For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾದಲ್ಲಿ ಕಾಂತಾರ ಅಬ್ಬರ: ರಂಗಿತರಂಗ ಲೈಫ್‌ಟೈಮ್ ಕಲೆಕ್ಷನ್ ಉಡೀಸ್; ಟಾಪ್ 10 ಪಟ್ಟಿ ಹೀಗಿದೆ

  |

  ಕಾಂತಾರ.. ಕಾಂತಾರ.. ಕಾಂತಾರ.. ಎಲ್ಲೆಲ್ಲೂ ಈಗ ಈ ಚಿತ್ರದ್ದೇ ಅಬ್ಬರ. ದೈವ ನರ್ತಕ ಶಿವನ ಕೂಗು ಸದ್ಯ ರಾಜ್ಯ, ದೇಶದ ಗಡಿ ದಾಟಿದೆ. ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡ ಕಾಂತಾರ ಚಿತ್ರ ಶುರುವಿಂದಲೂ ಅಬ್ಬರಿಸುತ್ತಲೇ ಇದೆ. ಬುಕ್‌ ಮೈ ಶೋ ಅಪ್ಲಿಕೇಶನ್‌ನಲ್ಲಿ 10 ಅಂಕಗಳಿಗೆ 9.9 ಅಂಕಗಳನ್ನು ಇಂದಿಗೂ ಸಹ ಹೊಂದಿರುವ ಕಾಂತಾರ ಚಿತ್ರ ಬುಕ್ ಮೈ ಶೋ ಇತಿಹಾಸದಲ್ಲೇ ಯಾವ ಚಿತ್ರವೂ ಮಾಡಿರದಂತಹ ದಾಖಲೆ ಬರೆದಿದೆ.

  ಹೀಗೆ ಕನ್ನಡದಲ್ಲಿ ಮಾತ್ರ ತೆರೆಕಂಡು ಅಬ್ಬರಿಸಿದ ಕಾಂತಾರ ಚಿತ್ರವನ್ನು ವೀಕ್ಷಿಸಿದ ಹೊರ ರಾಜ್ಯಗಳ ಸಿನಿ ರಸಿಕರು ಕಾಂತಾರ ಚಿತ್ರವನ್ನು ತಮ್ಮ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಿ ಇಂಥ ಒಳ್ಳೆಯ ಚಿತ್ರಗಳು ಎಲ್ಲೆಡೆ ತಲುಪಬೇಕು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಹೀಗೆ ಹೊರ ರಾಜ್ಯಗಳ ಸಿನಿ ಪ್ರೇಕ್ಷಕರ ಬೃಹತ್ ಪ್ರತಿಕ್ರಿಯೆಗೆ ಸ್ಪಂದಿಸಿದ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿದೆ.

  ಇನ್ನು ಕಾಂತಾರ ಕನ್ನಡ ಚಿತ್ರಕ್ಕೆ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ನೆಲದಲ್ಲಿಯೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಮೆರಿಕಾ ಹಾಗೂ ಇಂಗ್ಲೆಂಡ್‌ ದೇಶಗಳಲ್ಲಿ ಚಿತ್ರ ಯಶಸ್ವಿ ಮೂರನೇ ವಾರಕ್ಕೆ ಪ್ರವೇಶಿಸುವತ್ತ ದಾಪುಗಾಲಿಟ್ಟಿದೆ. ಅದರಲ್ಲಿಯೂ ಅಮೆರಿಕಾದಲ್ಲಿ ಮೊದಲ ವಾರಕ್ಕಿಂತ ಮೂರನೇ ವಾರ ಕಾಂತಾರಕ್ಕೆ ಹೆಚ್ಚು ಪ್ರದರ್ಶನಗಳು ಕೂಡ ಲಭಿಸಲಿವೆ. ಇನ್ನು ಅಕ್ಟೋಬರ್ 10ರ ಸೋಮವಾರಕ್ಕೆ ಕಾಂತಾರ ಅಮೆರಿಕಾದಲ್ಲಿ ರಂಗಿತರಂಗ ಚಿತ್ರದ ಜೀವಮಾನ ಕಲೆಕ್ಷನ್ ಅನ್ನು ಹಿಂದಿಕ್ಕಿ ಅಮೆರಿಕಾ ನೆಲದಲ್ಲಿ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದೆ.

