twitter
    For Quick Alerts
    ALLOW NOTIFICATIONS  
    For Daily Alerts

    ಕಾಂತಾರ ವಿವಾದ: ಭೂತಕೋಲ ಹಿಂದೂಗಳದ್ದಲ್ಲ, ಲಿಂಗಾಯತರೇ ಬೇರೆ ಧರ್ಮ, ದೇಶದ ಮೊದಲ ಧರ್ಮವಿದು ಎಂದ ಚೇತನ್!

    |

    ಭೂತಕೋಲ ಹಿಂದೂಗಳದ್ದಲ್ಲ ಎಂದು 'ಕಾಂತಾರ' ಕೆಣಕ್ಕಿದ್ದ ಚೇತನ್; ಹಿಂದೂ ಧರ್ಮಕ್ಕೂ ಮುನ್ನ ಇದ್ದದ್ದು ಈ ಧರ್ಮವಂತೆ! ಕಾಂತಾರ ವಿವಾದ: ಭೂತಕೋಲ ಹಿಂದೂಗಳದ್ದಲ್ಲ, ಲಿಂಗಾಯತರೇ ಬೇರೆ ಧರ್ಮ, ದೇಶದ ಮೊದಲ ಧರ್ಮವಿದು ಎಂದ ಚೇತನ್!

    ಕಾಂತಾರ ಸದ್ಯ ಇಡೀ ದೇಶದಾದ್ಯಂತ ಅಬ್ಬರಿಸುತ್ತಿರುವ ಚಿತ್ರ. ಮೊದಲಿಗೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿ ಅಬ್ಬರಿಸಿದ್ದ ಕಾಂತಾರ ಈಗ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿದ್ದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಇನ್ನು ಕಾಂತಾರ ಚಿತ್ರಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.

    ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಚಿತ್ರರಂಗಗಳ ಹಲವಾರು ಸ್ಟಾರ್ ನಟ, ನಟಿಯರು ಕಾಂತಾರ ಚಿತ್ರವನ್ನು ಮುಕ್ತ ಮನಸ್ಸಿನಿಂದ ಕೊಂಡಾಡಿದ್ದರು. ಹೀಗೆ ಬೃಹತ್ ಮೆಚ್ಚುಗೆಗೆ ಪಾತ್ರವಾಗಿದ್ದ ಕಾಂತಾರ ವಿರುದ್ಧದ ಹೇಳಿಕೆ ನೀಡುವ ಸಾಹಸಕ್ಕೆ ಯಾರೂ ಸಹ ಕೈಹಾಕಿರಲಿಲ್ಲ. ಆದರೆ ಈಗ ಚಂದನವನದ ನಟ ಚೇತನ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕಾಂತಾರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ರಿಷಬ್ ಶೆಟ್ಟಿ ಅವರು ಭೂತಕೋಲವನ್ನು ಹಿಂದೂ ಸಂಸ್ಕೃತಿಯ ಆಚರಣೆ ಎಂದು ಹೇಳುತ್ತಾರೆ ಆದರೆ ಅದು ಹಿಂದೂ ಧರ್ಮದ ಆಚರಣೆಯೇ ಅಲ್ಲ ಎಂದು ಬರೆದುಕೊಂಡಿದ್ದರು. ಅಷ್ಟೇ ಅಲ್ಲದೇ ಮೂಲನಿವಾಸಿ ಸಂಸ್ಕೃತಿಗಳನ್ನು ತೆರೆ ಮೇಲೆ ತೋರಿಸುವಾಗ ಸತ್ಯ ಸಂಗತಿಗಳೊಂದಿಗೆ ತೋರಿಸಿ ಈ ರೀತಿ ತೋರಿಸಬೇಡಿ ಎಂದು ಚೇತನ್ ಅಹಿಂಸ ಬರೆದುಕೊಂಡಿದ್ದರು. ಹೀಗೆ ಭೂತಕೋಲ ಹಿಂದೂ ಧರ್ಮದ ಆಚರಣೆ ಅಲ್ಲವೇ ಅಲ್ಲ ಎಂಬ ಪೋಸ್ಟ್ ಹಂಚಿಕೊಂಡ ಚೇತನ್ ವಿರುದ್ಧ ನೆಟ್ಟಿಗರು ಕೆಂಡಕಾರಿದ್ದರು. ಹಾಗಾಗಿ ಸ್ವತಃ ಚೇತನ್ ಇಂದು ( ಅಕ್ಟೋಬರ್ 19 ) ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರವನ್ನು ನೀಡಿದರು.

