For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲಿ ಅಬ್ಬರಿಸಿದ್ದ 'ಕಾಂತಾರ' ಚಿತ್ರ ಓಟಿಟಿಯಲ್ಲಿ ಗೆಲ್ತಾ, ಸೋಲ್ತಾ?

  |

  ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಚಿತ್ರ ಬರೆದ ದಾಖಲೆ ಒಂದೆರಡಲ್ಲ. ಸುಮಾರು ಹದಿನಾರು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಕಾಂತಾರ ಚಿತ್ರ 400 ಕೋಟಿ ಗಳಿಸಿತು. ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ಸಿನಿ ರಸಿಕರಿಂದ ಪ್ರಶಂಸೆ ಹಾಗೂ ಡಬ್ಬಿಂಗ್‌ಗೆ ಬೇಡಿಕೆ ಪಡೆದುಕೊಂಡ ನಂತರ ದೇಶದ ಇತರೆ ಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಚಿತ್ರವಾಯಿತು.

  ಕನ್ನಡದ ರೀತಿಯೇ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಅಬ್ಬರಿಸಿದ ಕಾಂತಾರ ಚಿತ್ರವನ್ನು ವೀಕ್ಷಿಸಲು ಪರಭಾಷಾ ಸಿನಿ ರಸಿಕರು ಮುಗಿಬಿದ್ದಿದ್ದರು. ಹೀಗೆ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಕಾಂತಾರ ಚಿತ್ರ ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ನವೆಂಬರ್ 24ರಿಂದ ಅಮೆಜಾನ್ ಪ್ರೈಮ್ ವಿಡಿಯೊ ಅಪ್ಲಿಕೇಶನ್‌ನಲ್ಲಿ ಕಾಂತಾರ ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿದೆ.

  ಇನ್ನು ಕಾಂತಾರ ಚಿತ್ರದ ಹೈಲೈಟ್‌ ಅಂಶಗಳಲ್ಲಿ ಒಂದಾಗಿದ್ದ ವರಾಹ ರೂಪಂ ಹಾಡು ಓಟಿಟಿಯಲ್ಲಿ ಬಿಡುಗಡೆಯಾಗಿದ್ದ ವರ್ಷನ್‌ನಲ್ಲಿ ಇಲ್ಲದಿರುವುದನ್ನು ಕಂಡಿದ್ದ ಸಿನಿ ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಯಶಸ್ವಿಯಾದಷ್ಟು ಓಟಿಟಿಯಲ್ಲಿ ಕಾಂತಾರ ಚಿತ್ರ ಯಶಸ್ಸು ಸಾಧಿಸುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಅಭಿಪ್ರಾಯವನ್ನು ಕಾಂತಾರ ಚಿತ್ರ ಹುಸಿ ಮಾಡಿದ್ದು, ಓಟಿಟಿಯಲ್ಲೂ ಸಹ ತನ್ನ ಅಬ್ಬರವನ್ನು ಮುಂದುವರಿಸಿದೆ. ಡಿಸೆಂಬರ್ 2ರಂದು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಂತಾರ ಅಗ್ರಸ್ಥಾನವನ್ನು ಅಲಂಕರಿಸಿದೆ. ಹಾಗಿದ್ದರೆ ಈ ದಿನದಂದು ಅಮೆಜಾನ್ ಪ್ರೈಮ್ ವಿಡಿಯೊನ ಭಾರತ ಟ್ರೆಂಡಿಂಗ್ ಪಟ್ಟಿಯಲ್ಲಿ ಯಾವ ಚಿತ್ರ ಹಾಗೂ ಸರಣಿಗಳು ಅಗ್ರಸ್ಥಾನದಲ್ಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

  ಅಮೆಜಾನ್ ಟ್ರೆಂಡಿಂಗ್ ಪಟ್ಟಿ ಹೀಗಿದೆ

  ಅಮೆಜಾನ್ ಟ್ರೆಂಡಿಂಗ್ ಪಟ್ಟಿ ಹೀಗಿದೆ

  ಅಮೆಜಾನ್ ಪ್ರೈಮ್ ವಿಡಿಯೊ ಅಪ್ಲಿಕೇಶನ್‌ನಲ್ಲಿ ಡಿಸೆಂಬರ್ 2ರಂದು ಭಾರತದ ಟ್ರೆಂಡಿಂಗ್ ಪಟ್ಟಿಯಲ್ಲಿ ಟಾಪ್ ಹತ್ತು ಸ್ಥಾನಗಳನ್ನು ಪಡೆದಿರುವ ಚಿತ್ರ ಹಾಗೂ ಸರಣಿಗಳ ಪಟ್ಟಿ:

