For Quick Alerts
  ALLOW NOTIFICATIONS  
  For Daily Alerts

  'ಪುಷ್ಪ' ಟೋಟಲ್ ಕಲೆಕ್ಷನ್ ಹಿಂದಿಕ್ಕಲು 'ಕಾಂತಾರ' ಇನ್ನೆಷ್ಟು ಕೋಟಿ ಗಳಿಸಬೇಕು? ಪುಷ್ಪ.. ತಗ್ಗಲೇಬೇಕು!

  |

  ಕಾಂತಾರ ಸದ್ಯ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಮೊದಲಿಗೆ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ಈ ಮಟ್ಟಿಗೆ ಕಲೆಕ್ಷನ್ ಮಾಡುತ್ತೆ ಎಂಬ ಊಹೆ ಯಾರಿಗೂ ಇರಲಿಲ್ಲ. ಸ್ವತಃ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೂ ಸಹ ತಮ್ಮ ಕಾಂತಾರ ಚಿತ್ರ ಇಷ್ಟೊಳ್ಳೆ ಕಲೆಕ್ಷನ್ ಮಾಡಲಿದೆ ಎಂಬ ಅಂದಾಜೂ ಸಹ ಇರಲಿಲ್ಲ.

  ಹೀಗಾಗಿಯೇ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡದೇ ಕೇವಲ ಕನ್ನಡ ಭಾಷೆಯಲ್ಲಿ ಮಾಡಿತ್ತು ಕಾಂತಾರ ಚಿತ್ರತಂಡ. ಆದರೆ ಕನ್ನಡದಲ್ಲಿಯೇ ನೆರೆ ರಾಜ್ಯದ ಚಿತ್ರಮಂದಿರಗಳಲ್ಲಿ ಕಾಂತಾರ ತುಂಬಿದ ಪ್ರದರ್ಶನ ಕಾಣಲು ಆರಂಭಿಸಿತು ಹಾಗೂ ಪರಭಾಷಾ ಸಿನಿ ಪ್ರೇಕ್ಷಕರಿಂದ ಚಿತ್ರವನ್ನು ಡಬ್ ಮಾಡುವಂತೆ ಮನವಿಗಳು ಕೇಳಿಬಂದವು. ಇದರಿಂದ ಪ್ರೇರೇಪಿತಗೊಂಡ ಕಾಂತಾರ ತಂಡ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾರ್ಪಾಡು ಮಾಡಿತು.

  ಪರಿಣಾಮ ಚಿತ್ರದ ಗಳಿಕೆ ಹೆಚ್ಚಾಯಿತು. ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ಚಿತ್ರ ವಿದೇಶದ ಕಲೆಕ್ಷನ್‌ನಿಂದಲೇ ತನ್ನ ಬಜೆಟ್ ಅನ್ನು ಸಂಪಾದಿಸಿತು. ಈ ಹಿಂದೆ ಯಶ್ ಅಭಿನಯದ ಕೆಜಿಎಫ್ 1 ಚಿತ್ರದ 250 ಕೋಟಿ ಲೈಫ್‌ಟೈಮ್ ಕಲೆಕ್ಷನ್ ಹಿಂದಿಕ್ಕಿದ ಕಾಂತಾರ ಈಗ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಪಾರ್ಟ್ 1 ಚಿತ್ರದ ಜೀವಮಾನ ಕಲೆಕ್ಷನ್ ಅನ್ನು ಹಿಂದಿಕ್ಕಲು ಸಜ್ಜಾಗಿದೆ.

  ಪುಷ್ಪ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು?

  ಪುಷ್ಪ ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು?

  ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಪುಷ್ಪ ಚಿತ್ರ ಶುರುವಾಗುವ ಮುನ್ನವೇ ಪ್ಯಾನ್ ಇಂಡಿಯಾ ಚಿತ್ರವಾಗಿತ್ತು. ಎಲ್ಲಾ ಭಾಷೆಯ ಸಿನಿ ಪ್ರೇಕ್ಷಕರಿಗೂ ಇಷ್ಟವಾಗುವ ರೀತಿ ಚಿತ್ರೀಕರಣವನ್ನೂ ಸಹ ಮಾಡಲಾಗಿತ್ತು. ಹೀಗೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಗೊಂಡು ಹಿಂದಿಯೊಂದರಲ್ಲೇ 108 ಕೋಟಿ ಗಳಿಕೆ ಮಾಡಿದ್ದ ಪುಷ್ಪ ಪಾರ್ಟ್ 1 ಎಲ್ಲಾ ಭಾಷೆಯೂ ಸೇರಿದಂತೆ ಒಟ್ಟು 350.3 ಕೋಟಿ ರೂಪಾಯಿ ಗಳಿಕೆ ಮಾಡಿ ತನ್ನ ಓಟವನ್ನು ನಿಲ್ಲಿಸಿತ್ತು.

