For Quick Alerts
  ALLOW NOTIFICATIONS  
  For Daily Alerts

  'RRR' ಬಳಿಕ ಆಸ್ಕರ್‌ ಮೇಲೆ ಕಣ್ಣಿಟ್ಟ 'ಕಾಂತಾರ' ಸಿಗುತ್ತದೆಯೇ ಎಂಟ್ರಿ?

  |

  'ಕಾಂತಾರ' ಸಿನಿಮಾ ಬಹುದೊಡ್ಡ ಹಿಟ್ ಎನಿಸಿಕೊಂಡಿದೆ ಮಾತ್ರವಲ್ಲ ಹಲವು ಸಿನಿಮಾ ವಿಮರ್ಶಕರಿಂದಲೂ ಭೇಷ್ ಎನಿಸಿಕೊಂಡಿದೆ. ಹಲವು ದಾಖಲೆಗಳನ್ನು ಬರೆದಿರುವ 'ಕಾಂತಾರ' ಸಿನಿಮಾ ಈಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.

  'ಕಾಂತಾರ' ಸಿನಿಮಾವು ಆಸ್ಕರ್‌ ಮೇಲೆ ಕಣ್ಣಿಟ್ಟಿದ್ದು, ಆಸ್ಕರ್‌ ರೇಸ್‌ ಅನ್ನು ಶೀಘ್ರವೇ ಪ್ರಾರಂಭಿಸಲಿದೆ. 'RRR' ಹಾಗೂ ಬಾಲಿವುಡ್‌ನ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾಗಳು ಈಗಾಗಲೇ ಆಸ್ಕರ್‌ ಕ್ಯಾಂಪೇನ್ ಪ್ರಾರಂಭೀಸಿದ್ದು ಈಗ ಈ ಪಟ್ಟಿಗೆ 'ಕಾಂತಾರ' ಸಹ ಸೇರಿಕೊಂಡಿದೆ.

  'ಕಾಂತಾರ' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಇಂಗ್ಲೀಷ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಕಾಂತಾರ' ಸಿನಿಮಾದ ಆಸ್ಕರ್‌ ನಾಮಿನೇಷನ್‌ಗಾಗಿ ನಾವು ಅಪ್ಲಿಕೇಶನ್ ಸಲ್ಲಿಸಿದ್ದೇವೆ ಎಂದಿದ್ದಾರೆ. ನಮ್ಮ ಸಿನಿಮಾಕ್ಕೆ ನಾಮಿನೇಶನ್ ದೊರಕಿಸಿಕೊಡಲು ಕಾತರರಾಗಿದ್ದೇವೆ, ನಾಮಿನೇಶನ್ಸ್ ಇನ್ನಷ್ಟೆ ಘೋಷನೆ ಆಗಬೇಕಿದೆ. ನಾವು ಕುತೂಹಲದಿಂದ ಕಾಯುತ್ತಿದ್ದೇವೆ'' ಎಂದಿದ್ದಾರೆ ವಿಜಯ್ ಕಿರಗಂದೂರು.

  ಈ ಬಾರಿಯ ಆಸ್ಕರ್‌ಗೆ ಭಾರತದಿಂದ ಕೆಲವು ಉತ್ತಮ ಸಿನಿಮಾಗಳು ನಾಮಿನೇಶನ್ಸ್‌ಗೆ ಯತ್ನಿಸುತ್ತಿವೆ. ಭಾರತದಿಂದ ಅಧಿಕೃತವಾಗಿ ಗುಜರಾತಿ ಸಿನಿಮಾ 'ಚೆಲ್ಲಾ ಶೋ' ಅನ್ನು ಆಸ್ಕರ್‌ಗೆ ಕಳಿಸಲಾಗಿದೆ. ಈಗಾಗಲೇ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ RRR ಸಿನಿಮಾ ಸಹ ಆಸ್ಕರ್‌ಗಾಗಿ ಗಟ್ಟಿಯಾಗಿ ಯತ್ನಿಸುತ್ತಿದ್ದು, ಕ್ಯಾಂಪೇನ್ ಅನ್ನು ಪ್ರಾರಂಭಿಸಿದೆ.

  ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿ ಆಲಿಯಾ ಭಟ್ ನಟಿಸಿರುವ ಹಿಂದಿ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಸಹ ಆಸ್ಕರ್‌ಗೆ ಯತ್ನಿಸುತ್ತಿದ್ದು, ಆ ಸಿನಿಮಾ ಸಹ ಸಿನಿಮಾವನ್ನು ಸಬ್‌ಮಿಶನ್‌ಗೆ ಕಳಿಸಿದೆ. ಇದೀಗ 'ಕಾಂತಾರ' ಸಹ ರೇಸ್‌ನಲ್ಲಿ ಯಾವ ಸಿನಿಮಾಕ್ಕೆ ನಾಮಿನೇಶನ್ ದೊರಕುತ್ತದೆ. ಯಾವ ಸಿನಿಮಾ ಗೆಲ್ಲುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

  English summary
  Kantara movie makers aims for Oscars. Hoping to get nominations. After RRR and Gangubhai Kathiawadi now Kantara trying to get nominated.
  Thursday, December 22, 2022, 8:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X