For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ನೂತನ ಚಿತ್ರ ತೆರೆಗೆ; ಮಹಾ ದಾಖಲೆ ಬರೆಯುವ ಮುನ್ನವೇ 'ಕಾಂತಾರ' ಎತ್ತಂಗಡಿ!

  |

  ಕಾಂತಾರ ಕಳೆದ ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡಿದ್ದ ಚಿತ್ರ. ಮೊದಲಿಗೆ ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಚಿತ್ರ ನಂತರ ಪಡೆದುಕೊಂಡ ಅಭೂತಪೂರ್ವ ಪ್ರತಿಕ್ರಿಯೆಯ ಕಾರಣದಿಂದಾಗಿ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿತು. ಕಾಂತಾರ ಚಿತ್ರದ ಕನ್ನಡ ಅವತರಣಿಕೆಯೇ ಬೇರೆ ರಾಜ್ಯಗಳಲ್ಲಿ ತುಂಬಿದ ಪ್ರದರ್ಶನ ಕಾಣಲು ಆರಂಭಿಸಿದ ನಂತರ ಚಿತ್ರವನ್ನು ತೆಲುಗು, ಹಿಂದಿ, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆಗೊಳಿಸಲಾಯಿತು ಹಾಗೂ ಚಿತ್ರ ನಿರೀಕ್ಷೆಯಂತೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕೋಟಿ ಕೋಟಿ ಬಾಚಿತು.

  ಕರ್ನಾಟಕದಲ್ಲಿ ಸುಮಾರು ಇನ್ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ಮೊದಲ ದಿನ ಒಂದೂವರೆ ಕೋಟಿ ಗಳಿಕೆ ಮಾಡಿ ಸಾಮಾನ್ಯ ಓಪನಿಂಗ್ ಪಡೆದುಕೊಂಡಿತ್ತು. ಹೀಗೆ ದೊಡ್ಡ ಪ್ರಚಾರವಿಲ್ಲದ ಹಾಗೂ ಸ್ಟಾರ್ ನಟ ನಟಿಯರಿಲ್ಲದೇ ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರ ಐವತ್ತಕ್ಕೂ ಹೆಚ್ಚು ಕೋಟಿ ಗಳಿಸಬಹುದು ಎಂದು ಬಹುತೇಕರು ಊಹಿಸಿದ್ದರು. ಆದರೆ ಈ ಎಲ್ಲಾ ಊಹೆಗಳೂ ತಲೆಕೆಳಗಾಗಿದ್ದು ಚಿತ್ರ ಸದ್ಯ 400 ಕೋಟಿ ಕ್ಲಬ್ ಸೇರುವ ಸನಿಹದಲ್ಲಿದೆ.

  ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ ನಿರ್ಮಾಪಕರು ಹಾಗೂ ಎಲ್ಲಾ ನಿರ್ಮಾಪಕರ ಜೇಬು ತುಂಬಿಸಿದ್ದು, ಥಿಯೇಟ್ರಿಕಲ್ ರನ್ ವಿಚಾರದಲ್ಲೂ ಇತ್ತೀಚಿನ ದಿನಗಳಲ್ಲಿ ಯಾವ ಚಿತ್ರವೂ ಮಾಡದಿದ್ದ ಸಾಧನೆ ಮಾಡಿತ್ತು. ಹೌದು, ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರಗಳಲ್ಲಿ ಕೊರೊನಾ ನಂತರ ಬಿಡುಗಡೆಗೊಂಡಿದ್ದ ಯಾವ ಚಿತ್ರವೂ 25 ದಿನಗಳನ್ನು ಪೂರೈಸಿರಲಿಲ್ಲ, ಆದರೆ ಕಾಂತಾರ ಈ ಮೈಲಿಗಲ್ಲನ್ನು ಮುಟ್ಟಿ ಐವತ್ತನೇ ದಿನ ಪೂರೈಸುವತ್ತ ಹೆಜ್ಜೆ ಇಟ್ಟಿತ್ತು. ಆದರೆ ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿರುವುದರಿಂದ ಕಾಂತಾರ ಐವತ್ತು ದಿನಗಳ ಸಂಭ್ರಮಾಚರಣೆಗೆ ಅಡ್ಡಿಯಾಗಿದ್ದು, ಮಹತ್ತರ ದಾಖಲೆ ಸೃಷ್ಟಿಯಾಗುವುದೂ ಸಹ ಮುರಿದು ಬಿದ್ದಿದೆ.