  ರಂಗಿತರಂಗ ಹಿಂದಿಕ್ಕಿದ ಕಾಂತಾರ

  ರಂಗಿತರಂಗ ಹಿಂದಿಕ್ಕಿದ ಕಾಂತಾರ

  2015ರಲ್ಲಿ ಬಾಹುಬಲಿಯಂತಹ ದೈತ್ಯ ಸಿನಿಮಾ ಎದುರಿಗೆ ಬಿಡುಗಡೆಗೊಂಡು ಗೆದ್ದಿದ್ದ ರಂಗಿತರಂಗ ಅಮೆರಿಕಾದಲ್ಲಿ ಒಟ್ಟು 315,098 ಡಾಲರ್ ಕಲೆಕ್ಷನ್ ಮಾಡಿತ್ತು. ಇದು ಅಂದಿಗೆ ಕನ್ನಡ ಚಿತ್ರವೊಂದು ಅಮೆರಿಕಾ ನೆಲದಲ್ಲಿ ಮಾಡಿದ್ದ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಕಾಂತಾರ ಮುರಿದಿದ್ದು, ಸೋಮವಾರದ ಸಮಯಕ್ಕೆ ಕಾಂತಾರ 341,897 ಡಾಲರ್ ಗಳಿಕೆ ಮಾಡಿದೆ.

  ಅಮೆರಿಕಾದಲ್ಲಿ ಅತಿಹೆಚ್ಚು ಗಳಿಸಿದ ಕನ್ನಡ ಚಿತ್ರಗಳ ಟಾಪ್ 10 ಪಟ್ಟಿ

  ಅಮೆರಿಕಾದಲ್ಲಿ ಅತಿಹೆಚ್ಚು ಗಳಿಸಿದ ಕನ್ನಡ ಚಿತ್ರಗಳ ಟಾಪ್ 10 ಪಟ್ಟಿ

  ಕೆಜಿಎಫ್ ಚಾಪ್ಟರ್ 2: 7,418,131 ಡಾಲರ್

  ಕೆಜಿಎಫ್ ಚಾಪ್ಟರ್ 1: 805,637 ಡಾಲರ್

  ಕಾಂತಾರ: 341,897 ಡಾಲರ್

  ರಂಗಿತರಂಗ: 315,098 ಡಾಲರ್

  ಕಿರಿಕ್ ಪಾರ್ಟಿ: 270,568 ಡಾಲರ್

  ವಿಕ್ರಾಂತ್ ರೋಣ: 182,091 777 ಡಾಲರ್

  ಚಾರ್ಲಿ: 171,417 ಡಾಲರ್

  ಗೋಧಿ ಬಣ್ಣ ಸಾಧಾರಣ ಮೈಕಟ್ಟು: 170,863 ಡಾಲರ್

  ಜೇಮ್ಸ್: 126,118 ಡಾಲರ್

  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: 120,697 ಡಾಲರ್

  ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿಯುವ ನಿರೀಕ್ಷೆ

  ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿಯುವ ನಿರೀಕ್ಷೆ

  ಇನ್ನು ಕಾಂತಾರ ಚಿತ್ರ ಅಮೆರಿಕಾದಲ್ಲಿ ಕೆಜಿಎಫ್ ಚಾಪ್ಟರ್ 1 ಚಿತ್ರದ ದಾಖಲೆ ಮುರಿಯುವ ನಿರೀಕ್ಷೆ ಇದೆ. ಕಾಂತಾರ ಕೂಡ ಕೆಜಿಎಫ್ ರೀತಿಯೇ ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿರುವುದರಿಂದ ಕೆಜಿಎಫ್ ಚಾಪ್ಟರ್ 1 ಅಮೆರಿಕಾ ಕಲೆಕ್ಷನ್ ದಾಖಲೆಯನ್ನು ಮುರಿಯಲಿದೆ ಎಂದು ನಿರೀಕ್ಷಿಸಬಹುದಾಗಿದೆ.

  English summary
  Kantara beats Rangitaranga in US box office and climbed to 3rd position; KGF is the next target
  Thursday, October 13, 2022, 13:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X