For Quick Alerts
  ALLOW NOTIFICATIONS  
  For Daily Alerts

  ಓಟಿಟಿಗೆ ಬಂದರೂ ಚಿತ್ರಮಂದಿರಗಳಲ್ಲಿ ನಿಲ್ಲದ ಕಾಂತಾರ ಹವಾ; 56ನೇ ದಿನವೂ ಇಷ್ಟೊಂದು ಪ್ರದರ್ಶನಗಳು!

  |

  ಕಾಂತಾರ ಸದ್ಯ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ. ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡು ಪ್ರೇಕ್ಷಕರಿಂದ ತೀವ್ರ ಪ್ರಶಂಸೆ ಪಡೆದುಕೊಂಡ ಕಾಂತಾರ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಯಿತು. ಕನ್ನಡದಲ್ಲಿ ಬಿಡುಗಡೆಯಾಗಿ ಮೊದಲನೇ ದಿನ ಒಂದೂವರೆ ಕೋಟಿ ಗಳಿಕೆ ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದ್ದ ಕಾಂತಾರ ಪ್ಯಾನ್ ಇಂಡಿಯಾ ಚಿತ್ರವಾದ ನಂತರ ಗಲ್ಲಾಪೆಟ್ಟಿಗೆ ಲೂಟಿ ಮಾಡಿ 400 ಕೋಟಿ ಕ್ಲಬ್ ಸೇರಿದೆ.

  ಹೀಗೆ 16 ಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ಇಷ್ಟು ಬೃಹತ್ ಮೊತ್ತ ಕಲೆಹಾಕಿ ಹಲವಾರು ದಾಖಲೆಗಳನ್ನು ಸೃಷ್ಟಿಸಿತು. ಕರ್ನಾಟಕ ರಾಜ್ಯದಲ್ಲೇ 1 ಕೋಟಿಗೂ ಅಧಿಕ ಟಿಕೆಟ್ ಮಾರಾಟವಾದ ದಾಖಲೆ ಬರೆದ ಕಾಂತಾರ ಚಿತ್ರ ಸದ್ಯ ಓಟಿಟಿಗೂ ಲಗ್ಗೆ ಇಟ್ಟಿದೆ. ನವೆಂಬರ್ 24ರ ಗುರುವಾರದಂದು ಅಮೆಜಾನ್‌ ಪ್ರೈಮ್ ವಿಡಿಯೊದಲ್ಲಿ ಕಾಂತಾರ ಬಿಡುಗಡೆಗೊಂಡು ಸಾಕಷ್ಟು ವಿಚಾರಗಳಿಗೆ ಸದ್ದು ಮಾಡುತ್ತಿದೆ.

  ಕರ್ನಾಟಕದ ದಂತಕಥೆ 'ಕಾಂತಾರ' ತುಳು ಭಾಷೆಗೂ ಡಬ್: ವಿದೇಶದಲ್ಲೇ ಮೊದಲು ರಿಲೀಸ್! ಕರ್ನಾಟಕದ ದಂತಕಥೆ 'ಕಾಂತಾರ' ತುಳು ಭಾಷೆಗೂ ಡಬ್: ವಿದೇಶದಲ್ಲೇ ಮೊದಲು ರಿಲೀಸ್!

  ಇನ್ನು ಕಾಂತಾರ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಗೊಂಡಿದ್ದರೂ ಸಹ ಚಿತ್ರಮಂದಿರಗಳಲ್ಲಿ ಕಾಂತಾರ ಹವಾ ಕಡಿಮೆ ಮಾತ್ರ ಆಗಿಲ್ಲ. ಓಟಿಟಿಯಲ್ಲಿ ಚಿತ್ರ ಪ್ರದರ್ಶನವಾಗುತ್ತಿದ್ದರೂ ಸಹ ಜನರು ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ರಾಜ್ಯದ ಪ್ರಮುಖ ನಗರಗಳಲ್ಲಿ ಕಾಂತಾರ ಚಿತ್ರದ ಟಿಕೆಟ್ ಇಂದಿಗೂ ಹೆಚ್ಚಾಗಿಯೇ ಸೇಲ್ ಆಗ್ತಿದೆ. ಹೀಗಾಗಿಯೇ ಹಲವೆಡೆ ಇಂದಿಗೂ ಸಹ ಕಾಂತಾರ ಒಳ್ಳೆಯ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಕಾಂತಾರ ಇಂದು ( ನವೆಂಬರ್ 25 ) ಪಡೆದುಕೊಂಡಿರುವ ಪ್ರದರ್ಶನಗಳ ಸಂಖ್ಯೆ ಸಿನಿ ರಸಿಕರಲ್ಲಿ ಅಚ್ಚರಿ ಮೂಡಿಸಿದೆ.