  49 ದಿನಗಳಿಗೆ ಕಾಂತಾರ ಓಟ ಅಂತ್ಯ

  49 ದಿನಗಳಿಗೆ ಕಾಂತಾರ ಓಟ ಅಂತ್ಯ

  ಇದೇ ಶುಕ್ರವಾರ ( ನವೆಂಬರ್ 18 ) ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಚಿತ್ರ ಬಿಡುಗಡೆಗೊಳ್ಳುತ್ತಿದ್ದು, ಈ ಚಿತ್ರಕ್ಕೆ ಬೆಂಗಳೂರಿನ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರವನ್ನು ಮುಖ್ಯ ಚಿತ್ರಮಂದಿರವನ್ನಾಗಿ ಘೋಷಿಸಲಾಗಿದೆ. ಈಗಾಗಲೇ ಅಬ್ಬರ ಚಿತ್ರದ ಶುಕ್ರವಾರದ ಮುಂಗಡ ಬುಕಿಂಗ್ ಅನ್ನು ಸಹ ಸಂತೋಷ್ ಚಿತ್ರಮಂದಿರದಲ್ಲಿ ತೆರೆಯಲಾಗಿದೆ. ಈ ಮೂಲಕ ಕಾಂತಾರ ಚಿತ್ರ 49 ದಿನಗಳಿಗೆ ಸಂತೋಷ್ ಚಿತ್ರಮಂದಿರದಲ್ಲಿ ತನ್ನ ಓಟವನ್ನು ನಿಲ್ಲಿಸಲಿದ್ದು ಐವತ್ತು ದಿನಗಳನ್ನು ಪೂರೈಸುವಲ್ಲಿ ವಿಫಲವಾಗಲಿದೆ.

  ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಐವತ್ತು ದಿನ ದಾಖಲೆಗೆ ಬಿತ್ತು ಕಲ್ಲು

  ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲೂ ಐವತ್ತು ದಿನ ದಾಖಲೆಗೆ ಬಿತ್ತು ಕಲ್ಲು

  ಇನ್ನು ಕಾಂತಾರ ಚಿತ್ರ ಬಿಡುಗಡೆಗೊಂಡ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಐವತ್ತು ದಿನಗಳನ್ನು ಪೂರೈಸಿ ಕನ್ನಡ ಚಿತ್ರರಂಗದಲ್ಲಿ ನೂತನ ದಾಖಲೆ ನಿರ್ಮಿಸಲಿದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿತ್ತು. ಆದರೆ ಇದೀಗ 49 ದಿನಕ್ಕೆ ಮುಖ್ಯ ಚಿತ್ರಮಂದಿರದಲ್ಲಿ ಕಾಂತಾರ ತನ್ನ ಆಟ ನಿಲ್ಲಿಸುವುದರಿಂದ ಈ ಬೃಹತ್ ದಾಖಲೆ ಬರೆಯುವ ಅವಕಾಶವನ್ನು ಕೈತಪ್ಪಿಸಿಕೊಂಡಿದೆ.

  ಅತಿಹೆಚ್ಚು ಜನ ವೀಕ್ಷಿಸಿದ ಸಿನಿಮಾ

  ಅತಿಹೆಚ್ಚು ಜನ ವೀಕ್ಷಿಸಿದ ಸಿನಿಮಾ

  ಇನ್ನು ಈಗಿನ ತಲೆಮಾರಿನ ಕನ್ನಡ ಚಿತ್ರಗಳ ಪೈಕಿ ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟಗೊಂಡ ಚಿತ್ರ ಎಂಬ ಬೃಹತ್ ದಾಖಲೆಯನ್ನು ಕಾಂತಾರ ಬರೆದಿದೆ. ಅಷ್ಟೇ ಅಲ್ಲದೇ ಕಡಿಮೆ ಬಂಡವಾಳ ಹೂಡಿ ಮುನ್ನೂರು ಕೋಟಿ ಕ್ಲಬ್ ಸೇರಿದ ಕನ್ನಡದ ಚಿತ್ರ ಎಂಬ ಹೆಗ್ಗಳಿಕೆಗೂ ಕಾಂತಾರ ಪಾತ್ರವಾಗಿದೆ. ಒಟ್ಟಿನಲ್ಲಿ ಕಾಂತಾರ ಡಿಜಿಟಲ್ ಯುಗದಲ್ಲೂ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದು ಮುಂಬರುವ ಚಿತ್ರಗಳು ಇಷ್ಟು ದಿನಗಳವರೆಗೆ ಚಿತ್ರಮಂದಿರಗಳಲ್ಲಿ ನಿಲ್ಲುವುದು ಅನುಮಾನವೇ ಸರಿ.

  English summary
  Kantara will ends it's run for 49 days in Santosh theatre as Abbara releasing on November 18. Read on
  Wednesday, November 16, 2022, 14:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X