twitter
    For Quick Alerts
    ALLOW NOTIFICATIONS  
    For Daily Alerts

    ರಿಲೀಸ್ ಡೇ ಬೆಂಗಳೂರಲ್ಲಿ 203 ಶೋ ಪಡೆದ ಹೆಡ್ ಬುಷ್, ತಮಿಳು ಪ್ರಿನ್ಸ್‌ಗೆ 185; ಕಡಿಮೆ ಆಯ್ತಾ 'ಕಾಂತಾರ' ಹವಾ?

    |

    ಇಂದು ( ಅಕ್ಟೋಬರ್ 21 ) ತಿಂಗಳಿನ ಮೂರನೇ ಶುಕ್ರವಾರ. ಕಳೆದೆರಡು ಶುಕ್ರವಾರಗಳು ಬಿಡುಗಡೆಗೊಂಡ ಯಾವುದೇ ಚಿತ್ರಗಳು ಕೂಡ ಸೆಪ್ಟೆಂಬರ್ ತಿಂಗಳ ಅಂತಿಮ ದಿನದಂದು ಬಿಡುಗಡೆಗೊಂಡ ಕಾಂತಾರ ಚಿತ್ರವನ್ನು ಮಣಿಸುವಲ್ಲಿ ಯಶಸ್ವಿಯಾಗಿಲ್ಲ.

    ತೆಲುಗಿನಲ್ಲಿ ಚಿರಂಜೀವಿ ಹಾಗೂ ನಾಗಾರ್ಜುನ ರೀತಿಯ ದೊಡ್ಡ ದೊಡ್ಡ ನಟರ ಚಿತ್ರಗಳನ್ನೂ ಸಹ ಮಣಿಸಿದ ಕಾಂತಾರ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಚಿತ್ರಕ್ಕೂ ಸಹ ಮಣ್ಣು ಮುಕ್ಕಿಸಿತ್ತು. ಹೀಗೆ ದೇಶಾದ್ಯಂತ ಅಬ್ಬರಿಸಿರುವ ಕಾಂತಾರ ಚಿತ್ರ ಇಂದು ನಾಲ್ಕನೇ ವಾರಕ್ಕೆ ಲಗ್ಗೆ ಇಟ್ಟಿದ್ದು, ಈ ಶುಕ್ರವಾರ ವಿವಿಧ ಚಿತ್ರರಂಗಗಳ ಒಟ್ಟು ಹತ್ತಾರು ಸಿನಿಮಾಗಳು ತೆರೆಕಂಡಿವೆ.

    Head Bush Twitter Review : ಧನಂಜಯ್, ಯೋಗಿ 'ಹೆಡ್ ಬುಷ್' ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು?Head Bush Twitter Review : ಧನಂಜಯ್, ಯೋಗಿ 'ಹೆಡ್ ಬುಷ್' ಸಿನಿಮಾ ನೋಡಿ ನೆಟ್ಟಿಗರು ಹೇಳಿದ್ದೇನು?

    ಈ ಪೈಕಿ ತಮಿಳುನಾಡಿನಲ್ಲಿ ಕಾರ್ತಿ ಮತ್ತು ಶಿವಕಾರ್ತಿಕೇಯನ್ ಅಭಿನಯದ ಚಿತ್ರಗಳು ಬಿಡುಗಡೆಗೊಂಡಿರುವ ಕಾರಣ ಕಾಂತಾರ ಚಿತ್ರದ ಪ್ರದರ್ಶನಗಳ ಸಂಖ್ಯೆ ತುಸು ಕುಸಿದಿದೆ ಹಾಗೂ ತೆಲುಗಿನ ಕೆಲ ಚಿತ್ರಗಳು ಬಿಡುಗಡೆಯಾದರೂ ಸಹ ಕಾಂತಾರ ಚಿತ್ರದ ಪ್ರದರ್ಶನಗಳ ಸಂಖ್ಯೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಇನ್ನು ತನ್ನ ಸ್ವಂತ ನೆಲವಾದ ಕರ್ನಾಟಕದಲ್ಲಿ ಕಾಂತಾರ ನಾಲ್ಕನೇ ವಾರವೂ ಗಟ್ಟಿಯಾಗಿ ನೆಲೆಯೂರಿದೆ. ಧನಂಜಯ್ ಅಭಿನಯದ ಹೆಡ್ ಬುಷ್ ಜತೆಗೆ ಹಲವಾರು ಚಿತ್ರಗಳು ಬೆಂಗಳೂರು ನಗರದಲ್ಲಿ ಬಿಡುಗಡೆಗೊಂಡಿದ್ದರೂ ಸಹ ಕಾಂತಾರ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ತನ್ನ 22ನೇ ದಿನವೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವುದರ ಮೂಲಕ ನೂತನವಾಗಿ ಬಿಡುಗಡೆಗೊಂಡ ಚಿತ್ರಗಳಿಗೆ ಟಕ್ಕರ್ ನೀಡಿದೆ.