    ಚೇತನ್ ವಾದವಿಷ್ಟೇ

    ಚೇತನ್ ವಾದವಿಷ್ಟೇ

    ಭೂತಕೋಲ ಮೂಲನಿವಾಸಿಗಳ ಆಚರಣೆ, ಅವರು ಇಂಥ ಆಚರಣೆ ಮಾಡುವಾಗ ಹಿಂದೂ ಧರ್ಮವೇ ಹುಟ್ಟಿರಲಿಲ್ಲ, ಹಾಗಿರುವಾಗ ಇದನ್ನು ಹಿಂದೂ ಧರ್ಮದ ಆಚರಣೆ ಎನ್ನಲು ಹೇಗೆ ಸಾಧ್ಯ? ಇದಿಷ್ಟೇ ಚೇತನ್ ಅವರ ವಾದ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಾಗಲೂ ಚೇತನ್ ಪ್ರತಿ ಬಾರಿಯೂ ಇದೇ ಉತ್ತರವನ್ನು ನೀಡಿದರು. ಒಟ್ಟಿನಲ್ಲಿ ಹಿಂದೂ ಧರ್ಮ ಉಗಮವಾಗುವ ಮುನ್ನ ಇದ್ದ ಆಚರಣೆ ಹಿಂದೂ ಧರ್ಮದ್ದು ಎಂದು ಹೇಗೆ ಹೇಳುತ್ತೀರ, ಅದು ಮೂಲವಾಸಿಗಳ ಧರ್ಮದ್ದು ಎಂಬುದು ಚೇತನ್ ಅಹಿಂಸ ಅವರ ಮಾತುಗಳು. ಈ ಮೂಲಕ ಚೇತನ್ ತಮ್ಮ ಫೇಸ್‌ಬುಕ್ ಪೋಸ್ಟ್ ಅನ್ನು ಇಲ್ಲೂ ಸಹ ಸಮರ್ಥಿಸಿಕೊಂಡರು.

    ಹಿಂದೂ ಅಂದರೆ ಯಾರು?

    ಹಿಂದೂ ಅಂದರೆ ಯಾರು?

    ಇನ್ನು ಪತ್ರಿಕಾಗೋಷ್ಠಿಯಲ್ಲಿ ಹಿಂದೂಗಳೆಂದರೆ ಬ್ರಾಹ್ಮಣರು ಮಾತ್ರನಾ ಎಂಬ ಪ್ರಶ್ನೆಗೆ ಉತ್ತರಿಸಿದ ಚೇತನ್ ಅಹಿಂಸ ಬ್ರಾಹ್ಮಣರು ಮಾತ್ರವಲ್ಲ, ಅದೊಂದು ಜಾತಿ. ಬ್ರಾಹ್ಮಣರ ರೀತಿಯೇ ಲಿಂಗಾಯತರು, ಒಕ್ಕಲಿಗರು, ಬಂಟರು ಹೀಗೆ ಅನೇಕ ಸಮುದಾಯಗಳಿವೆ ಎಂದರು. ಬ್ರಾಹ್ಮಣ್ಯ ಎನ್ನುವುದು ಹುಟ್ಟಿದ ನಂತರ ಕೆಲವರು ಶ್ರೇಷ್ಟ ಕೆಲವರು ಮನಸ್ಥಿತಿ ಉಂಟಾಯಿತು, ಚತುರ್ವಣದ ವ್ಯವಸ್ಥೆಯಾದ ಬ್ರಾಹ್ಮಣ್ಯ ಹಿಂದೂ ಧರ್ಮದ ವೈದಿಕತೆಯ ಪರಂಪರೆ ಎಂದು ಚೇತನ್ ಅಹಿಂಸ ತಿಳಿಸಿದರು ಹಾಗೂ ಮೂಲ ನಿವಾಸಿಗಳು, ಬುಡಗಟ್ಟು, ಅಲೆಮಾರಿ ಹಾಗೂ ಅಲೆಮಾರಿಗಳು ಇದಕ್ಕೆ ಸಂಬಂಧಪಡುತ್ತಿಲ್ಲ, ಹೀಗಾಗಿ ನಾವು ಇದನ್ನು ವಿರೋಧಿಸುತ್ತೇವೆ ಎಂದರು.

