Just In
Don't Miss!
- News
ಉದ್ಯಮಿ ಅಜೀಂ ಪ್ರೇಮ್ಜಿ ವಿರುದ್ಧದ ಪ್ರಕರಣ ರದ್ದು
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಹೇಶ್ ಬಾಬು 'ಮಹರ್ಷಿ' ವಿರುದ್ಧ ಕನ್ನಡಾಭಿಮಾನಿಗಳು ಆಕ್ರೋಶ
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ 'ಮಹರ್ಷಿ' ಸಿನಿಮಾ ಇಂದು ದೇಶಾದ್ಯಂತ ತೆರೆಕಂಡಿದೆ. ಕರ್ನಾಟಕದಲ್ಲೂ ಭಾರಿ ದೊಡ್ಡ ಮಟ್ಟದಲ್ಲಿ ತೆಲುಗು ಬಿಡುಗಡೆಯಾಗಿದೆ. ಇದೀಗ ಈ ಚಿತ್ರದ ವಿರುದ್ಧ ಕೆಲವು ಕನ್ನಡ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಿನ್ಸ್ ನಟನೆಯ 25ನೇ ಚಿತ್ರ ಇದಾಗಿದ್ದು, ಕರ್ನಾಟದಲ್ಲಿ ಸುಮಾರು 100 ಚಿತ್ರಮಂದಿರದಲ್ಲಿ 490ಕ್ಕೂ ಹೆಚ್ಚು ಶೋಗಳು ನಡೆಯುತ್ತಿದೆ. ಇದರ ವಿರುದ್ಧ ಕನ್ನಡ ಅಭಿಮಾನಿಗಳು ಮತ್ತು ಡಬ್ಬಿಂಗ್ ಪರ ಹೋರಾಟಗಾರರು ಕಿಡಿಕಾರಿದ್ದಾರೆ.
'ಮಹರ್ಷಿ' ಚಿತ್ರದ ರಿಲೀಸ್ ವೇಳೆ ಅಭಿಮಾನಿ ಸಾವು
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಯಾನ ಮಾಡ್ತಿರುವ ಚಿತ್ರಾಭಿಮಾನಿಗಳು ಮಹರ್ಷಿ ಸಿನಿಮಾ ಮತ್ತು ಕರ್ನಾಟಕ ವಿತರಕರ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಡಬ್ಬಿಂಗ್ ವಿರೋಧಿಸುವವರ ವಿರುದ್ಧ ಕೆಂಡಕಾರುತ್ತಿದ್ದಾರೆ. ಮುಂದೆ ಓದಿ.....

ಕನ್ನಡಿಗರ ಮೇಲೆ ದಬ್ಬಾಳಿಕೆ
''496 ಶೋ ಅಂದರೆ ಬೆಂಗಳೂರಿನಲ್ಲೇ 100 ಚಿತ್ರಮಂದಿರಗಳಲ್ಲಿ ಬಿಡುಗಡೆ. ಇದಕ್ಕಿಂತ ಕನ್ನಡಿಗರ ಮೇಲೆ ತೆಲುಗರ ದಬ್ಬಾಳಿಕೆಗೆ ಉದಾಹರಣೆ ಬೇಕೇ? ಕನ್ನಡಕ್ಕೆ ಡಬ್ ಮಾಡಲ್ಲ ಅಂತ ಹಠಕ್ಕೆ ಬಿದ್ದಿರುವ ಸ್ವಾಗತ್ ಎಂಟರ್ಪ್ರೈಸಸ್ ಅವರ ಮುಂದೆ ಲೆಕ್ಕಕ್ಕಿಲ್ಲದೆ ಹೋದವೇ ಕನ್ನಡ ಸಂಘಟನೆಗಳು'' ಎಂದು ಡಬ್ಬಿಂಗ್ ಹೋರಾಟಗಾರ ಗಣೇಶ್ ಚೇತನ್ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ 'ಭಾರತ್' ಕನ್ನಡದಲ್ಲಿ ಬರಲೇಬೇಕು

