಸಿದೆ. ನಮ್ಮ ನಿರೀಕ್ಷೆಗಿಂತ ಉತ್ತಮವಾಗಿ ಈ ಹಾಡು ಮೂಡಿ ಬಂದಿದೆ ಎನ್ನುತ್ತಾರೆ ತ್ರಿಭುವನ್.

  ಆನಾಗೆ ಆಕ್ಟಿಂಗ್ ಗಿಂತಲೂ ಡಾನ್ಸಿಂಗ್ ಇಷ್ಟ

  ಈ ಹಾಡಿನ ಬಗ್ಗೆ ಆನಾ ಮಾತನಾಡುತ್ತಾ, "ನನಗೆ ಬಾಲ್ಯದಿಂದಲೂ ನೃತ್ಯದ ಬಗ್ಗೆ ತುಂಬ ಆಸಕ್ತಿಯಿದೆ. ಹಾಗಾಗಿ ಅಭಿನಯದ ಬಗ್ಗೆ ಆಸಕ್ತಿಯಿಲ್ಲ. ನೃತ್ಯಗಾರ್ತಿಯಾಗಿಯೇ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ನೃತ್ಯ ನಿರ್ದೇಶಕರು ಹಾಗೂ ನಾಯಕ ಡಾ.ಸುರೇಶ್ ಶರ್ಮ ಅವರ ಬಗ್ಗೆಯೂ ಮೆಚ್ಚಿ ಮಾತನಾಡಿದ್ದಾರೆ.

  ಪೂಜಾಗಾಂಧಿ ಅಭಿನಯವೂ ಸೊಗಸಾಗಿದೆಯಂತೆ

  ಇನ್ನು ಈ ಚಿತ್ರದಲ್ಲಿ ಪೂಜಾಗಾಂಧಿ ಅವರ ಅಭಿನಯವೂ ಅಷ್ಟೇ ಸೊಗಸಾಗಿ ಮೂಡಿಬಂದಿದೆಯಂತೆ. ಎಲ್ಲೂ ಕೃತಕತೆ ಕಾಣಿಸುವುದಿಲ್ಲವಂತೆ. ಸಾಹುಕಾರ ತನ್ನ ನೆಮ್ಮದಿಗೋಸ್ಕರ ತಿಪ್ಪಕ್ಕನ ಸಹವಾಸ ಮಾಡಿದ್ದರೂ ಆಕೆ ಆತನನ್ನೇ ತನ್ನ ಯಜಮಾನ ಎಂದುಕೊಂಡಿರುತ್ತಾಳೆ ಎನ್ನುತ್ತಾರೆ ಡಾ.ಸುರೇಶ್ ಶರ್ಮ.

  ಮೂಲಕಥೆಯನ್ನು ಬಿ.ಎಲ್.ವೇಣು ಅವರು ಬರೆದಿದ್ದಾರೆ

  ಈ ಚಿತ್ರದ ಮೂಲಕಥೆಯನ್ನು ಸಾಹಿತಿ ಬಿ.ಎಲ್.ವೇಣುರವರು ಬರೆದಿದ್ದಾರೆ. ಚಿತ್ರದುರ್ಗದ ಕೇಂದ್ರ ಭಾಗದಲ್ಲಿರುವ ಈ ವೃತ್ತಕ್ಕೆ ಬಸವೇಶ್ವರ ಸರ್ಕಲ್ ಅಂತ ನಾಮಕರಣ ಮಾಡಿದ್ದರೂ ಜನ ಮಾತ್ರ ಈಗಲೂ ತಿಪ್ಪಜ್ಜಿ ಸರ್ಕಲ್ ಎಂದು ಗುರುತಿಸುತ್ತಾರೆ.

  ಏಪ್ರಿಲ್ ಕೊನೆಯಲ್ಲಿ ಧ್ವನಿಸುರುಳಿ ಬಿಡುಗಡೆ

  ರೂಬಿ ಸಿನಿ ಕ್ರಾಪ್ಟ್ ಸಂಸ್ಥೆಯಲ್ಲಿ ಆರ್.ಜಿ.ಸಿದ್ದರಾಮಯ್ಯ ನಿರ್ಮಿಸುತ್ತಿರುವ ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತುಗಳ ಧ್ವನಿಮುದ್ರಣ ಕಾರ್ಯ ಮುಗಿಸಿದ್ದು ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

  ತಿಪ್ಪಜ್ಜಿ ಸರ್ಕಲ್ ತಾಂತ್ರಿಕ ಬಳಗ ಹೀಗಿದೆ

  ಆದಿತ್ಯ ಚಿಕ್ಕಣ್ಣ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಡಾ.ಬಿ.ಎಲ್.ವೇಣು ಕಥೆ ಮತ್ತು ಸಂಭಾಷಣೆ, ಭರಣಿ ಶ್ರೀ ಸಂಗೀತ, ದೀಪು ಎಸ್.ಕುಮಾರ್ ಸಂಕಲನ, ಗೋಟೂರಿ, ಭರಣಿ ಶ್ರೀ, ಗೌಸ್ ಪೀರ್, ಸಾಹಿತ್ಯ, ತ್ರಿಭುವನ್, ಮದನ್ ಹರಿಣಿ ನೃತ್ಯ ನಿರ್ದೇಶನವಿದೆ.

  ಪಾತ್ರವರ್ಗದಲ್ಲಿ ಯಾರ್ಯರಿದ್ದಾರೆ?

  ಪೂಜಾ ಗಾಂಧಿ, ಡಾ.ಸುರೇಶ್ ಶರ್ಮ, ದೃವಶರ್ಮ, ಸ್ನೇಹಾ ಪಾಟೀಲ್, ಭವ್ಯಾ, ಸತ್ಯಜಿತ್, ಶ್ರೀನಿವಾಸಮೂರ್ತಿ, ಮಾನಸಿ, ಸುರೇಶ್ ರೈ, ಜಯರಾಂ, ಬೇಬಿ ಅನುಷ್, ಜ್ಯೋತಿ, ಗುರುಪ್ರಸಾಧ್ ಅಭಿನಯಿಸುತ್ತಿದ್ದಾರೆ.

  English summary
  Ukraine actress Aana performs special song in Kannada movie Tippajji Circle. Here are blasing stills of the movie. Actress Pooja Gandhi's upcoming movie is based on a real life incident, which happened in Chitradurga district.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more