  ಪುಷ್ಪ ಪಾರ್ಟ್ 1 ಕಲೆಕ್ಷನ್ ಹಿಂದಿಕ್ಕಲು ಕಾಂತಾರ ಇನ್ನೆಷ್ಟು ಗಳಿಸಬೇಕು?

  ಪುಷ್ಪ ಪಾರ್ಟ್ 1 ಕಲೆಕ್ಷನ್ ಹಿಂದಿಕ್ಕಲು ಕಾಂತಾರ ಇನ್ನೆಷ್ಟು ಗಳಿಸಬೇಕು?

  ಸದ್ಯ ನವೆಂಬರ್ 5ರ ಶನಿವಾರದವರೆಗೆ ಕಾಂತಾರ ಚಿತ್ರ ಎಲ್ಲಾ ಭಾಷೆಯೂ ಸೇರಿದಂತೆ ವಿಶ್ವದಾದ್ಯಂತ 331 ಕೋಟಿ ಗಳಿಕೆ ಮಾಡಿದ್ದು, ಪುಷ್ಪ ಪಾರ್ಟ್ 1 ಚಿತ್ರ ಮಾಡಿರುವ 350 ಕೋಟಿ ದಾಖಲೆ ಹಿಂದಿಕ್ಕಲು ಇನ್ನೂ 19 ಕೋಟಿ ಗಳಿಕೆ ಮಾಡಬೇಕಿದೆ. ಸದ್ಯ ಇಂದು ( ನವೆಂಬರ್ 6 ) ಭಾನುವಾರ ರಜಾ ದಿನವಾಗಿರುವ ಕಾರಣ ಕಾಂತಾರ ಹತ್ತಕ್ಕೂ ಹೆಚ್ಚು ಕೋಟಿ ಗಳಿಸುವ ನಿರೀಕ್ಷೆ ಇದ್ದು ಇನ್ನೆರಡು ಮೂರು ದಿನಗಳಲ್ಲಿ ಪುಷ್ಪ ಪಾರ್ಟ್ 1 ಕಲೆಕ್ಷನ್ ಅನ್ನು ಹಿಂದಿಕ್ಕುವುದು ಖಚಿತ.

  ಯಾವುದೇ ಹೈಪ್, ಪ್ರಮೋಷನ್ ಇಲ್ಲದೇ ಗೆದ್ದ ಕಾಂತಾರ

  ಯಾವುದೇ ಹೈಪ್, ಪ್ರಮೋಷನ್ ಇಲ್ಲದೇ ಗೆದ್ದ ಕಾಂತಾರ

  ಇನ್ನು ಪುಷ್ಪ ಚಿತ್ರ ಸೆಟ್ಟೇರಿದಾಗಿನಿಂದಲೂ ವಿಪರೀತ ಹೈಪ್ ಹಾಗೂ ಪ್ರಚಾರವನ್ನು ಪಡೆದುಕೊಂಡಿದ್ದ ಚಿತ್ರವಾದರೆ, ಕಾಂತಾರ ಇದಕ್ಕೆ ವಿರುದ್ಧ, ಮೊದಲ ದಿನ ಕೇವಲ ಒಂದೂವರೆ ಕೋಟಿ ಗಳಿಸಿ ನಂತರ ಜನರ ಮಾತಿನ ಮೂಲಕ ಪ್ರಚಾರ ಪಡೆದುಕೊಂಡಂತಹ ಚಿತ್ರ. ಹೀಗೆ ಯಾವುದೇ ಹೈಪ್ ಇಲ್ಲದೇ, ಪ್ರಚಾರವಿಲ್ಲದೇ ಗೆದ್ದ ಕಾಂತಾರ ಚಿತ್ರದ ಬಜೆಟ್ ಕೂಡ ಕಡಿಮೆ ಇದ್ದು, ಲಾಭದ ಶೇಕಡಾಂಶವನ್ನು ಊಹಿಸಿಕೊಂಡರೂ ಗೂಸ್‌ಬಂಪ್ಸ್ ಗ್ಯಾರಂಟಿ.

  English summary
  Kantara need few more crores to beat Allu Arjun's Pushpa part 1 lifetime collection. Read on
  Sunday, November 6, 2022, 12:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X