For Quick Alerts
  ALLOW NOTIFICATIONS  
  For Daily Alerts

  ಪೋಷಕ ನಟ ಕಿರುತೆರೆ ಕಲಾವಿದ ಎಚ್ ವಿ ಪ್ರಕಾಶ್ ಇನ್ನಿಲ್ಲ

  By Rajendra
  |

  ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಪೋಷಕ ನಟ ಹಾಗೂ ಕಿರುತೆರೆ ಕಲಾವಿದ ಎಚ್ ವಿ ಪ್ರಕಾಶ್ ಅವರು ಮೃತಪಟ್ಟಿದ್ದಾರೆ. ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಕಾಶ್ ಭಾನುವಾರ (ಜೂ.30) ಮಧ್ಯಾಹ್ನ 3 ಗಂಟೆ ಸಮಯಕ್ಕೆ ನಿಧನರಾಗಿದ್ದಾರೆ.

  ಜೂ.23ರಂದು ಪ್ರಕಾಶ್ ಅವರು ಯಶವಂತಪುರ ತ್ರಿವೇಣಿ ರಸ್ತೆಯಲ್ಲಿ ಬೈಕ್ ನಿಂದ ಬಿದ್ದು ತಲೆಗೆ ಪೆಟ್ಟಾಗಿತ್ತು. ಕೂಡಲೆ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಭಾನುವಾರ ಚಿರನಿದ್ರೆಗೆ ಜಾರಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.

  ಹಾಸನ ಜಿಲ್ಲೆಯವರಾದ ಪ್ರಕಾಶ್ ಅವರು ಬೆಂಗಳೂರಿನ ರಾಜಾಜಿನಗರಲ್ಲಿ ಕೆಲವರ್ಷಗಳಿಂದ ವಾಸವಾಗಿದ್ದರು. ಅವರಿಗೆ ಪತ್ನಿ ಹಾಗೂ ಒಬ್ಬ ಮಗನಿದ್ದಾನೆ. ಬಾಲಕಲಾವಿದನಾಗಿ ಬೆಳ್ಳಿತೆರೆಗೆ ಅಡಿಯಿಟ್ಟ ಅವರು ಹಲವಾರು ರೇಡಿಯೋ ನಾಟಕಗಳಲ್ಲಿ, ರಂಗ ಪ್ರಯೋಗಗಳಲ್ಲಿ ತೊಡಗಿಕೊಂಡವರು.

  ಕನ್ನಡದ ತೂಗುವೆ ಕೃಷ್ಣನ, ಮತ್ಸರ, ಒಂದು ಸಿನಿಮಾ ಕಥೆ, ಅಜಗಜಾಂತರ, ಕೆರಳಿದ ಕೇಸರಿ, ಶ್ವೇತಾಗ್ನಿ ಸೇರಿದಂತೆ 17ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ಸಿಹಿಕಹಿ, ಪಾಪ ಪಾಂಡು, ಸಿಲ್ಲಿ ಲಲ್ಲಿ ಮುಂತಾದವುಗಳಲ್ಲೂ ಅಭಿನಯಿಸಿದ್ದಾರೆ.

  ಸರಿ ಸುಮಾರು 25ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ನಿರ್ದೆಶಿಸಿದ್ದಾರೆ ಪ್ರಕಾಶ್. ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಅತೀವ ಸಂತಾಪ ವ್ಯಕ್ತಪಡಿಸಿದೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಅವರ ಅಂತ್ಯಕ್ರಿಯೆ ರಾಜಾಜಿನಗರದ ಹರಿಶ್ಚಂದ್ರಘಾಟ್ ನಲ್ಲಿ ನೆರವೇರಲಿದೆ. (ಏಜೆನ್ಸೀಸ್)

  English summary
  Kannada small screen actor and character artist HV Prakash (53) passed away here on Sunday (30th June) afternoon. He met with a road accident at Triveni Road, Yeshwanthpur on 23rd June. After admitted to private hospital in Rajajinagar, he couldn't respond the treatment and died on Sunday. He acted in Keralida Kesari,Ajagajantara film and Papa Pandu, Sihi Kahi tv serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X