For Quick Alerts
  ALLOW NOTIFICATIONS  
  For Daily Alerts

  ನಿಜಜೀವನದಲ್ಲೂ ಒಂದಾಗುತ್ತಿದೆ 'ಲಕ್ಷ್ಮಿ ಬಾರಮ್ಮ'ದ ಚಂದನ್-ಕವಿತಾ ಜೋಡಿ

  |

  'ಲಕ್ಷ್ಮಿಬಾರಮ್ಮ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಚಂದನ್ ಕುಮಾರ್, ಕವಿತಾ ಗೌಡ ಜೋಡಿ ನಿಜಜೀವನದಲ್ಲೂ ಒಂದಾಗುತ್ತಿದೆ. ಈ ಇಬ್ಬರೂ ಏಪ್ರಿಲ್ 1 ರಂದು ಎಂಗೇಜ್ ಆಗಲಿದ್ದಾರೆ.

  ಈ ಬಗ್ಗೆ ನಟ ಚಂದನ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಬ್ಬರ ರೊಮ್ಯಾಂಟಿಕ್ ಚಿತ್ರದ ಜೊತೆಗೆ 'ಏಪ್ರಿಲ್ 1 ರಂದು ಮೂರ್ಖರಾಗುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಚಂದನ್ ಅವರು ಪೋಸ್ಟ್ ಹಾಕಿದ ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

  ಚಂದನ್ ಹಾಗೂ ಕವಿತಾ ಅವರುಗಳು 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರು ಬಹಳ ಆತ್ಮೀಯರಾಗಿದ್ದರು. ಟ್ರೆಕ್ಕಿಂಗ್, ಪ್ರವಾಸ, ಹೋಟೆಲ್‌ ಹೀಗೆ ಹಲವು ಕಡೆ ಸುತ್ತಾಡುತ್ತಿದ್ದ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದರು.

  ಕವಿತಾ ಗೌಡ ಅವರು ಜುಲೈ 26ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆ ದಿನ ಕವಿತಾ ಮನೆಗೆ ಭೇಟಿ ನೀಡಿದ್ದ ಚಂದನ್, ಕವಿತಾಗೆ ಸರ್ಪ್ರೈಸ್ ಕೊಟ್ಟಿದ್ದರು. ಜೊತೆಗೆ ಬರ್ತಡೇ ಉಡುಗೊರೆ ಸಹ ನೀಡಿದ್ದರು. ಅಲ್ಲಿಂದ ನಿರಂತರವಾಗಿ ಕವಿತಾ ಮತ್ತು ಚಂದನ್ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯವಾಗಿದ್ದರು.

  ಕೊರೊನಾ ಆತಂಕದ ನಡುವೆ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡ ಸಲಗ | Filmibeat Kannada

  ಚಂದನ್ ಕುಮಾರ್ ಅವರು 'ಲಕ್ಷ್ಮಿ ಬಾರಮ್ಮ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕವಿತಾ ಗೌಡ ಅವರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಂದನ್ ಅವರು ಇತ್ತೀಚೆಗಷ್ಟೆ ಬಿರಿಯಾನಿ ಹೋಟೆಲ್ ಸಹ ಆರಂಭಿಸಿದ್ದಾರೆ.

  English summary
  Kannada TV actor Chandan Kumar getting engaged to Kavitha Gowda on April 1.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X