For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಹಿಂದಿಗಿಂತ ತೆಲುಗಿನಲ್ಲಿ ಸ್ಟ್ರಾಂಗು ಗುರು; ಮೊದಲ ವಾರ ತೆಲುಗು, ಹಿಂದಿಯಲ್ಲಿ ಕಲೆಕ್ಷನ್ ಎಷ್ಟು?

  |

  ಸೆಪ್ಟೆಂಬರ್ 30ರಂದು ಕನ್ನಡ ಭಾಷೆಯಲ್ಲಿ ವಿಶ್ವದಾದ್ಯಂತ ಭರ್ಜರಿ ಬಿಡುಗಡೆಗೊಂಡ ಕಾಂತಾರ ಸದ್ಯ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಅಕ್ಟೋಬರ್ 20ಕ್ಕೆ ಕಾಂತಾರ ಕನ್ನಡ ಅವತರಣಿಕೆ 3 ವಾರಗಳನ್ನು ಪೂರೈಸಿದ್ದರೆ, ಕಾಂತಾರ ಹಿಂದಿ ಅವತರಣಿಕೆ 7 ದಿನ ಮತ್ತು ತೆಲುಗು ಹಾಗೂ ತಮಿಳು ಅವತರಣಿಕೆಗಳು 6 ದಿನಗಳನ್ನು ಪೂರೈಸಿವೆ.

  ಇನ್ನು ಚಿತ್ರ ಈಗಾಗಲೇ 100 ಕೋಟಿ ಕ್ಲಬ್ ಸೇರಿದ್ದು ಎಲ್ಲ ಭಾಷೆಯೂ ಸೇರಿದಂತೆ 150 ಕೋಟಿ ದಾಟಿದೆ ಎಂಬ ಮಾತುಗಳನ್ನು ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಆಡುತ್ತಿದ್ದಾರೆ. ಮೊದಲಿಗೆ ಬಿಡುಗಡೆಗೊಂಡ ಕಾಂತಾರ ಕನ್ನಡ ಅವತರಣಿಕೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು, ಚಿತ್ರ ವೀಕ್ಷಿಸಿದ ಸಿನಿಪ್ರೇಕ್ಷಕರು ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂದಿದ್ದರು.

  ರಿಲೀಸ್ ಡೇ ಬೆಂಗಳೂರಲ್ಲಿ 203 ಶೋ ಪಡೆದ ಹೆಡ್ ಬುಷ್, ತಮಿಳು ಪ್ರಿನ್ಸ್‌ಗೆ 185; ಕಡಿಮೆ ಆಯ್ತಾ 'ಕಾಂತಾರ' ಹವಾ?ರಿಲೀಸ್ ಡೇ ಬೆಂಗಳೂರಲ್ಲಿ 203 ಶೋ ಪಡೆದ ಹೆಡ್ ಬುಷ್, ತಮಿಳು ಪ್ರಿನ್ಸ್‌ಗೆ 185; ಕಡಿಮೆ ಆಯ್ತಾ 'ಕಾಂತಾರ' ಹವಾ?

  ಹೀಗೆ ಕನ್ನಡದಲ್ಲಿ ಬ್ಲಾಕ್ ಬಸ್ಟರ್ ರಿಪೋರ್ಟ್ ಪಡೆದುಕೊಂಡಿದ್ದ ಕಾಂತಾರ ಹಿಂದಿ, ತೆಲುಗು ಹಾಗೂ ತಮಿಳಿಗೆ ಡಬ್ ಆಗಿ ಅಲ್ಲಿಯೂ ಸಹ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತು. ಮೊದಲಿಗೆ ಅಕ್ಟೋಬರ್ 14ರ ಶುಕ್ರವಾರದಂದು ಕಾಂತಾರ ಹಿಂದಿ ಅವತರಣಿಕೆ ಬಿಡುಗಡೆಗೊಂಡಿತು ಹಾಗೂ ಅಕ್ಟೋಬರ್ 15ರ ಶನಿವಾರ ತೆಲುಗು ಅವತರಣಿಕೆ ಬಿಡುಗಡೆಗೊಂಡಿತ್ತು. ಕಾಂತಾರ ಹಿಂದಿಯಲ್ಲಿ ಮೊದಲನೇ ದಿನ 1.27 ಕೋಟಿ ಸಂಪಾದಿಸಿ ಸಾಮಾನ್ಯ ಆರಂಭ ಪಡೆದುಕೊಂಡರೆ, ತೆಲುಗಿನಲ್ಲಿ ಬರೋಬ್ಬರಿ 3.95 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿತ್ತು. ಹೀಗೆ ಮೊದಲ ದಿನ ಇಷ್ಟು ಕೋಟಿ ಗಳಿಸಿದ್ದ ಕಾಂತಾರ ತೆಲುಗು ಅವತರಣಿಕೆ ಹಿಂದಿ ಹಾಗೂ ಕನ್ನಡ ಅವತರಣಿಕೆಗಳ ಮೊದಲ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿತ್ತು. ಹೀಗೆ ಮೊದಲ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದ್ದ ಕಾಂತಾರ ತೆಲುಗು ಇದೀಗ ವಾರದ ಗಳಿಕೆಯಲ್ಲಿಯೂ ಹಿಂದಿ ಅವತರಣಿಕೆಯನ್ನು ಹಿಂದಿಕ್ಕಿದೆ.

