For Quick Alerts
  ALLOW NOTIFICATIONS  
  For Daily Alerts

  ಪಶ್ಚಿಮ ಘಟ್ಟದ ಕರಾಳ ಕತೆ ಆಧರಿಸಿದ 'ಕಾರ್ಗಲ್ ನೈಟ್ಸ್' ಟ್ರೇಲರ್ ಬಿಡುಗಡೆ

  |

  ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟವಾದ ಕಾಡುಗಳ ನೆರಳಲ್ಲಿ ಬೆಳೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧಾರಿಸಿ "ಕಾರ್ಗಲ್ ನೈಟ್ಸ್" ಚಿತ್ರದ ಮೂಲಕ ತೆರೆ ಮೇಲೆ ತರುತ್ತಿದ್ದಾರೆ ನಿರ್ದೇಶಕ ದೇವರಾಜ್ ಪೂಜಾರಿ ಮತ್ತು ತಂಡ.

  ಚಿತ್ರದಲ್ಲಿ ಪಶ್ಚಿಮ ಘಟ್ಟದ ಭೂಗತ ಲೋಕವನ್ನು ಅರುಣ್ ಎ ಎನ್ ಆರ್ ಮತ್ತು ನಿರ್ದೇಶಕ ದೇವರಾಜ್ ಪೂಜಾರಿ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ.

  ಹರ್ಶಿಲ್ ಕೌಶಿಕ್ ಈ ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ರಾಗ್ ಯು ಆರ್ ಎಸ್ , ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಈ ಚಿತ್ರದ ಮೂಲಕ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ.

  90 ರ ದಶಕದ ಕಾಲದ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ನಿಗೂಢವಾಗಿ ಸಾಗುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯ ವಾತಾವರಣವನ್ನು ಮಲ್ಲಿಕಾರ್ಜುನ್ ಮತ್ತು ಅವರ ತಂಡ ಅದ್ಭುತವಾಗಿ ಮರುಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರವನ್ನು ರೋಷನ್ ಲೋಕೇಶ್ ಸಂಕಲಿಸಿದ್ದು ಸುರೇಂದ್ರನಾಥ್ ಬಿ ಆರ್ ಸಂಗೀತವನ್ನು ರಚಿಸಿದ್ದಾರೆ .

  ಚಿತ್ರದ ಕತೆಯನ್ನು ಸಾಗರ ತಾಲ್ಲೂಕ್ ಹಾಗೂ ಕಾರ್ಗಲ್ ನಲ್ಲಿ ಕಳ್ಳಸಾಗಾಣಿಕೆಯ ಸಾಕ್ಷ್ಯಗಳನ್ನು ದಾಖಲಿಸಿ ರಚಿಸಿದ್ದಾರೆ.

  ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರದ ಟ್ರೈಲರ್ A2 music YouTube ಚಾನಲ್ ನಲ್ಲಿ ಇಂದು ಬಿಡುಗಡೆಯಾಗಿದೆ.

  ಕೆಲವು ದಶಕಗಳ ಹಿಂದೆ ಮಲೆನಾಡು ಭಾಗದಲ್ಲಿ ನಡೆದಿದ್ದ ಗಂಧದ ಕಳ್ಳಸಾಗಣೆ ಅದರ ಸುತ್ತಲ ಮಾಫಿಯಾ, ರಕ್ತಪಾತದ ಕತೆ 'ಕಾರ್ಗಲ್‌ ನೈಟ್ಸ್' ಸಿನಿಮಾದಲ್ಲಿದೆ. ಎರಡು ಬಣಗಳ ನಡುವಿನ ಭೀಕರ ದ್ವೇಷದ ಕತೆಯೂ ಸಿನಿಮಾದಲ್ಲಿದೆ ಎಂಬುದು ಇದೀಗ ಬಿಡುಗಡೆ ಆಗಿರುವ ಟ್ರೇಲರ್‌ನಿಂದ ತಿಳಿದು ಬರುತ್ತಿದೆ.

  ಟ್ರೇಲರ್‌ನಲ್ಲಿ ಖಡಕ್ ಸಂಭಾಷಣೆ, ರಕ್ತ, ಹಿಂಸಾಚಾರ ವಿಜೃಂಭಿಸುತ್ತಿದೆ. ಟ್ರೇಲರ್ ಕುತೂಹಲ ಮೂಡಿಸುವಂತಿದೆ. ಈಗ ಸಿನಿಮಾದ ಕತೆಯಲ್ಲಿರುವ ಒಂದು ಗ್ಯಾಂಗ್‌ನ ಕುರಿತಾದ ಟ್ರೇಲರ್ ಅಷ್ಟನ್ನೆ ಬಿಡುಗಡೆ ಮಾಡಲಾಗಿದ್ದು, ಮತ್ತೊಂದು ಗ್ಯಾಂಗ್‌ನ ಟ್ರೇಲರ್‌ ಅನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

  English summary
  Kargal nights movie trailer released. Movie is based on western ghats sandalwood smuggling and rivalry between smuggling gangs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X