For Quick Alerts
  ALLOW NOTIFICATIONS  
  For Daily Alerts

  ದೀಪಾವಳಿ ಪ್ರಯುಕ್ತ ಚಿತ್ರಮಂದಿರಕ್ಕೆ ಬಂದು 'ಕಾಂತಾರ'ದಿಂದ ಪೆಟ್ಟು ತಿಂದ 9 ಚಿತ್ರಗಳಿವು!

  |

  ಕಾಂತಾರ.. ಕಾಂತಾರ.. ಕಾಂತಾರ.. ಎಲ್ಲಿ ನೋಡಿದರೂ ಈ ಚಿತ್ರದ್ದೇ ಅಬ್ಬರ. ಕರ್ನಾಟಕದ ಕರಾವಳಿ ಮಣ್ಣಿನ ಕತೆಗೆ ಕೇವಲ ಕನ್ನಡ ಸಿನಿ ಪ್ರೇಕ್ಷಕರು ಮಾತ್ರವಲ್ಲದೆ ಪರರಾಜ್ಯದ ಹಾಗೂ ಪರದೇಶಗಳ ಸಿನಿ ಪ್ರೇಕ್ಷಕರು ಸಹ ಶಬ್ಬಾಶ್ ಎಂದಿದ್ದಾರೆ. ಅದರಲ್ಲಿಯೂ ರಿಷಬ್ ಶೆಟ್ಟಿ ನಿರ್ದೇಶನದ ಜತೆಗೆ ಮಾಡಿರುವ ಅಮೋಘ ನಟನೆಗೆ ಸಿನಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.

  ಇನ್ನು ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ಪ್ರೇಕ್ಷಕರ ಅಭಿಪ್ರಾಯ ಹಾಗೂ ಒತ್ತಾಯದ ಮೇರೆಗೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಯಿತು. ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂಗೆ ಡಬ್ ಆಗಿ ಬಿಡುಗಡೆಗೊಂಡ ಕಾಂತಾರ ಚಿತ್ರಕ್ಕೆ ಅಲ್ಲಿನ ಪ್ರೇಕ್ಷಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದರು.

  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಗೆಲ್ಲಲು 'ಪುಷ್ಪ' ತಂತ್ರ ಬಳಸಿದ 'ಕೆಜಿಎಫ್ 2' ವಿತರಕ!ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಗೆಲ್ಲಲು 'ಪುಷ್ಪ' ತಂತ್ರ ಬಳಸಿದ 'ಕೆಜಿಎಫ್ 2' ವಿತರಕ!

  ಇನ್ನು ಕರ್ನಾಟಕದಲ್ಲಿಯೇ 150 ಕೋಟಿ ಗಳಿಕೆ ಮಾಡುವ ಸನಿಹದಲ್ಲಿರುವ ಕಾಂತಾರ ತನ್ನ ಸ್ವಂತ ನೆಲದಲ್ಲಿ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗೂ ಸತತವಾಗಿ ಹಿಡಿತ ಸಾಧಿಸುತ್ತಲೇ ಬಂದಿದೆ. ಕಾಂತಾರ ಚಿತ್ರ ಬಿಡುಗಡೆಯಾಗುವುದಕ್ಕೂ ಹಿಂದಿನ ವಾರ, ಕಾಂತಾರದ ಜತೆ ಹಾಗೂ ಕಾಂತಾರ ಬಿಡುಗಡೆಯಾದ ನಂತರದ ವಾರ ಬಿಡುಗಡೆಗೊಂಡ ಚಿತ್ರಗಳೆಲ್ಲಾ ಕರ್ನಾಟಕದಲ್ಲಿ ಮಕಾಡೆ ಮಲಗಿದವು. ಹೀಗೆ ಕಾಂತಾರ ಬಿಡುಗಡೆಯ ಆಸುಪಾಸಿನ ದಿನಗಳಲ್ಲಿ ಚಿತ್ರಮಂದಿರಕ್ಕೆ ಬಂದ ಹತ್ತಕ್ಕೂ ಹೆಚ್ಚು ಚಿತ್ರಗಳು ಸೋತಿದ್ದವು. ಸದ್ಯ ದೀಪಾವಳಿ ಸಮಯಕ್ಕೆ ಕಾಂತಾರ 25 ದಿನಗಳನ್ನು ಪೂರೈಸಿದ್ದು, ದೀಪಾವಳಿ ಪ್ರಯುಕ್ತ ಚಿತ್ರಮಂದಿರಕ್ಕೆ ಬಂದ ಚಿತ್ರಗಳು ಸಹ ಕಾಂತಾರದ ಗರ್ನಲ್ ಸದ್ದಿಗೆ ಸೈಲೆಂಟ್ ಆಗಿ ಬಿಟ್ಟಿವೆ. ಅಂತಹ ಚಿತ್ರಗಳ ಪಟ್ಟಿ ಕೆಳಕಂಡಂತಿದೆ.

