Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕಾಂತಾರ'ದ ದೈವ ಅವಮಾನಿಸಿದ ಯುವಕ ರಕ್ತಕಾರಿ ಸಾವು ಎನ್ನುವ ವಿಡಿಯೋ ವೈರಲ್: ನಟ ಕಿಶೋರ್ ಹೇಳಿದ್ದಿಷ್ಟು!
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಮುರಳಿಧರ್ ಪಾತ್ರದಲ್ಲಿ ನಟ ಕಿಶೋರ್ ಅಬ್ಬರಿಸಿದ್ದರು. 'ನಂಬಿಕೆ ಇರಲಿ, ಮೂಢ ನಂಬಿಕೆ ಬೇಡ. ಅದರ ಹೆಸರಿನಲ್ಲಿ ದ್ವೇಷವೂ ಬೇಡ' ಎಂದು ಕಿಶೋರ್ ಹೇಳಿದ್ದಾರೆ.
'ಕಾಂತಾರ' ಚಿತ್ರದಲ್ಲಿ ಕಾಡುಬೆಟ್ಟು ಶಿವ ಮತ್ತು ಫಾರೆಸ್ಟ್ ಆಫೀಸರ್ ಮುರಳಿ ನಡುವಿನ ಪೈಪೋಟಿ ಸಖತ್ ಕಿಕ್ ಕೊಟ್ಟಿತ್ತು. ತಮ್ಮ ಅದ್ಭುತ ಅಭಿನಯದಿಂದ ಕಿಶೋರ್ ಮೋಡಿ ಮಾಡುತ್ತಾ ಬರ್ತಿದ್ದಾರೆ. ಅಕ್ಕ ಪಕ್ಕದ ಇಂಡಸ್ಟ್ರಿ ಫಿಲ್ಮ್ ಮೇಕರ್ಸ್ ಕೂಡ ಕಿಶೋರ್‌ಗಾಗಿ ಪಾತ್ರಗಳನ್ನು ಬರೆಯುತ್ತಾರೆ. ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ಕಿಶೋರ್ ಮಾದರಿ ರೈತ ಕೂಡ ಆಗಿದ್ದಾರೆ. ಇನ್ನು ತಮ್ಮ ವಿಭಿನ್ನ ಅಭಿಪ್ರಾಯ, ಸಾಮಾಜಿಕ ಚಿಂತನೆಗಳಿಂದ ಗುರ್ತಿಸಿಕೊಂಡಿದ್ದಾರೆ. ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆಯೂ ಪ್ರತಿಕ್ರಿಯಿಸುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರ ಬಗ್ಗೆ ಕಿಶೋರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಬರೆದುಕೊಂಡಿದ್ದಾರೆ.
ನಟ
ಕಿಶೋರ್
ಟ್ವಿಟ್ಟರ್
ಖಾತೆ
ಬ್ಯಾನ್,
ಧ್ವನಿ
ಹತ್ತಿಕ್ಕುವ
ಯತ್ನವೇ?
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಕ್ ವಿಡಿಯೋಗಳು ಹರಿದಾಡುತ್ತಿರುತ್ತವೆ. ಯಾವುದು ನಿಜ? ಯಾವುದು ಸುಳ್ಳು ಎನ್ನುವುದು ಕೂಡ ಕೆಲವೊಮ್ಮೆ ಗೊತ್ತಾಗುವುದಿಲ್ಲ. ಇಂತದ್ದೇ ವಿಡಿಯೋವೊಂದರ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.

ಕಿಶೋರ್ ಹೇಳಿದ್ದೇನು?
'ಕಾಂತಾರ' ಸಿನಿಮಾಗೆ ಸಂಬಂಧಿಸಿದಂತೆ ಸಾಕಷ್ಟು ವಿಡಿಯೋಗಳು, ಸುದ್ದಿ ಹರಿದಾಡುತ್ತಲೇ ಇದೆ. 'ಕಾಂತಾರ' ಚಿತ್ರದ ಕೊನೆ 15 ನಿಮಿಷ ಅದ್ಭೂತ ಅನುಭವ ನೀಡಿತ್ತು. ಸಿನಿಮಾ ವೀಕ್ಷಿಸುವ ವೇಳೆ ಥಿಯೇಟರ್‌ನಲ್ಲಿ ಯುವಕನೊಬ್ಬ ಮೈ ಮೇಲೆ ದೈವ ಬಂದಂತೆ ವರ್ತಿಸಿದ್ದ ಘಟನೆ ಕೂಡ ವರದಿ ಆಗಿತ್ತು. ಇದೇ ರೀತಿ ವಾಟ್ಸಾಪ್‌ನಲ್ಲಿ ಹರಿದು ಬಂದ ವೈರಲ್ ವಿಡಿಯೋ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯಿಸಿದ್ದಾರೆ. "ಕಾಂತಾರ'ದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ ಹರಿದು ಬಂತು. ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ" ಎಂದಿದ್ದಾರೆ.

ಕಥೆಗಾರನಿಗೆ ದೈವ, ದೆವ್ವ ಒಂದು ಸಾಧನ
"ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ."

ನಂಬಿಕೆ ಇರಲಿ ಮೂಢನಂಬಿಕೆ ಬೇಡ
"ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ." ಎಂದು ಕಿಶೋರ್ ಬರೆದುಕೊಂಡಿದ್ದಾರೆ.

ಕಿಶೋರ್ ಟ್ವಿಟ್ಟರ್ ಖಾತೆ ಬ್ಯಾನ್
ಕೆಲವೇ ಗಂಟೆಗಳ ಹಿಂದೆ ನಟ ಕಿಶೋರ್ ಅವರ ಟ್ವಿಟ್ಟರ್ ಖಾತೆ ಡಿಲೀಟ್ ಆಗಿತ್ತು. ಅವರ ಖಾತೆಯನ್ನು ಸರ್ಚ್ ಮಾಡಿದರೆ ಅಕೌಂಟ್ ಸಸ್ಪೆಂಡೆಡ್ ಎಂದು ತೋರಿಸುತ್ತಿದೆ. ಕಿಶೋರ್ ಟ್ವಿಟ್ಟರ್ ನಿಯಮ ಉಲ್ಲಂಘಿಸದಕ್ಕೆ ಖಾತೆ ರದ್ದು ಮಾಡಿರುವದಾಗಿ ಟ್ವಿಟ್ಟರ್ ಹೇಳುತ್ತಿದೆ. ಸದ್ಯ ಟ್ವಿಟ್ಟರ್ ಬಿಟ್ಟು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಹೆಚ್ಚು ಹೆಚ್ಚು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಬಾಲಿವುಡ್ ನಟಿ ಕಂಗನಾ ಕೂಡ ತಮ್ಮ ಟ್ಟಿಟ್ಟರ್ ಖಾತೆ ಡಿಲೀಟ್ ಆದ ಮೇಲೆ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಆಕ್ಟೀವ್ ಆಗಿದ್ದರು.