  1. ಕಾಂತಾರ

  2. ತಥಾಸ್ತು

  3. ಪೊನ್ನಿಯಿನ್ ಸೆಲ್ವನ್ 1 ( ಹಿಂದಿ )

  4. ಬ್ರೀದ್: ಇನ್ ಟು ದ ಶ್ಯಾಡೋಸ್ ಸೀಸನ್ 2

  5. ಹಾಸ್ಟೆಲ್ ಡೇಸ್ ಸೀಸನ್ 3

  6. ಫೋರ್‌ ಮೋರ್ ಶಾಟ್ಸ್ ಪ್ಲೀಸ್ ಸೀಸನ್ 3

  7. ಮಿರ್ಜಾಪುರ್ ಸೀಸನ್ 2

  8. ಪೊನ್ನಿಯಿನ್ ಸೆಲ್ವನ್ 1 ( ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ )

  9. ಪಂಚಾಯತ್ ಸೀಸನ್ 2

  10. ದಿ ಫ್ಯಾಮಿಲಿ ಮ್ಯಾನ್ ಸೀಸನ್ 2

  ಓಟಿಟಿಗೆ ಬಂದರೂ ಸಹ ಚಿತ್ರಮಂದಿರಗಳಲ್ಲಿ ಕಾಂತಾರ ವೀಕ್ಷಣೆ

  ಓಟಿಟಿಗೆ ಬಂದರೂ ಸಹ ಚಿತ್ರಮಂದಿರಗಳಲ್ಲಿ ಕಾಂತಾರ ವೀಕ್ಷಣೆ

  ಇನ್ನು ಕಾಂತಾರ ಚಿತ್ರ ಓಟಿಟಿಯಲ್ಲಿ ಲಭ್ಯವಿದ್ದರೂ ಸಹ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಹಲವಾರು ಸಿನಿ ರಸಿಕರು ವೀಕ್ಷಿಸುತ್ತಿದ್ದಾರೆ. ರಾಜ್ಯದ ಬೆಂಗಳೂರು, ಮಂಗಳೂರು ಹಾಗೂ ಮೈಸೂರು ಮುಂತಾದ ಪ್ರಮುಖ ನಗರಗಳಲ್ಲಿ ಕಾಂತಾರ ಚಿತ್ರದ ಟಿಕೆಟ್‌ಗಳು ಓಟಿಟಿ ಬಿಡುಗಡೆಯಾಗಿ ವಾರ ಕಳೆದರೂ ಸಹ ಮಾರಾಟವಾಗುತ್ತಿರುವುದು ವಿಶೇಷ ಹಾಗೂ ಆಶ್ಚರ್ಯ ಕೂಡ..

  ತುಳುವಿನಲ್ಲೂ ಕಾಂತಾರ ಬಿಡುಗಡೆ

  ತುಳುವಿನಲ್ಲೂ ಕಾಂತಾರ ಬಿಡುಗಡೆ

  ಇನ್ನು ಕಾಂತಾರ ಚಿತ್ರವನ್ನು ತುಳು ಭಾಷೆ ಬರುವ ಸಿನಿ ಪ್ರೇಕ್ಷಕರು ಮಾಡಿದ ಒತ್ತಾಯದ ಮೇರೆಗೆ ತುಳು ಭಾಷೆಗೂ ಸಹ ಡಬ್ ಮಾಡಿ ರಿಲೀಸ್ ಮಾಡಲಾಗಿದೆ. ಈ ಮೂಲಕ ಒಟ್ಟು ಆರು ಭಾಷೆಗಳಲ್ಲಿ ಕಾಂತಾರ ತೆರೆ ಕಂಡಂತಾಗಿದೆ. ಕಾಂತಾರ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿದಾಗಲೇ ತುಳು ಭಾಷೆಗೂ ಸಹ ಡಬ್ ಮಾಡಿ ಎಂಬ ಕೂಗು ದೊಡ್ಡ ಮಟ್ಟದ ಕೂಗು ತುಳು ಪ್ರೇಕ್ಷಕ ವರ್ಗದಲ್ಲಿ ವ್ಯಕ್ತವಾಗಿತ್ತು. ಅದರಂತೆ ಇದೀಗ ವಿಶ್ವದಾದ್ಯಂತ ಇರುವ ತುಳು ಸಿನಿ ರಸಿಕರು ಕಾಂತಾರ ಚಿತ್ರವನ್ನು ತುಳುವಿನಲ್ಲೂ ವೀಕ್ಷಿಸಬಹುದಾಗಿದೆ.

  English summary
  Kantara trending at number 1 position on Amazon Prime by beating PS 1. Read on
  Friday, December 2, 2022, 14:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X