ಇದು ತೆಲುಗು ಹೇರಿಕೆ.!
ಇಷ್ಟು ದೊಡ್ಡ ಸಂಖ್ಯೆಯಲ್ಲಿ ತೆಲುಗು ಸಿನಿಮಾ ಮಹರ್ಷಿ ಕರ್ನಾಟಕದಲ್ಲಿ ಬಿಡುಗಡೆ ಮಾಡುವುದರ ಅವಶ್ಯಕತೆ ಏನಿತ್ತು? ಇದು ತೆಲುಗು ಹೇರಿಕೆ ಅಲ್ಲವೇ? ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಬಹುದು ಅಲ್ಲವೇ ಎಂದು ಮತ್ತೊಬ್ಬ ಡಬ್ಬಿಂಗ್ ಹೋರಾಟಗಾರ ಟ್ವೀಟ್ ಮಾಡಿದ್ದಾರೆ.

ಎಲ್ಲಿ ಹೋಯ್ತು ನಿಮ್ಮ ಸ್ವಾಭಿಮಾನ?
''ಮಾತೆತ್ತಿದರೆ ಸ್ವಾಭಿಮಾನ ಸ್ವಾಭಿಮಾನ ಎನ್ನುತ್ತಿದ್ದವರು ಈಗ ಎಲ್ಲಿ? ಎಲ್ಲೋಯ್ತ್ರಯ್ಯ ನಿಮ್ಮ ಸ್ವಾಭಿಮಾನ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಕನ್ನಡ ನೆಲದಲ್ಲಿ ಹೆಚ್ಚು ಸಂಖ್ಯೆಯಲ್ಲಿ ತೆಲುಗು ಸಿನಿಮಾ ರಿಲೀಸ್ ಮಾಡಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಕನ್ನಡದಲ್ಲಿ ಬರುತ್ತಿದೆ 'ಫಾಸ್ಟ್ ಅಂಡ್ ಫ್ಯೂರಿಯಸ್' ಚಿತ್ರ

ಡಬ್ಬಿಂಗ್ ವಿರೋಧಿಗಳು ಎಲ್ಲಿದ್ದೀರಾ?
ಡಬ್ಬಿಂಗ್ ಸಿನಿಮಾ ರಿಲೀಸ್ ಮಾಡಿದ್ರೆ ಪ್ರತಿಭಟನೆ ಮಾಡುವ ಹಾಗೂ ವಿರೋಧ ಮಾಡುವ ಡಬ್ಬಿಂಗ್ ವಿರೋಧಿಗಳು ಈಗ ಎಲ್ಲಿದ್ದೀರಾ ಎಂದು ಕೇಳುತ್ತಿದ್ದಾರೆ.
ಕನ್ನಡಕ್ಕೆ ಡಬ್ ಆಗಿದೆ 'ರಂಗಸ್ಥಳಂ', ಯಾವಾಗ ಬಿಡುಗಡೆ ?

ಡಬ್ಬಿಂಗ್ ಮಾಡಿ ರಿಲೀಸ್ ಮಾಡಲಿ
ತೆಲುಗು ಭಾಷೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿನಿಮಾ ರಿಲೀಸ್ ಆದ್ರೆ ಕನ್ನಡ ಭಾಷೆ ಹೇಗೆ ಬೆಳೆಯುತ್ತೆ. ಅದರ ಬದಲು ಕನ್ನಡದಲ್ಲಿ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡಿದ್ರೆ ಅದರಿಂದ ನೋಡುವವರಿಗೆ ಕನ್ನಡ ಭಾಷೆ ಕಲಿಯುವುದಕ್ಕೂ ಸಹಕಾರಿಯಾಗುತ್ತೆ. ಪರಭಾಷೆ ಚಿತ್ರಗಳನ್ನ ಡಬ್ ಮಾಡಿ ರಿಲೀಸ್ ಮಾಡುವುದು ಉತ್ತಮ ಎಂದು ಡಬ್ಬಿಂಗ್ ಪರ ಬೆಂಬಲಿಗರು ಬೇಡಿಕೆಯಾಗಿದೆ.