   ದೀಪಾವಳಿ ಪ್ರಯುಕ್ತ ಬಿಡುಗಡೆಗೊಂಡು ಕರ್ನಾಟಕದಲ್ಲಿ ಸೈಲೆಂಟ್ ಆದ ಚಿತ್ರಗಳು

  ದೀಪಾವಳಿ ಪ್ರಯುಕ್ತ ಬಿಡುಗಡೆಗೊಂಡು ಕರ್ನಾಟಕದಲ್ಲಿ ಸೈಲೆಂಟ್ ಆದ ಚಿತ್ರಗಳು

  ಚಿತ್ರಮಂದಿರದಲ್ಲಿ ಕಾಂತಾರ ನರ್ತನಕ್ಕೆ ಸಾಲು ಸಾಲು ಪ್ರದರ್ಶನಗಳು ಹೌಸ್ ಫುಲ್ ಆಗುತ್ತಿವೆ. ಈ ನಡುವೆ ಅಷ್ಟೋ ಇಷ್ಟೋ ಪ್ರದರ್ಶನಗಳನ್ನು ಪಡೆದುಕೊಂಡು ದೀಪಾವಳಿ ವಾರದಲ್ಲಿ ಬಿಡುಗಡೆಗೊಂಡ 9 ಚಿತ್ರಗಳು ಕಾಂತಾರ ಎದುರು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿವೆ. ಕನ್ನಡದ ಹೆಡ್ ಬುಷ್ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ನಿರೀಕ್ಷಿಸಿದ ರೀತಿ ಅಬ್ಬರಿಸುವಲ್ಲಿ ತುಸು ಎಡವಿದೆ. ಇನ್ನೆರಡು ವಾರಗಳ ನಂತರ ಹೆಡ್ ಬುಷ್ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದ್ದರೆ ಇದಕ್ಕಿಂತ ಹೆಚ್ಚಿನ ಸಕ್ಸಸ್ ಕಾಣುತ್ತಿತ್ತು ಎನ್ನುವುದರಲ್ಲಿ ಅನುಮಾನವಿಲ್ಲ. ಅತ್ತ ತಮಿಳಿನ ಸರ್ದಾರ್ ಚಿತ್ರ ಉತ್ತಮ ವಿಮರ್ಶೆ ಪಡೆದುಕೊಂಡಿದ್ದರೂ ಸಹ ಕಾಂತಾರ ಮುಂದೆ ಬೆಂಗಳೂರು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿದೆ. ಇನ್ನುಳಿದಂತೆ ರಾಮ್ ಸೇತು, ಥ್ಯಾಂಕ್ ಗಾಡ್ ಕೂಡ ಕಾಂತಾರ ಎದುರು ನಿಲ್ಲಲಿಲ್ಲ. ಹೀಗೆ ಕಾಂತಾರ ಎದುರು ದೀಪಾವಳಿಯಲ್ಲಿ ಮಂಕಾಗಿರುವ 9 ದೊಡ್ಡ ಚಿತ್ರಗಳ ಪಟ್ಟಿ ಇಲ್ಲಿದೆ: ಸರ್ದಾರ್, ಪ್ರಿನ್ಸ್, ಮಾನ್ಸ್ಟರ್, ಪದವೆಟ್ಟು, ರಾಮ್ ಸೇತು, ಥ್ಯಾಂಕ್ ಗಾಡ್, ಹೆಡ್ ಬುಷ್, ಓರಿ ದೇವುಡಾ ಹಾಗೂ ಹರಹರ ಮಹಾದೇವ್.