   ಅಕ್ಟೋಬರ್ 20ರ ತನಕ ಕಾಂತಾರ ತೆಲುಗು ಮತ್ತು ಹಿಂದಿ ಒಟ್ಟಾರೆ ಗಳಿಸಿದ್ದೆಷ್ಟು?

  ಅಕ್ಟೋಬರ್ 20ರ ತನಕ ಕಾಂತಾರ ತೆಲುಗು ಮತ್ತು ಹಿಂದಿ ಒಟ್ಟಾರೆ ಗಳಿಸಿದ್ದೆಷ್ಟು?

  ಅಕ್ಟೋಬರ್ 20ರ ಗುರುವಾರಕ್ಕೆ ಕಾಂತಾರ ಹಿಂದಿ 7 ದಿನಗಳನ್ನು ಪೂರೈಸುವುದರ ಮೂಲಕ ಒಟ್ಟು 15 ಕೋಟಿ ಗಳಿಕೆ ಮಾಡಿದ್ದರೆ, 6 ದಿನಗಳನ್ನು ಪೂರೈಸಿರುವ ಕಾಂತಾರ ತೆಲುಗು ಅವತರಣಿಕೆ ಒಟ್ಟು 20.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಕಾಂತಾರ ಹಿಂದಿ ಅವತರಣಿಕೆಗಿಂತ ತೆಲುಗು ಅವತರಣಿಕೆಯಲ್ಲಿಯೇ ದೊಡ್ಡ ಸಂಪಾದನೆ ಮಾಡಿದೆ. ಈ ಮೂಲಕ ಮೊದಲ ವಾರದಲ್ಲಿ ಕಾಂತಾರ ತೆಲುಗು ಹಾಗೂ ಹಿಂದಿ ಸೇರಿದಂತೆ ಒಟ್ಟು 30.5 ಕೋಟಿ ಗಳಿಕೆ ಮಾಡಿದೆ.

   ಕಾಂತಾರ ತೆಲುಗು 6 ದಿನಗಳ ಸಂಪೂರ್ಣ ಕಲೆಕ್ಷನ್ ಪಟ್ಟಿ

  ಕಾಂತಾರ ತೆಲುಗು 6 ದಿನಗಳ ಸಂಪೂರ್ಣ ಕಲೆಕ್ಷನ್ ಪಟ್ಟಿ

  ಮೊದಲ ದಿನ - 3.5 ಕೋಟಿ

  ಎರಡನೇ ದಿನ - 5.90 ಕೋಟಿ

  ಮೂರನೇ ದಿನ - 3.65 ಕೋಟಿ

  ನಾಲ್ಕನೇ ದಿನ - 2.50 ಕೋಟಿ

  ಐದನೇ ದಿನ - 2.25 ಕೋಟಿ

  ಆರನೇ ದಿನ - 1.85 ಕೋಟಿ

  6 ದಿನಗಳ ಒಟ್ಟು ತೆಲುಗು ಕಲೆಕ್ಷನ್: 20. 5 ಕೋಟಿ

   ಕಾಂತಾರ ಹಿಂದಿ ಕಲೆಕ್ಷನ್ ಪಟ್ಟಿ

  ಕಾಂತಾರ ಹಿಂದಿ ಕಲೆಕ್ಷನ್ ಪಟ್ಟಿ

  ಮೊದಲ ದಿನ - 1.27 ಕೋಟಿ

  ಎರಡನೇ ದಿನ - 2.75 ಕೋಟಿ

  ಮೂರನೇ ದಿನ - 3.50 ಕೋಟಿ

  ನಾಲ್ಕನೇ ದಿನ - 1.75 ಕೋಟಿ

  ಐದನೇ ದಿನ - 1.88 ಕೋಟಿ

  ಆರನೇ ದಿನ - 1.95 ಕೋಟಿ

  ಏಳನೇ ದಿನ - 1.90 ಕೋಟಿ

  ಕಾಂತಾರ ಹಿಂದಿ ಏಳು ದಿನದ ಒಟ್ಟು ಕಲೆಕ್ಷನ್: 15 ಕೋಟಿ

  English summary
  Kantara 1st week box office collection report: Kantara Telugu version collected more than Hindi version . Read on
  Friday, October 21, 2022, 14:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X