For Quick Alerts
  ALLOW NOTIFICATIONS  
  For Daily Alerts

  ಎರಡೆರಡು ಸಿನಿಮಾಗಳಲ್ಲಿ ಬ್ಯುಸಿ ಕಿರುತೆರೆ ನಟ ಕಿರಣ್ ರಾಜ್ : 'ಬಹದ್ದೂರು ಗಂಡು' ಆಯ್ತು ಈಗ 'ಬಡ್ಡೀಸ್'

  |

  ಕಿರುತೆರೆಯಲ್ಲಿ ಹೆಸರು ಮಾಡಿದ್ದ ಕಿರುತೆರೆ ನಟ ಕಿರಣ್ ರಾಜ್. ಧಾರಾವಾಹಿ ಮೂಲಕವೇ ಕರ್ನಾಟಕದ ಮನೆಗಳಲ್ಲಿ ಚಿರಪರಿಚಿತನಾಗಿರುವ ಕಿರಣ್ ರಾಜ್ ಈಗ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದು ಕಡೆ ಮೊದಲ ಸಿನಿಮಾ 'ಬಹದ್ದೂರು ಗಂಡು' ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಇನ್ನೊಂದು ಕಡೆ ಮತ್ತೊಂದು ಸಿನಿಮಾ 'ಬಡ್ಡೀಸ್' ಶೂಟಿಂಗ್ ಸಾಗುತ್ತಿದೆ.

  ಹೌದು, ಕಿರಣ್ ರಾಜ್ ಎರಡು ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ದುಬೈನಲ್ಲಿ ಜಾಹೀರಾತು ಸಂಸ್ಥೆ ನಡೆಸುತ್ತಿರುವ ಮಹಿಳೆ 'ಬಡ್ಡೀಸ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕಿರು ತೆರೆಯಿಂದ ಜನ ಮನಗೆದ್ದಿರುವ ಕಿರಣ್ ರಾಜ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಚಿತ್ರೀಕರಣ ನಡೆಯುತ್ತಿದೆ.

  ತೃತೀಯ ಲಿಂಗಿಗಳಿಗೆ ಕಿರಣ್ ರಾಜ್ ಸಹಾಯ: ಮಂಗಳಮುಖಿಯರ ಆಶೀರ್ವಾದತೃತೀಯ ಲಿಂಗಿಗಳಿಗೆ ಕಿರಣ್ ರಾಜ್ ಸಹಾಯ: ಮಂಗಳಮುಖಿಯರ ಆಶೀರ್ವಾದ

  ಸ್ನೇಹದ ಮಹತ್ವ ಸಾರುವ ಸಿನಿಮಾ 'ಬಡ್ಡೀಸ್'

  ಬಹದ್ದೂರು ಗಂಡು ಸಿನಿಮಾ ಬಳಿಕ ಕಿರಣ್ ರಾಜ್ 'ಬಡ್ಡೀಸ್‌'ನಲ್ಲೂ ಬ್ಯುಸಿಯಾಗಿದ್ದಾರೆ.‌ 'ಬಡ್ಡೀಸ್' ಚಿತ್ರಕ್ಕೆ ಹಲವು ದಿನಗಳಿಂದ ಬಿರುಸಿನ ಚಿತ್ರೀಕರಣ ನಡೆದಿದೆ. ಬೆಂಗಳೂರು, ಮಂಗಳೂರು, ಗೋವಾ, ತುಮಕೂರು ಸೇರಿದಂತೆ ಹಲವೆಡೆ ಸಿನಿಮಾದ ಶೂಟಿಂಗ್ ನಡೆದಿದೆ. ಬಹುತೇಕ ಚಿತ್ರೀಕರಣ ಮುಗಿಸಿದ್ದು, ಕೊನೆಯಲ್ಲಿ ಕೆಲವು ದೃಶ್ಯಗಳು ಉಳಿದುಕೊಂಡಿದೆಯಷ್ಟೇ. ಅಂದ ಹಾಗೇ‌ 'ಬಡ್ಡಿಸ್' ಚಿತ್ರ ಸ್ನೇಹದ ಮಹತ್ವ ಸಾರಲಿದ್ದು, ಈ ಚಿತ್ರದ ಫಸ್ಟ್ ಲುಕ್ ಮುಂದಿನವಾರ ಬಿಡುಗಡೆಯಾಗಲಿದೆ.‌