   ಬಲಿಪಾಡ್ಯಮಿ ದಿನ ಬೆಂಗಳೂರಿನಲ್ಲಿ ಚಿತ್ರಗಳು ಪಡೆದ ಪ್ರದರ್ಶನಗಳ ಸಂಖ್ಯೆ

  ಬಲಿಪಾಡ್ಯಮಿ ದಿನ ಬೆಂಗಳೂರಿನಲ್ಲಿ ಚಿತ್ರಗಳು ಪಡೆದ ಪ್ರದರ್ಶನಗಳ ಸಂಖ್ಯೆ

  ದೀಪಾವಳಿಯ ಬಲಿಪಾಡ್ಯಮಿ ( ಅಕ್ಟೋಬರ್ 26 ) ದಿನದಂದು ಚಿತ್ರಗಳು ಪಡೆದುಕೊಂಡಿರುವ ಪ್ರದರ್ಶನಗಳ ಒಟ್ಟಾರೆ ಸಂಖ್ಯೆ ಈ ಕೆಳಕಂಡಂತಿದೆ.

  ಕಾಂತಾರ: 468

  ಹೆಡ್ ಬುಷ್ : 178

  ರಾಮ್ ಸೇತು : 171

  ಸರ್ದಾರ್ : 152

  ಬ್ಲಾಕ್ ಆಡಂ : 148

  ಥ್ಯಾಂಕ್ ಗಾಡ್ : 125

  ಪ್ರಿನ್ಸ್ : 63

   ಸೋಲ್ಡ್ ಔಟ್ ಆದ ಪ್ರದರ್ಶನಗಳ ಸಂಖ್ಯೆ

  ಸೋಲ್ಡ್ ಔಟ್ ಆದ ಪ್ರದರ್ಶನಗಳ ಸಂಖ್ಯೆ

  ಇನ್ನು ಬಲಿಪಾಡ್ಯಮಿ ದಿನದಂದು ಬೆಂಗಳೂರಿನಲ್ಲಿ ಮೇಲ್ಕಂಡ ಚಿತ್ರಗಳು ಹೆಚ್ಚು ಪ್ರದರ್ಶನವನ್ನು ಪಡೆದುಕೊಂಡಿದ್ದು, ರಾತ್ರಿ 12 ಗಂಟೆ ವೇಳೆಯವರೆಗೆ ಆಗಿದ್ದ ಅಡ್ವಾನ್ಸ್ ಬುಕಿಂಗ್ ಪ್ರಕಾರ ಈ ಕೆಳಕಂಡಷ್ಟು ಪ್ರದರ್ಶನಗಳು ಸೋಲ್ಡ್ ಔಟ್ ಆಗಿದ್ದವು.

  ಕಾಂತಾರ : 169

  ಪೊನ್ನಿಯಿನ್ ಸೆಲ್ವನ್ 1 : 22

  ಹೆಡ್ ಬುಷ್, ರಾಮಸೇತು, ಸರ್ದಾರ್, ಬ್ಲಾಕ್ ಆಡಮ್, ಥ್ಯಾಂಕ್ ಗಾಡ್ ಹಾಗೂ ಪ್ರಿನ್ಸ್ ತಲಾ ಒಂದೊಂದು ಪ್ರದರ್ಶನಗಳು.

  English summary
  Kantara got more shows than newly released movies in Bengaluru on Deepavali Day. Read on
  Wednesday, October 26, 2022, 14:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X