For Quick Alerts
  ALLOW NOTIFICATIONS  
  For Daily Alerts

  ಸಿಸಿಎಲ್ ಪರ ಸಚಿನ್ ಬ್ಯಾಟಿಂಗ್, ಕಪಿಲ್ ನಿರೂಪಣೆ

  By Mahesh
  |

  ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಾಲ್ಕನೇ ಆವೃತ್ತಿ ಪಂದ್ಯಾವಳಿಗಳು ಜ.25ರಿಂದ ಮುಂಬೈನಲ್ಲಿ ಆರಂಭಗೊಳ್ಳಲಿದೆ.ಮಾಸ್ಟರ್ ಬ್ಲಾಸ್ಟರ್ ಭಾರತರತ್ನ ಸಚಿನ್ ತೆಂಡೂಲ್ಕರ್ ಅವರು ಮುಂಬೈನಲ್ಲಿ ಸಿಸಿಎಲ್ ನಾಲ್ಕನೆ ಆವೃತ್ತಿಗೆ ಚಾಲನೆ ನೀಡಿ ಇಂದಿಗೆ ಒಂದು ತಿಂಗಳು ಕಳೆದಿದೆ. ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಇದೀಗ ಈ ಬಾರಿಯ ಸಿಸಿಎಲ್ 'ಸ್ಟಾರ್' ನಿರೂಪಕರ ಹೆಸರು ಬಹಿರಂಗಗೊಂಡಿದೆ.

  ಹಾಲಿ ಚಾಂಪಿಯನ್ ಕರ್ನಾಟಕ ಬುಲ್ಡೋಜರ್ಸ್ ತಂಡ ಸದ್ಯಕ್ಕೆ ಬೆಂಗಳೂರಿನ ನೆಲಮಂಗಲದ ಬಳಿ ರೆಸಾರ್ಟ್ ನಲ್ಲಿ ಭರದ ತಯಾರಿ ನಡೆಸಿದೆ. ತಂಡದ ನಾಯಕ ಸುದೀಪ್ ಅವರು ಅಂದು ಮುಂಬೈನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಬುಲ್ಡೋಜರ್ಸ್ ತಂಡದ ಪಂದ್ಯಾವಳಿ ಜನವರಿ 26ರಿಂದ ಆರಂಭವಾಗಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಬೆಂಗಾಲ್ ಟೈಗರ್ಸ್ ತಂಡದೊಂದಿಗೆ ಹೈದರಾಬಾದಿನಲ್ಲಿ ಕಣಕ್ಕಿಳಿಯಲಿದೆ.

  ನಿರೂಪಣೆಯ ವಿಷಯಕ್ಕೆ ಬಂದರೆ, ಕಲರ್ಸ್ ವಾಹಿನಿಯ ಕಾಮಿಡಿ ಟೈಮ್ ವಿಥ್ ಕಪಿಲ್ ಶೋ ಖ್ಯಾತಿಯ ಕಪಿಲ್ ಶರ್ಮ ಹಾಗೂ ಖ್ಯಾತ ತಾರೆ ಮಂದಿರಾ ಬೇಡಿ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್(ಸಿಸಿಎಲ್) ನಾಲ್ಕನೇ ಆವೃತ್ತಿಯ ಎಕ್ಸ್ ಟ್ರಾ ಇನ್ನಿಂಗ್ಸ್ ಅವಧಿಯ ನಿರೂಪಕರಾಗಿರುತ್ತಾರೆ. ಸಿಸಿಎಲ್ 4 ಅನಾವರಣ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್, ಧನುಷ್, ವೆಂಕಟೇಶ್, ರಿತೇಶ್ ದೇಶ್ ಮುಖ್ ಹಾಗೂ ಇನ್ನಿತರ ತಾರೆಗಳು ಕಾಣಿಸಿಕೊಂಡಿದ್ದರು. ಚಿತ್ರಗಳು ಇಲ್ಲಿವೆ ನೋಡಿ...

  ಸಿಸಿಎಲ್ 4ಕ್ಕೆ ಕಪಿಲ್-ಮಂದಿರಾ ನಿರೂಪಕರು

  ಸಿಸಿಎಲ್ 4ಕ್ಕೆ ಕಪಿಲ್-ಮಂದಿರಾ ನಿರೂಪಕರು

  ಕಲರ್ಸ್ ವಾಹಿನಿಯ ಕಾಮಿಡಿ ಟೈಮ್ ವಿಥ್ ಕಪಿಲ್ ಶೋ ಖ್ಯಾತಿಯ ಕಪಿಲ್ ಶರ್ಮ ಹಾಗೂ ಖ್ಯಾತ ತಾರೆ ಮಂದಿರಾ ಬೇಡಿ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್(ಸಿಸಿಎಲ್) ನಾಲ್ಕನೇ ಆವೃತ್ತಿಯ ನಿರೂಪಕರಾಗಿರುತ್ತಾರೆ. ಈ ಬಗ್ಗೆ ಕಪಿಲ್ ಟ್ವೀಟ್ ಮಾಡಿದ್ದಾರೆ