  ಮಂಗಳೂರು ಮೂಲದ ಭಾರತಿ ಶೆಟ್ಟಿ 'ಬಡ್ಡೀಸ್' ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಸದ್ಯಕ್ಕೆ ದುಬೈನಲ್ಲಿ ನೆಲೆಸಿರುವ ಭಾರತಿ ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿದ್ದಾರೆ‌. ಉತ್ತಮ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡಬೇಕು ಎನ್ನುವುದು ಇವರ ಕನಸು. ಹೀಗಾಗಿ ಕಿರಣ್ ರಾಜ್ ಅವರನ್ನು ಹೀರೋ ಮಾಡಿ, 'ಬಡ್ಡೀಸ್' ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.

  ನಂದಿ ಬೆಟ್ಟದಲ್ಲಿ 'ಬಹದ್ದೂರ್ ಗಂಡು' ಕಿರಣ್ ರಾಜ್ ಭರ್ಜರಿ ಫೈಟ್ನಂದಿ ಬೆಟ್ಟದಲ್ಲಿ 'ಬಹದ್ದೂರ್ ಗಂಡು' ಕಿರಣ್ ರಾಜ್ ಭರ್ಜರಿ ಫೈಟ್

  22.2.22 ವಿಶೇಷ ದಿನದಂದು ಪ್ರಚಾರ ಆರಂಭ

  ಕನ್ನಡದಲ್ಲಿ 5 ಜಿ ಎನ್ನುವ ಸಿನಿಮಾ ನಿರ್ದೇಶಿಸಿದ್ದ ಗುರುತೇಜ್ ಶೆಟ್ಟಿ 'ಬಡ್ಡೀಸ್' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಹಾಡುಗಳನ್ನೂ ಇವರೇ ಬರೆದಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇವರು ನಿರ್ದೇಶಿಸಿದ್ದ 5ಜಿ ಸಿನಿಮಾ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿ ಒಂದು ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದರು. ಈ ಸಿನಿಮಾದಲ್ಲಿ ಕಿರಣ್ ರಾಜ್‌ಗೆ ಸಿರಿ ಪ್ರಹ್ಲಾದ್ ನಾಯಕಿಯಾಗಿದ್ದಾರೆ. ಗೋಪಾಲ್ ದೇಶಪಾಂಡೆ, ಅರವಿಂದ್ ಬೋಳಾರ್, ವಿನಯ್ ರೋಹನ್ ಸಾಯಿ, ಗಿರೀಶ್ 'ಬಡ್ಡೀಸ್' ಚಿತ್ರದಲ್ಲಿ ನಟಿಸಿದ್ದಾರೆ.

  2021ರಲ್ಲಿ ಹೊಸ ಹೊಸ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್2021ರಲ್ಲಿ ಹೊಸ ಹೊಸ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್

  22.2.22 ವಿಶೇಷವಾದ ದಿನಾಂಕ. ಇಂತಹ ಅಪರೂಪ ದಿನ ಸಿಗುವುದು ತೀರಾ ವಿರಳ. ಹೀಗಾಗಿ ಆ ದಿನದಂದೇ 'ಬಡ್ಡೀಸ್' ಚಿತ್ರದ ಪ್ರಚಾರ ಆರಂಭಿಸಲು ತೀರ್ಮಾನಿಸಿದ್ದಾರೆ. ಈ ಸಿನಿಮಾದಲ್ಲಿ ಮೂರು ಹಾಡುಗಳಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಯು.ಎಸ್.ಎ ವಾಸಿ‌ ನಿಭಾ ಶೆಟ್ಟಿ‌ ಎಂಬ ಮಹಿಳೆ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

  English summary
  Kannadathi serial actor Kiran Raj busy with his second movie 'Buddies' after 'Bahadduru Gandu'.
  Tuesday, February 22, 2022, 9:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X