»   » 'ಫ್ಲಾಪ್ ಡೈರೆಕ್ಟರ್' ಕಣ್ಣೀರ ಕಥೆ ಸೋತಿದ್ದೀನಿ ಸತ್ತಿಲ್ಲ

'ಫ್ಲಾಪ್ ಡೈರೆಕ್ಟರ್' ಕಣ್ಣೀರ ಕಥೆ ಸೋತಿದ್ದೀನಿ ಸತ್ತಿಲ್ಲ

By: ಜೀವನರಸಿಕ
Subscribe to Filmibeat Kannada

ಅದೊಂದು ಒಳ್ಳೆಯ ಸಿನಿಮಾ. ಸಿನಿಮಾದಲ್ಲಿ ಸ್ಟಾರ್ ಇರ್ಲಿಲ್ಲ. ಆದರೆ ಒಳ್ಳೆಯ ಕಥೆ ಇತ್ತು. ಕಥೇನೇ ಸಿನಿಮಾದ ಹೀರೋ ಅನ್ನೋ ಗಾಂಧಿನಗರದ ಬಡಾಯಿ ಕಥೆ ಕೇಳಿ ಕೊಳಾಯಿಯಲ್ಲಿ ನೀರು ಬಂದ ಹಾಗೆ ದುಡ್ಡು ಬರುತ್ತೆ ಅಂತ ನಂಬಿಕೊಂಡ ನಿರ್ದೇಶಕರು ಆ ಸಿನಿಮಾ ಮಾಡಿದ್ರು. ಆದ್ರೆ ಆ ಸಿನಿಮಾವನ್ನ ಜನ್ರು ನೋಡ್ಲೇ ಇಲ್ಲ.

ಅದೇ ಬೇಸರದಲ್ಲಿ ನಿರ್ದೇಶಕರು ಸುಮ್ಮನೆ ಕೂರಲಿಲ್ಲ. ಹೊಸ ಸಬ್ಜೆಕ್ಟ್ ಒಂದನ್ನ ಕೈಗೆತ್ತಿಕೊಂಡ್ರು. ಅದು ಒಂದು ನವಿರಾದ ಪ್ರೇಮಕಥೆ. ಅದಕ್ಕೆ 'ಮೈ ಆಟೋಗ್ರಾಫ್' ಸಿನಿಮಾದಲ್ಲಿ ಸುದೀಪ್ ರ ಬಾಲ್ಯದ ಪಾತ್ರ ಮಾಡಿದ್ದ ಸಂಜು ಹೀರೋ. 'ಜೀತು' ಸಿನಿಮಾದ ನಾಯಕಿ ರಚನಾ ಗೌಡ ಹೀರೋಯಿನ್. ಈ ಜೋಡಿಯ ಸಿನಿಮಾದ ಟೈಟಲ್ಲೇ "ಫ್ಲಾಪ್ ಡೈರೆಕ್ಟರ್". ಇತ್ತೀಚೆಗೆ ಚಿತ್ರದ ಆಡಿಯೋ ರೆಕಾರ್ಡಿಂಗ್ ಕೂಡ ಶುರುವಾಯ್ತು.

Kannda movie 'Flop Director' by Durga P S

'ಫ್ಲಾಪ್ ಡೈರೆಕ್ಟರ್' ಅನ್ನೋ ಸಿನಿಮಾ ಮಾಡ್ತಿರೋ ಯುವ ನಿರ್ದೇಶಕರು ದುರ್ಗಾ.ಪಿ.ಎಸ್. ಈ ಹಿಂದೆ 'ಸೀ ಯೂ' ಅನ್ನೋ ಸಿನಿಮಾ ಮಾಡಿದ್ದ ನಿರ್ದೇಶಕ ದುರ್ಗಾ ಪಿ.ಎಸ್ ರ ಸಿನಿಮಾದಲ್ಲೇ "ನೋಡಿ" ಅನ್ನೋದಿದ್ರೂ ಜನ್ರು ಸಿನಿಮಾವನ್ನ ನೋಡಿರ್ಲಿಲ್ಲ.

ಈಗ ಅದಕ್ಕೆ ರಿವೇಂಜ್ ತೊಗೊಳ್ತಿದ್ದಾರೆ ನಿರ್ದೇಶಕರು. ಈ ಕಥೆ ಹೇಳುವಾಗ ನಿರ್ದೇಶಕರ ಕಣ್ಣಲ್ಲಿ ನೀರಿತ್ತು. ಆ ನೀರಿನ ಹನಿಯಲ್ಲಿ ಮುಂದಿನ ಸಿನಿಮಾದ ಬಗ್ಗೆ ಕಾನ್ಫಿಡೆನ್ಸ್ ಹೊಳೀತಾ ಇತ್ತು. ಅಂದಹಾಗೆ ಫ್ಲಾಪ್ ಡೈರೆಕ್ಟರ್ ಸಿನಿಮಾದ ಟ್ಯಾಗ್ ಲೈನ್ 'ಸೋತಿದ್ದೀನಿ ಸತ್ತಿಲ್ಲ'. ಕನ್ನಡ ಹಾಗೂ ತಮಿಳಿನಲ್ಲಿ ಬರುತ್ತಿರುವ ದ್ವಿಭಾಷಾ ಚಿತ್ರ.

English summary
Durga P.S's new Kannada movie 'Flop Director' starts rolling. Earlier the director made a message oriented film 'See You'. Now he is back with 'Flop Director'. Sanju and Rachana Gowda plays a lead roles in the film.
Please Wait while comments are loading...