  ಸಿಸಿಎಲ್ 4 ಅನಾವರಣ ಕಾರ್ಯಕ್ರಮ ಚಿತ್ರ

  ಸಿಸಿಎಲ್ 4 ಅನಾವರಣ ಕಾರ್ಯಕ್ರಮ ಚಿತ್ರ

  ಸಿಸಿಎಲ್ 4 ಅನಾವರಣ ಕಾರ್ಯಕ್ರಮ ಬಗ್ಗೆ ಚಿತ್ರ ಸಹಿತ ಟ್ವೀಟ್ ಮಾಡಿದ ಕಾಮಿಡಿಯನ್ ಕಪಿಲ್ ಶರ್ಮ

  ಕಾಮಿಡಿಯನ್ ಜತೆ ಕ್ರಿಕೆಟ್ ದೇವರು

  ಕಾಮಿಡಿಯನ್ ಜತೆ ಕ್ರಿಕೆಟ್ ದೇವರು

  ಕ್ರಿಕೆಟ್ ಕ್ಷೇತ್ರದ ದಂತಕತೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಜತೆ ಕಪಿಲ್ ಶರ್ಮ

  ಸಿಸಿಎಲ್ 4 ಅನಾವರಣದ ಜತೆ ಸಂಗೀತ

  ಸಿಸಿಎಲ್ 4 ಅನಾವರಣದ ಜತೆ ಸಂಗೀತ

  ಖ್ಯಾತ ಗಾಯಕಿ ಉಷಾ ಉತ್ತುಪ್ ಜತೆ ಕಾಲಿವುಡ್ ಸ್ಟಾರ್ ಧನುಷ್ ಹಾಡುಗಾರಿಕೆ

  ಸಚಿನ್ ಜತೆ ಬೋನಿಕಪೂರ್

  ಸಚಿನ್ ಜತೆ ಬೋನಿಕಪೂರ್

  ಬಾಲಿವುಡ್ ಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರು ಸಚಿನ್ ತೆಂಡೂಲ್ಕರ್ ಜತೆ

  ಸಚಿನ್ ರಿಂದ ಆಟೋಗ್ರಾಫ್ ಸಿಕ್ಕಿದ ಸಂತಸ

  ಸಚಿನ್ ರಿಂದ ಆಟೋಗ್ರಾಫ್ ಸಿಕ್ಕಿದ ಸಂತಸ

  ಸಚಿನ್ ರಿಂದ ಆಟೋಗ್ರಾಫ್ ಸಿಕ್ಕಿದ ಸಂತಸದಲ್ಲಿರುವ ನಿರೂಪಕ ಮನೀಶ್

  ಸಚಿನ್ ಗೆ ತಮಿಳು ನಟ ಧನುಷ್ ನಮನ

  ಸಚಿನ್ ಗೆ ತಮಿಳು ನಟ ಧನುಷ್ ನಮನ

  ಸಚಿನ್ ತೆಂಡೂಲ್ಕರ್ ಮಾತನಾಡಿಸಲು ಎಲ್ಲರೂ ಕಾತುರರಾಗಿದ್ದರು. ಸಚಿನ್ ಎಲ್ಲರೊಟ್ಟಿಗೆ ಆತ್ಮೀಯವಾಗಿ ಬೆರೆತರು

  ನಿರೂಪಕ ಮನೀಶ್ ಜತೆ ಕಿಚ್ಚ ಸುದೀಪ್

  ನಿರೂಪಕ ಮನೀಶ್ ಜತೆ ಕಿಚ್ಚ ಸುದೀಪ್

  ನಿರೂಪಕ ಮನೀಶ್ ಜತೆ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್

  ಗಾಯಕಿ ಉಷಾ ಜತೆ ಸಚಿನ್ ತೆಂಡೂಲ್ಕರ್

  ಗಾಯಕಿ ಉಷಾ ಜತೆ ಸಚಿನ್ ತೆಂಡೂಲ್ಕರ್

  ಖ್ಯಾತ ಪಾಪ್ ಗಾಯಕಿ ಉಷಾ ಉತ್ತುಪ್ ಜತೆ ಸಚಿನ್ ತೆಂಡೂಲ್ಕರ್

  ಕಾಲಿವುಡ್, ಟಾಲಿವುಡ್ ಗಣ್ಯರು

  ಕಾಲಿವುಡ್, ಟಾಲಿವುಡ್ ಗಣ್ಯರು

  ನಟ ಶರತ್ ಕುಮಾರ್, ದಗ್ಗುಬಾಟಿ ವೆಂಕಟೇಶ್ ಸೇರಿದಂತೆ ಕಾಲಿವುಡ್, ಟಾಲಿವುಡ್ ಗಣ್ಯರು ಆಗಮಿಸಿದ್ದರು

  ಸಚಿನ್ ಜತೆ ಸಿಸಿಎಲ್ ಸ್ಟಾರ್ ಗಳು

  ಸಚಿನ್ ಜತೆ ಸಿಸಿಎಲ್ ಸ್ಟಾರ್ ಗಳು

  ಕಳೆದ ಡಿಸೆಂಬರ್ ನಲ್ಲಿ ಅನಾವರಣಗೊಂಡ ಸಿಸಿಎಲ್ ಟೂರ್ನಿಯ ಚಿತ್ರಗಳು

  English summary
  Kapil Sharma To Host CCL 2014: Here are some of the photos Kapil Tweeted a few hours ago and also the photos of the launch event which took place in the presence of Sachin Tendulkar, Dhanush, Sudeep, Venkatesh, Ritesh Deshmukh and many others.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X