For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಗಣಿಯ '99' ಹಾಡು ಕೇಳಿ ಮನಸೋತ ಸುದೀಪ್

  By ಶ್ರುತಿ
  |

  ಇತ್ತೀಚಿನ ದಿನಗಳಲ್ಲಿ ಒಬ್ಬ ನಟರ ಸಿನಿಮಾವನ್ನು ನೋಡಿ ಮತ್ತೊಬ್ಬ ನಟ ಮೆಚ್ಚುಗೆ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ. ಹೀಗೆ ಕಿಚ್ಚ ಸುದೀಪ್ ಅವರಿಗೆ ಇಷ್ಟವಾಗುವ ಸಾಕಷ್ಟು ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ತನ್ನದೆ ಆದ ಶೈಲಿಯಲ್ಲಿ ವಿಮರ್ಶೆ ಸಹ ಮಾಡಿ ಚಿತ್ರತಂಡದ ಬೆನ್ನು ತಟ್ಟುತ್ತಾರೆ.

  ಅದು ಹೊಸಬರ ಸಿನಿಮಾ ಆಗಿರಬಹುದು ಅಥವಾ ಸ್ಟಾರ್ ನಟರ ಸಿನಿಮಾವೆ ಆಗಿರಬಹುದು. ಈಗ ಅಭಿನಯ ಚಕ್ರವರ್ತಿ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಸಿನಿಮಾದ ಹಾಡಿಗೆ ಮನಸೋತಿದ್ದಾರೆ...

  99 ಚಿತ್ರದಿಂದ, 'ಹೀಗೆ ದೂರ ಹೋಗುವ ಮುನ್ನ....' ಅನ್ನೋ ಸಾಲುಗಳಿಂದ ಪ್ರಾರಂಭವಾಗುವ ಮೊದಲ ಹಾಡು ರಿಲೀಸ್ ಆಗಿದೆ. ಅರ್ಜುನ್ ಜನ್ಯ ಸಂಗೀತ ಸಾರಥ್ಯದಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾಹಿತ್ಯ ಕವಿರಾಜ್ ಬರೆದಿದ್ದಾರೆ, ಈ ಮೆಲೋಡಿ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ.

  ಈ ಹಾಡು ರಿಲೀಸ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿನ ಬಗ್ಗೆ ಕಿಚ್ಚ ಸುದೀಪ್ ಸಹ ತಮ್ಮ ಟ್ವಿಟ್ಟರ್ ಪೇಜ್‌ನಲ್ಲಿ ಹಾಡಿ ಹೊಗಳಿದ್ದಾರೆ. ''ಈ ಗೀತೆಯ ಪ್ರತಿಯೊಂದು ಸಾಲುಗಳು ಅದ್ಭುತವಾಗಿವೆ. ಗೆಳೆಯ ಅರ್ಜುನ್ ಜನ್ಯ ಸಂಗೀತ ಅದ್ಭುತವಾಗಿದೆ. ತೆರೆಮೇಲೆ ಗೋಲ್ಡನ್ ಸ್ಟಾರ್ ಗಣೇಶ್ ಅಬ್ಬರಿಸಲಿದ್ದಾರೆ ಅನ್ನೋ ನಂಬಿಕೆ ನನಗಿದೆ ಇದೆ'' ಎಂದು ಕಿಚ್ಚ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಚಿತ್ರತಂಡಕ್ಕೆ ಶುಭಾಶಯವನ್ನು ತಿಳಿಸಿದ್ದಾರೆ.

  '99' ಚಿತ್ರದ ಗಣೇಶ್ ಲುಕ್ ಬಗ್ಗೆ ಸುದೀಪ್ ಟ್ವೀಟ್ '99' ಚಿತ್ರದ ಗಣೇಶ್ ಲುಕ್ ಬಗ್ಗೆ ಸುದೀಪ್ ಟ್ವೀಟ್

  ಅಂದ್ಹಾಗೆ, ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಪ್ರೀತಮ್ ಗುಬ್ಬಿ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಗಣೇಶ್‌ಗೆ 'ದಿಲ್ ರಂಗೀಲ' ಸಿನಿಮಾ ನಿರ್ದೇಶನ ಮಾಡಿದ್ದ ಪ್ರೀತಮ್ ಮತ್ತೊಮ್ಮೆ ಗಣೇಶ್ ಸಿನಿಮಾದ ಸಾರಥ್ಯ ವಹಿಸಿಕೊಂಡಿರೋದು ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿದೆ.

  ಇನ್ನು ಗಣೇಶ್‌ಗೆ ನಾಯಕಿಯಾಗಿ ಜಾಕಿ ಭಾವನಾ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 'ರೋಮಿಯೋ' ಚಿತ್ರದಲ್ಲಿ ಭಾವನ ಜೊತೆ ಡ್ಯುಯೆಟ್ ಹಾಡಿದ್ದ ಗಣಿ ಈಗ ಮತ್ತೊಮ್ಮೆ 99 ಸಿನಿಮಾ ಮೂಲಕ ಒಂದಾಗಿರುವುದು ವಿಶೇಷ..

  ಕನ್ನಡ ಆಯ್ತು ಈಗ ತೆಲುಗಿನಲ್ಲಿ '96' ರೀಮೇಕ್ ಕನ್ನಡ ಆಯ್ತು ಈಗ ತೆಲುಗಿನಲ್ಲಿ '96' ರೀಮೇಕ್

  ಸದ್ಯ ಹಾಡಿನ ಮೂಲಕ ಚಂದನವನದಲ್ಲಿ ಸದ್ದು ಮಾಡುತ್ತಿರುವ 99 ಸಿನಿಮಾ ತಮಿಳಿನ 96 ಚಿತ್ರದ ರಿಮೇಕ್. ಕಳೆದ ವರ್ಷ ಅಂದರೆ, 2018ರಲ್ಲಿ ತಮಿಳಿನಲ್ಲಿ ತೆರೆಗೆ ಬಂದಿದ್ದ ಸಿನಿಮಾ 96. ವಿಜಯ್ ಸೇತುಪತಿ ಮತ್ತು ತ್ರಿಷಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

  English summary
  Kannada actor kiccha sudeep likes Golden star ganesh’s 99 movie first song. Music by Arjun janya, sung by vijaya prakash, The movie directed by preetham gubbi. This movie is remake of tamil super hit film 96.
  Tuesday, March 5, 2019, 17:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X