For Quick Alerts
  ALLOW NOTIFICATIONS  
  For Daily Alerts

  ತಾಯಿಯನ್ನು ನೆನೆದು ಭಾವುಕರಾದ ಕಿರುತೆರೆ ನಟಿ ಆಶಿತಾ

  |

  ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಆಶಿತಾ ಚಂದ್ರಪ್ಪ ಭಾವುಕರಾಗಿದ್ದಾರೆ. ತಾಯಿಯನ್ನು ಕಳೆದುಕೊಂಡ ನೋವಿನಲ್ಲಿ ಆಕೆ ದಿನಗಳನ್ನು ಕಳೆಯುತ್ತಿದ್ದಾರೆ.

  ಹೌದು, ಹದಿಮೂರು ದಿನಗಳ ಹಿಂದೆಯಷ್ಟೇ ಆಶಿತಾ ಚಂದ್ರಪ್ಪ ಅವರ ತಾಯಿ ವಿಧಿವಶರಾದರು. ತಾಯಿಯ ನಿಧನದಿಂದ ಆಘಾತಗೊಂಡ ಆಶಿತಾ ಇನ್ಸ್ಟಾಗ್ರಾಮ್ ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ.

  'ಬಿಗ್ ಬಾಸ್' ಮನೆಯಲ್ಲಿ ಉತ್ಸಾಹವೇ ಇಲ್ಲದ ಸ್ಪರ್ಧಿ 'ಆಶಿತಾ'.!

  ಅಮ್ಮ,

  ''ನೀನು ನಮ್ಮನ್ನು ಅಗಲಿ 13 ದಿನಗಳು ಕಳೆದಿವೆ. ನೀನಿಲ್ಲದೆ ದಿನಗಳನ್ನು ಕಳೆಯುವುದು ಕಷ್ಟವಾಗುತ್ತಿದೆ. ನನಗೆ ಗೊತ್ತು ನೀನು ನಮ್ಮನ್ನು ನೋಡುತ್ತಿದ್ದೀಯಾ.. ನಾವು ಅಳುವುದನ್ನು ನೋಡಿ ನಮ್ಮನ್ನು ಬೈಯುತ್ತಾ ಇರ್ತೀಯ.. ನಾವು ಅದನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ ಅಮ್ಮ.. ನೀನಿಲ್ಲದ ನನ್ನ ಜೀವನ ಎಂದಿನಂತೆ ಇಲ್ಲ. ನಿದ್ದೆ ಇಲ್ಲದ ರಾತ್ರಿಗಳು ಎಂದು ಕೊನೆಗೊಳ್ಳುವುದೋ ಗೊತ್ತಿಲ್ಲ. ನಿನ್ನ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು ಎನ್ನಿಸುತ್ತಿದೆ. ಐ ಲವ್ ಯು ಮಾ.. ಮಿಸ್ ಯು..'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಆಶಿತಾ ಬರೆದುಕೊಂಡಿದ್ದಾರೆ.

  ತಾಯಿಯನ್ನು ಕಳೆದುಕೊಂಡ ಆಶಿತಾ ಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

  ಗಣರಾಜ್ಯ ಅಂದ್ರೇನು, 'ಬಾಹುಬಲಿ' ಅಂದ್ರೆ ಯಾರು ಅನ್ನೋದೇ ಆಶಿತಾಗೆ ಗೊತ್ತಿಲ್ಲ.!  ಅಂದ್ಹಾಗೆ, ಆಶಿತಾ 'ರಾಧಾ ರಮಣ' ಸೇರಿದಂತೆ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಚಕ್ರವರ್ತಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಶಿತಾ ಅಭಿನಯಿಸಿದ್ದಾರೆ.

  English summary
  Kannada TV Actress Ashita's emotional post on losing her mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X