For Quick Alerts
  ALLOW NOTIFICATIONS  
  For Daily Alerts

  ಮೇಘನಾ ರಾಜ್ ನಂತರ ಚಿರು ಸರ್ಜಾಗೆ ಕಾಂತ ಕನ್ನಲ್ಲಿ ಆಕ್ಷನ್ ಕಟ್

  |

  ನಟಿ ಮೇಘನಾ ರಾಜ್ ಇತ್ತೀಚಿಗಷ್ಟೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದರು. 'ಇರುವುದೆಲ್ಲವ ಬಿಟ್ಟು' ಸಿನಿಮಾ ಅವರಿಗೆ ಈ ಪ್ರಶಸ್ತಿ ತಂದು ಕೊಟ್ಟಿತ್ತು. ಇದೀಗ ಈ ಸಿನಿಮಾದ ನಿರ್ದೇಶಕ ಕಾಂತ ಕನ್ನಲ್ಲಿ ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ.

  ತಮ್ಮ ಎರಡನೇ ಸಿನಿಮಾವನ್ನು ಮೇಘನಾ ರಾಜ್ ರೊಂದಿಗೆ ಮಾಡಿದ್ದ ಕಾಂತ ಕನ್ನಲ್ಲಿ ಈಗ ಮೂರನೇ ಸಿನಿಮಾವನ್ನು ಚಿರಂಜೀವಿ ಸರ್ಜಾರೊಂದಿಗೆ ಶುರು ಮಾಡಿದ್ದಾರೆ. ಈ ಸಿನಿಮಾದ ವಿವರವನ್ನು 'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಕಾಂತ ಕನ್ನಲ್ಲಿ ಹಂಚಿಕೊಂಡಿದ್ದಾರೆ.

  ರಾಜ್ಯ ಪ್ರಶಸ್ತಿ ಗೆದ್ದ ಮೇಘನಾ ರಾಜ್ ಗೆ ಪತಿ ಚಿರು ಸರ್ಜಾ ಹೇಳಿದ್ದೇನು?ರಾಜ್ಯ ಪ್ರಶಸ್ತಿ ಗೆದ್ದ ಮೇಘನಾ ರಾಜ್ ಗೆ ಪತಿ ಚಿರು ಸರ್ಜಾ ಹೇಳಿದ್ದೇನು?

  ಚಿರಂಜೀವಿ ಸರ್ಜಾ ಸಿನಿಮಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಕಥೆ ತುಂಬ ಇಷ್ಟ ಆಗಿದ್ದು, ಪಾತ್ರಕ್ಕಾಗಿ ಚಿರು ವರ್ಕೌಟ್ ಮಾಡಲಿದ್ದಾರಂತೆ. ಲವ್ ಹಾಗೂ ಆಕ್ಷನ್ ಹೊಂದಿರುವ ಕಮರ್ಷಿಯಲ್ ಕಥೆಯನ್ನು ಬೇರೆ ಶೈಲಿಯಲ್ಲಿ ಹೊಸದಾಗಿ ತೋರಿಸಬೇಕು ಎನ್ನುವುದು ನಿರ್ದೇಶಕರ ಆಸೆಯಾಗಿದೆ.

  ಸದ್ಯ ಕೊನೆಯ ಹಂತದ ಕಥೆ, ಚಿತ್ರಕಥೆ ಕೆಲಸಗಳು ನಡೆಯುತ್ತಿದ್ದು, ಏಪ್ರಿಲ್ ನಂತರ ಈ ಸಿನಿಮಾದ ಚಿತ್ರೀಕರಣ ಶುರು ಆಗಲಿದೆಯಂತೆ. ಸಿನಿಮಾದ ಟೈಟಲ್, ಹೀರೋಯಿನ್ ಹಾಗೂ ತಾಂತ್ರಿಕ ವರ್ಗವನ್ನು ಮುಂದಿನ ದಿನದಲ್ಲಿ ತಿಳಿಸಲಾಗುವುದು ಎಂದು ಕಾಂತ ಕನ್ನಲ್ಲಿ ಹೇಳಿದ್ದಾರೆ.

  ಪತಿಯ ಸಿನಿಮಾಗೆ ಧ್ವನಿಯಾದ ನಟಿ ಮೇಘನಾ ರಾಜ್ಪತಿಯ ಸಿನಿಮಾಗೆ ಧ್ವನಿಯಾದ ನಟಿ ಮೇಘನಾ ರಾಜ್

  ತಿರುಪತಿ ಪಿಚ್ಚರ್ ಬ್ಯಾನರ್ ಚಂದ್ರಕಲಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರುಪ್ರಸಾದ್ ಸಹ ನಿರ್ಮಾಪಕರಾಗಿದ್ದಾರೆ.

  English summary
  Kantha Kannalli will be directing a movie to actor Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X