  56ನೇ ದಿನವೂ ಹೆಚ್ಚು ಪ್ರದರ್ಶನಗಳು

  56ನೇ ದಿನವೂ ಹೆಚ್ಚು ಪ್ರದರ್ಶನಗಳು

  ಇಂದು ( ನವೆಂಬರ್ 25 ) ಶುಕ್ರವಾರ ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳು ಬಿಡುಗಡೆಗೊಂಡಿದ್ದರೂ ಸಹ ಕಾಂತಾರ ಒಳ್ಳೆ ಸಂಖ್ಯೆಯ ಪ್ರದರ್ಶನಗಳನ್ನು ಪಡೆದಿದೆ. ಎಲ್ಲಾ ಭಾಷೆಯ ಚಿತ್ರಗಳ ಪ್ರೇಕ್ಷಕರನ್ನು ಹೊಂದಿರುವ ಬೆಂಗಳೂರಿನಲ್ಲಿ ಕಾಂತಾರ ಇಂದು ತನ್ನ 56ನೇ ದಿನ ಬರೋಬ್ಬರಿ 72 ಪ್ರದರ್ಶನಗಳನ್ನು ಪಡೆದುಕೊಂಡಿದೆ.

  ನವೆಂಬರ್ 25ರಂದು ಬೆಂಗಳೂರಿನಲ್ಲಿ ವಿವಿಧ ಚಿತ್ರಗಳು ಪಡೆದ ಪ್ರದರ್ಶನಗಳ ಸಂಖ್ಯೆ

  ನವೆಂಬರ್ 25ರಂದು ಬೆಂಗಳೂರಿನಲ್ಲಿ ವಿವಿಧ ಚಿತ್ರಗಳು ಪಡೆದ ಪ್ರದರ್ಶನಗಳ ಸಂಖ್ಯೆ

  ತ್ರಿಬಲ್ ರೈಡಿಂಗ್: 238 ಪ್ರದರ್ಶನಗಳು

  ಭೇದಿಯಾ: 206 ಪ್ರದರ್ಶನಗಳು

  ದೃಶ್ಯಂ 2 : 178 ಪ್ರದರ್ಶನಗಳು

  ರೇಮೊ : 103 ಪ್ರದರ್ಶನಗಳು

  ವಾಕಂಡಾ ಫಾರೆವರ್ : 90 ಪ್ರದರ್ಶನಗಳು

  ಕಾಂತಾರ : 72 ಪ್ರದರ್ಶನಗಳು

  ಓಟಿಟಿಗೆ ಬಂದರೂ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಹಾಜರ್

  ಓಟಿಟಿಗೆ ಬಂದರೂ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಹಾಜರ್

  ಇನ್ನು ಅಮೆಜಾನ್‌ ಪ್ರೈಮ್ ವಿಡಿಯೋದಲ್ಲಿ ಕಾಂತಾರ ಚಿತ್ರ ಲಭ್ಯವಿದ್ದರೂ ಸಹ ಜನರು ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಸಹ ಇದೆ. ಓಟಿಟಿಯಲ್ಲಿ ಬಿಡುಗಡೆಗೊಂಡ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡಿನ ರಾಗವನ್ನು ಬದಲಿಸಲಾಗಿದ್ದು, ಚಿತ್ರಮಂದಿರದಲ್ಲಿ ಸಿಕ್ಕ ಕಿಕ್ ಇಲ್ಲಿ ಸಿಗುತ್ತಿಲ್ಲ ಎಂಬ ಅಭಿಪ್ರಾಯ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗಿದೆ. ಹೀಗಾಗಿ ಚಿತ್ರ ನೋಡಿರದ ಜನರು ಓಟಿಟಿ ಬದಲು ಚಿತ್ರಮಂದಿರಗಳಲ್ಲಿಯೇ ಕಾಂತಾರ ಚಿತ್ರವನ್ನು ವೀಕ್ಷಿಸಲು ಮುಂದಾಗಿದ್ದಾರೆ.

  English summary
  Kantara getting big shows in theatres even after releasing on OTT . Take a look
  Friday, November 25, 2022, 11:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X