     ಬೆಂಗಳೂರಿನಲ್ಲಿ ಇಂದಿನ ( ಅಕ್ಟೋಬರ್ 21 ) ಪ್ರದರ್ಶನಗಳ ಸಂಖ್ಯೆ

    ಬೆಂಗಳೂರಿನಲ್ಲಿ ಇಂದಿನ ( ಅಕ್ಟೋಬರ್ 21 ) ಪ್ರದರ್ಶನಗಳ ಸಂಖ್ಯೆ

    ಅಕ್ಟೋಬರ್ 21ರಂದು ಬೆಂಗಳೂರಿನಲ್ಲಿ ವಿವಿಧ ಚಿತ್ರಗಳು ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆ ( ಟಾಪ್ 5 ಪಟ್ಟಿ )

    ಕಾಂತಾರ - 452 ಪ್ರದರ್ಶನಗಳು

    ಹೆಡ್ ಬುಷ್ - 203 ಪ್ರದರ್ಶನಗಳು ( ಹೊಸ ಬಿಡುಗಡೆ )

    ಪ್ರಿನ್ಸ್ - 185 ಪ್ರದರ್ಶನಗಳು ( ಹೊಸ ಬಿಡುಗಡೆ )

    ಬ್ಲಾಕ್ ಆಡಮ್ - 183 ಪ್ರದರ್ಶನಗಳು

    ಸರ್ದಾರ್ - 177 ಪ್ರದರ್ಶನಗಳು ( ಹೊಸ ಬಿಡುಗಡೆ )

     ಬೆಂಗಳೂರಿನಲ್ಲಿ ಕಾಂತಾರ ಬಿಗಿ ಹಿಡಿತ

    ಬೆಂಗಳೂರಿನಲ್ಲಿ ಕಾಂತಾರ ಬಿಗಿ ಹಿಡಿತ

    ಬೆಂಗಳೂರಿನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಹೀಗೆ ಎಲ್ಲ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಪ್ರೇಕ್ಷಕರಿದ್ದಾರೆ. ಹೀಗಾಗಿ ಯಾವುದೇ ಭಾಷೆಯ ಚಿತ್ರಗಳು ಬಿಡುಗಡೆಗೊಂಡರೂ ಸಹ ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಪ್ರದರ್ಶನಗಳನ್ನು ಪಡೆದುಕೊಳ್ಳಲಿವೆ. ತಮಿಳಿನ ಶಿವ ಕಾರ್ತಿಕೇಯನ್ ಹಾಗೂ ಕಾರ್ತಿ ರೀತಿಯ ಸ್ಟಾರ್ ನಟರ ಚಿತ್ರಗಳು ಈ ಹಿಂದೆ ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶೋಗಳನ್ನು ಪಡೆದುಕೊಳ್ಳುತ್ತಿದ್ದವು. ಆದರೆ ಈ ಬಾರಿ ಕಾಂತಾರ ಅಬ್ಬರಿಸುತ್ತಿರುವ ಕಾರಣ ಈ ಇಬ್ಬರ ಚಿತ್ರಗಳಿಗೂ ಬೃಹತ್ ಸಂಖ್ಯೆಯ ಚಿತ್ರಮಂದಿರಗಳು ದೊರಕಿಲ್ಲ. ಅಷ್ಟೇ ಅಲ್ಲದೆ ಎರಡೂ ಚಿತ್ರಗಳಿಗೂ ದೊರಕಿರುವ ಅರ್ಲಿ ಮಾರ್ನಿಂಗ್ ಶೋಗಳ ಸಂಖ್ಯೆಯೂ ಕೂಡ ಬೆರಳೆಣಿಕೆಯಷ್ಟು ಮಾತ್ರ.

     ಬುಕಿಂಗ್‍ನಲ್ಲೂ ಕಾಂತಾರ ಲೆಜೆಂಡ್!

    ಬುಕಿಂಗ್‍ನಲ್ಲೂ ಕಾಂತಾರ ಲೆಜೆಂಡ್!

    ಇನ್ನು ಹೊಸದಾಗಿ ಬಿಡುಗಡೆಗೊಂಡಿರುವ ಚಿತ್ರಗಳಿಗಿಂತ ಕಾಂತಾರ ತನ್ನ 22ನೇ ದಿನವೂ ಬೆಂಗಳೂರಿನಲ್ಲಿ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವುದು ಮಾತ್ರವಲ್ಲದೇ ಆ ಚಿತ್ರಗಳಿಗಿಂತ ಹೆಚ್ಚಾಗಿ ಬುಕಿಂಗ್ ಪಡೆದುಕೊಂಡಿದೆ. ಹೊಸದಾಗಿ ಬಿಡುಗಡೆಯಾಗುತ್ತಿರುವ ಚಿತ್ರಗಳಿಗಿಂತ ಕಾಂತಾರ ಚಿತ್ರದ ಪ್ರದರ್ಶನಗಳು ಹೆಚ್ಚಾಗಿ ಸೋಲ್ಡ್ ಔಟ್ ಆಗಿವೆ. ಈ ಮೂಲಕ ಕಾಂತಾರ ಹವಾ ಯಾರೇ ಬಂದರೂ ಮುಂದುವರಿಯುತ್ತಿದೆ.

    English summary
    Kantara got more shows than newly released movie Head Bush on October 21st at Bangalore . Read on
    Friday, October 21, 2022, 12:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X