    ಮೂಲ ನಿವಾಸಿಗಳನ್ನು ಕಾಲ ಕ್ರಮೇಣ ಹಿಂದೂ ಧರ್ಮಕ್ಕೆ ಸೇರಿಸಿಕೊಂಡರು

    ಮೂಲ ನಿವಾಸಿಗಳನ್ನು ಕಾಲ ಕ್ರಮೇಣ ಹಿಂದೂ ಧರ್ಮಕ್ಕೆ ಸೇರಿಸಿಕೊಂಡರು

    ಇನ್ನು ಹಿಂದೂ ಧರ್ಮಕ್ಕೂ ಮುನ್ನ ಮೂಲವಾಸಿಗಳಿದ್ದರು ಎನ್ನುವ ಚೇತನ್ ಅಹಿಂಸಾ ಮೂಲನಿವಾಸಿಗಳ ನಂತರ ಹಿಂದೂ, ಇಸ್ಲಾಂ ಹಾಗೂ ಇನ್ನಿತರ ಧರ್ಮಗಳ ಜನನವಾಯಿತು, ಹಿಂದೂ ಧರ್ಮ ತನ್ನ ಪ್ರಾಬಲ್ಯದಿಂದ ಬೇರೆ ಬೇರೆ ಮೂಲವಾಸಿಗಳು, ಬುಡಕಟ್ಟು ಜನರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಂಡಿದೆ. ಹೀಗಾದಾಗ ಪ್ರಬಲರಾದವರ ಸಂಸ್ಕೃತಿಗೆ ಹೆಚ್ಚು ಬೆಲೆ ಇದೆ ಹಾಗೂ ಪ್ರಬಲತೆ ಇಲ್ಲದ ಊರಾಚೆಗಿನ ಜನರ ಸಂಸ್ಕೃತಿಗೆ ಕಡಿಮೆ ಬೆಲೆ ಇದೆ ಎಂದು ಚೇತನ್ ಹೇಳಿದರು.

    ಲಿಂಗಾಯತರದ್ದೇ ಪ್ರತ್ಯೇಕ ಧರ್ಮ

    ಲಿಂಗಾಯತರದ್ದೇ ಪ್ರತ್ಯೇಕ ಧರ್ಮ

    ಇನ್ನು ಲಿಂಗಾಯತರು ಮುಂಚೆ ಹಿಂದೂ ಧರ್ಮಕ್ಕೆ ಸೇರಿರಲಿಲ್ಲ ಎಂದಿರುವ ಚೇತನ್ ಅಹಿಂಸಾ ನಂತರದ ದಿನಗಳಲ್ಲಿ ಕೆಲ ರಾಜಕೀಯ ಕಾರಣಗಳಿಂದ ಲಿಂಗಾಯತರು ಹಿಂದೂ ಧರ್ಮಕ್ಕೆ ಸೇರ್ಪಡೆಗೊಂಡರು, ಆದರೆ ಈಗ ಅವರೂ ಸಹ ನಾವು ಬಸವವಾದಿಗಳು ನಮ್ಮದು ಬಸವ ಧರ್ಮ ನಮಗೆ ಪ್ರತ್ಯೇಕ ಧರ್ಮ ಬೇಕೆಂದು ಕೇಳುತ್ತಿಲ್ಲವೇ ಎಂದು ಮಾತನಾಡಿದರು.

    ಭಾರತದ ಪ್ರಥಮ ಧರ್ಮ ಯಾವುದು?

    ಭಾರತದ ಪ್ರಥಮ ಧರ್ಮ ಯಾವುದು?

    ಇನ್ನು ಇದೇ ವೇಳೆ ಪತ್ರಕರ್ತರಿಂದ ಇಷ್ಟೆಲ್ಲಾ ಹೇಳ್ತಾ ಇದ್ದಿರಲ್ಲ ಹಾಗಿದ್ದಾಗ ಭಾರತದ ಮೂಲ ಧರ್ಮ ಯಾವುದು ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ಚೇತನ್ ಅಹಿಂಸಾ ಭಾರತದ ಮೂಲ ಧರ್ಮ ಮೂಲ ನಿವಾಸಿಗಳ ಸಂಸ್ಕೃತಿ ಅದನ್ನು ಕಡ್ಟಾಯಗೊಳಿಸಲು ಹೋರಾಟ ನಡೆಯುತ್ತಿದೆ, ನಾನೂ ಸಹ ಅದಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದು ಹೇಳಿಕೊಂಡರು.

    English summary
    Kantara controversy: Hindu religion is not India's first religion says Chetan Ahimsa. Read on
    Wednesday, October 19, 2022, 17:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X