»   » ತೆಲುಗು, ತಮಿಳು ಸ್ಟಾರ್ ಗಳ ನಿದ್ದೆಗೆಡಿಸಿರುವ 'ಉಗ್ರಂ'

ತೆಲುಗು, ತಮಿಳು ಸ್ಟಾರ್ ಗಳ ನಿದ್ದೆಗೆಡಿಸಿರುವ 'ಉಗ್ರಂ'

By: ಜೀವನರಸಿಕ
Subscribe to Filmibeat Kannada

ಶ್ರೀಮುರಳಿ ಅಭಿನಯದ 'ಉಗ್ರಂ' ಅಬ್ಬರವೇ ಹಾಗಿತ್ತು. ಸಿನಿಮಾ ಎಂಟ್ರಿ ಕೊಡೋಕೂ ಮೊದಲು ಟ್ರೈಲರ್ ನೋಡೀನೇ ಜನರು ಥ್ರಿಲ್ಲಾಗಿದ್ರು. ಸಿನಿಮಾ ನೋಡ್ಬೇಕು ಅನ್ನೋ ಒಂದು ನಿರೀಕ್ಷೆ ಮೂಡಿಸಿದ್ದೇ ಚಿತ್ರದ ಟ್ರೈಲರ್. ಈಗ 'ಉಗ್ರಂ' ಸಿನಿಮಾ ರಾಜ್ಯಾದ್ಯಂತ ಅಬ್ಬರಿಸ್ತಿದೆ. ರಿಲೀಸಾದ 142 ಥಿಯೇಟರ್ ಗಳಲ್ಲೂ ಭರ್ಜರಿ ಕಲೆಕ್ಷನ್ನೊಂದಿಗೆ ಮುಂದುವರೆದಿದೆ.

'ಉಗ್ರಂ' ಚಿತ್ರ ಶ್ರೀಮುರಳಿ ಹತ್ತು ವರ್ಷದ ನಂತರ ಮರಳಿ ಬರೋ ಹಾಗೆ ಮಾಡಿದೆ. ಸೈಲೆಂಟ್ ಸ್ಟಾರ್ ಶ್ರೀಮುರಳಿ ಅವರು 'ಉಗ್ರಂ' ಸಿನಿಮಾದಲ್ಲಿ ಉಗ್ರರೂಪಿಯಾಗ್ತಾರೆ. ಚಿತ್ರದ ಕ್ಯಾಮೆರಾ ನಿಮಗೆ ಮೋಡಿ ಮಾಡದೇ ಇರೋದಿಲ್ಲ. ಪ್ರಶಾಂತ್ ನೀಲ್ ಅನ್ನೋ ನಿರ್ದೇಶಕ ನಿದ್ರೆ ಬಿಟ್ಟು ಕೆಲಸ ಮಾಡಿರೋದಕ್ಕೆ ಚಿತ್ರತಂಡ ಈಗ ಸಂಭ್ರಮದಲ್ಲಿ. [ಉಗ್ರಂ ಚಿತ್ರ ವಿಮರ್ಶೆ]

2004ರಲ್ಲಿ ಬಂದ 'ಕಂಠಿ' ಸಿನಿಮಾ ನಂತರ ಒಂದೂ ಅದ್ಭುತ ಅನ್ನಿಸೋ ಸಿನಿಮಾ ಕೊಡದ ಮುರಳಿ ಈಗ ಅಂದುಕೊಂಡಿದ್ದನ್ನ ಸಾಧಿಸಿದ್ದಾರೆ. ಒಳ್ಳೆಯ ಸಿನಿಮಾ ಈಗ ಯಶಸ್ವಿಯಾಗಿ ಮುನ್ನುಗ್ಗೋ ಜೊತೆಗೆ ಚಿತ್ರತಂಡಕ್ಕೆ ರಾಜ್ಯಾದ್ಯಂತ ಸುತ್ತಾಡಿ ಚಿತ್ರದ ಪ್ರಚಾರ ನಡೆಸುವ ಜೋಷ್ ತಂದುಕೊಟ್ಟಿದೆ. [ಉಗ್ರಂ 'ದರ್ಶನ'ಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್]

ಉಗ್ರಂ ಮೇಲೆ ದೊಡ್ಡ ದೊಡ್ಡ ಸ್ಟಾರ್ ಗಳ ಕಣ್ಣು

ಇದಕ್ಕಿಂತ ಮುಖ್ಯವಾಗಿ ತಮಿಳು, ತೆಲುಗಲ್ಲಿ 'ಉಗ್ರಂ'ಗೆ ಭರ್ಜರಿ ಬೇಡಿಕೆ ಬಂದಿದೆ. ದೊಡ್ಡ ದೊಡ್ಡ ಸ್ಟಾರ್ ಗಳು 'ಉಗ್ರಂ' ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಉಗ್ರಂ ರುದ್ರ ನರ್ತನದ ಕಂಪ್ಲೀಟ್ ಡೀಟೇಲ್ಸ್ ಸ್ಲೈಡ್ ರೀಲ್ ನಲ್ಲಿ...

ಉಗ್ರಂ ತಂಡ ರಾಜ್ಯಾದ್ಯಂತ ರೌಂಡಪ್

ಶ್ರೀಮುರಳಿಯ 'ಉಗ್ರಂ' ಮೊದಲ ವಾರ ಭರ್ಜರಿ ಕಲೆಕ್ಷನ್ ಗಳಿಸ್ತಿದೆ. ಚಿತ್ರದ ಯಶಸ್ಸು ಈಗ ಚಿತ್ರತಂಡವನ್ನ ರಾಜ್ಯಾದ್ಯಂತ ಪ್ರಚಾರಕ್ಕೆ ಹುರಿದುಂಬಿಸ್ತಿದೆ. ಮುರಳಿ ಜೊತೆ ಹರಿಪ್ರಿಯಾ ಕೂಡ ಸಿನಿಮಾದ ಪ್ರಚಾರದ ರೌಂಡಪ್ ನಲ್ಲಿ ಮಿಂಚಲಿದ್ದಾರೆ.

ಮುರಳಿ ಸಿನಿಮಾಗೆ ಸಿಕ್ಕ ದೊಡ್ಡ ಓಪನಿಂಗ್

ಮುರಳಿ ಅನ್ನೋ ಹೀರೋ ಫೀನಿಕ್ಸ್ ನಂತೆ ಎದ್ದು ಬಂದಿದ್ದಾರೆ. 'ಉಗ್ರಂ' ಸಿನಿಮಾ ಮೂಲಕ ಮುರಳಿ ಮರಳಿ ಬಂದಿದ್ದಾರೆ. ಮುರಳಿ ಸಿನಿಮಾವನ್ನ ಕೊಳ್ಳೋಕೆ ತಮಿಳು, ತೆಲುಗು ಚಿತ್ರರಂಗದವರು ಭರ್ಜರಿ ಆಫರ್ ಕೊಟ್ಟಿದ್ದಾರೆ.

ಸಿಂಘಂ ಸೂರ್ಯ ಉಗ್ರಂ ಸಿನಿಮಾ ನೋಡಬೇಕಂತೆ

ಕೋಲಿವುಡ್ ನ 'ಸಿಂಘಂ' ಸೂರ್ಯ ಅವರು ಮುರಳಿ ಅಭಿನಯದ 'ಉಗ್ರಂ' ಸಿನಿಮಾ ನೋಡೋ ಇಚ್ಚೆ ವ್ಯಕ್ತಪಡಿಸಿದ್ದಾರೆ. ಕನ್ನಡದವರು ತೆಲುಗು, ತಮಿಳು ಸಿನಿಮಾ ನೋಡೋ ಸಮಯದಲ್ಲಿ ತೆಲುಗು, ತಮಿಳಿನ ಸ್ಟಾರ್ ಗಳೇ ಕನ್ನಡ ಸಿನಿಮಾ ನೋಡೋಕೆ ಹೊರಟಿದ್ದಾರೆ.

ಧನುಷ್ ಗೂ ಉಗ್ರಂ ಸಿನಿಮಾ ತೋರಿಸ್ತಾರೆ ನಿರ್ದೇಶಕರು

ಕೋಲಿವುಡ್ ಸೆಂಟಿಮೆಮಟಲ್ ಸ್ಟಾರ್ ಧನುಷ್ ಈಗ ಕನ್ನಡ ಸಿನಿಮಾ ನೋಡ್ಬೇಕು ಅಂದುಕೊಂಡಿದ್ದಾರೆ. ಸಿನಿಮಾದ ಟ್ರೈಲರ್ ನೋಡಿರೋ ಧನುಷ್ ಗೂ ಕೂಡ 'ಉಗ್ರಂ'ನ ಉಗ್ರರೂಪ ನೋಡೋ ಆಸೆಯಾಗಿದೆ.

ಉಗ್ರಂ ನೋಡಲಿದ್ದಾರೆ ಅಲ್ಲು ಅರ್ಜುನ್

ಟಾಲಿವುಡ್ ನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ 'ಉಗ್ರಂ' ಸಿನಿಮಾ ಟ್ರೈಲರ್ ನೋಡಿ ಥ್ರಿಲ್ಲಾಗಿದ್ದಾರಂತೆ. ಸಿನಿಮಾವನ್ನ ನೋಡೋ ಇಂಗಿತವನ್ನ ನಿರ್ದೇಶಕರ ಜೊತೆ ಹಂಚಿಕೊಂಡಿದ್ದಾರಂತೆ.

ಉಗ್ರಂ ಸಿನಿಮಾ ಗೆದ್ದಿದೆ

ಉಗ್ರಂ ಚಿತ್ರತಂಡ ರಾಜ್ಯಾದ್ಯಂತ ಚಿತ್ರದ ಪ್ರಚಾರದ ರ್ಯಾಲಿ ಶುರುವಾಗಲಿದೆ. ಉಗ್ರಂ ಸಿನಿಮಾ ಗೆದ್ದಿದೆ ಆದರೆ ಚಿತ್ರವನ್ನ ಹಂಡ್ರೆಡ್ ಡೇಸ್ ಓಡಿಸೋಕೆ ಚಿತ್ರತಂಡ ರಾಜ್ಯಾದ್ಯಂತ ಗೆಲುವಿನ ಸವಾರಿ ಹೊರಟಿದೆ.

English summary
Sri Murali starrer Kannada action flick Ugramm to be remade in Tamil, Telugu. It might be 'Allu Arjun' or 'Jr NTR' in Telugu and 'Dhanush' in Tamil says sources. The movie directed by Prashanth Neel, stars Sri Murali and Haripriya as the lead pair.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada